ಬೀದಿ ಬದಿ ವ್ಯಾಪಾರಿಗಳಿಗೆ 8ನೇ ದಿನಕ್ಕೆ ಕಾಲಿಟ್ಟ ಲಸಿಕೆ ಹಾಕುವ ಕಾರ್ಯ, ಇದುವರೆಗೂ 1618 ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ಹಾಕಿದ್ದು ಈ ದಿನ 200 ಜನರಿಗೆ ಕೊವೀಡ್ ಶಿಲ್ಡ್ ಲಸಿಕೆ ನೀಡಲಾಗುತ್ತದೆ. ಶಿವಮೊಗ್ಗ ಬಿ.ಹೆಚ್. ರಸ್ತೆಯ ಹಕ್ಕಿಪಿಕ್ಕಿ ಕ್ಯಾಂಪ್ ಅಂಬೇಡ್ಕರ್ ಕಾಲೋನಿಯಲ್ಲಿ ಸುಮಾರು 96 ಜನರು ಆತ್ಮ ನೀರ್ಭರ್ ಯೋಜನೆ ಅಡಿ ಸಾಲ ಪಡೆದಿದ್ದು. ಕೊವಿಲ್ಡ್ ಲಸಿಕೆ ಪಡೆಯುವ ಪಟ್ಟಿಯಲ್ಲಿ ಇವರ ಹೆಸರಗಳಿದ್ದು ಇವರು ಲಸಿಕೆ ಪಡೆಯಲು ಹೆದರುತ್ತಿರುವರು.

ನಾವು ಲಸಿಕೆ ಪಡೆದರೆ 2 ವರ್ಷದಲ್ಲಿ ಸಾಯುತ್ತಾರಂತೆ , ಎಂಬ ಭಯದಿಂದ ಲಸಿಕೆ ಪಡೆಯಲು ಹಿಂದೆ ಉಳಿದ ಅಲೆಮಾರಿ ಹಕ್ಕಿಪಿಕ್ಕಿ ಅಷ್ಟು ಜನರಿಗೆ ಧೈರ್ಯ ತುಂಬಿ ಲಸಿಕೆ ಹಾಕಿಸುವಲ್ಲಿ ಯಶಸ್ವಿಯಾದ ಜಿಲ್ಲಾಧ್ಯಕ್ಷರು. ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ, ಟಿವಿಸಿ ಸದಸ್ಯರಾದ ನಾರಾಯಣ MS, ವಿನಾಯಕ, ಶೇಷಯ್ಯ, ಪಾಲಿಕೆ ಅಧಿಕಾರಿ CAOರಾದ ಅನುಪಮಾ, COಗಳಾದ ರತ್ನಾಕರ್, ಗೀತಾ, ರೇಣುಕಾ, ಕೌಶಲ್ಯ ಅಭಿವೃದ್ಧಿ ಇಲಾಖೆಯ ಕಾಶಿ ಸಮುದಾಯ ಆರೋಗ್ಯ ಅಧಿಕಾರಿಗಳಾದ ಯಶ್ವಂತ್ MB, ರಾಕೇಶ್ ಕುಮಾರ್J, ಪಲ್ಲವಿ NB, ಶಿಲ್ಪಾ S, ಪಾಲಿಕೆ ಸಿಬ್ಬಂದಿ ವರ್ಗದವರು ಮತ್ತು ಬೀದಿ ಬದಿ ವ್ಯಾಪಾರಿಗಳು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153