ಚಿಕ್ಕದಾನವಂದಿ ಗ್ರಾಮದಲ್ಲಿ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆಶ್ರಯದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದಲ್ಲಿ ವಿಶೇಷ ಅತಿಥಿಯಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಉಪ ಅಧೀಕ್ಷಕರಾದ ಶ್ರೀ ಪ್ರಶಾಂತ ಮುನೋಳಿ ಅವರು ಆಗಮಿಸಿ ಮಾತನಾಡಿದರು.

ಅವರು ತಮ್ಮ ಭಾಷಣದಲ್ಲಿ, ” ಇಂತಹ ಶಿಬಿರಗಳ ಉದ್ದೇಶ ಸದೃಡ ಯುವ ಸಮುದಾಯವನ್ನು ಸೃಷ್ಟಿಸುವುದಾಗಿದೆ. ಇಂದಿನ ಯುವಕರ ಮನೋಭಾವದಲ್ಲಿ ಬದಲಾವಣೆಯಾದರೆ ಮಾತ್ರ ಸಾಮಾಜಿಕ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ. ಅರಿವಿದ್ದು ಅಪರಾಧಗಳನ್ನು ಮಾಡುವುದು ಒಂದು ಬಗೆಯಾದರೆ ಅರಿವಿಲ್ಲದೆ ಮಾಡುವ ಅಪರಾಧವು ಇನ್ನೊಂದು ಬಗೆಯಾಗಿದೆ. ಅಪರಾಧಗಳ ಬಗ್ಗೆ ಅರಿವು ಮತ್ತು ಜಾಗೃತಿ ಇದ್ದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ಸಾಧ್ಯವಾಗುತ್ತದೆ. ನಮ್ಮ ಯುವ ಸಮುದಾಯವು ರಚನಾತ್ಮಕ ಕಾರ್ಯಗಳಲ್ಲಿ ತೊಡಗುವುದರ ಮೂಲಕ ತಮ್ಮ ಮನಸ್ಸು ಮತ್ತು ಬುದ್ಧಿಯನ್ನು ಹತೋಟಿಯಲ್ಲಿಟ್ಟುಕೊಂಡು ಉತ್ಕೃಷ್ಟ ಕಾರ್ಯಗಳನ್ನು ಮಾಡಬೇಕಾಗಿದೆ.

ಯುವಕರಲ್ಲಿ ಸರಿ-ತಪ್ಪುಗಳ ವಿವೇಕ ನೀಡುವುದೇ ಶಿಕ್ಷಣ” ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸಹಾಯಕ ಗವರ್ನರ್ ರೋಟರಿ ಪೂರ್ವ ಶಿವಮೊಗ್ಗದ ಶ್ರೀ ಜಿ. ವಿಜಯ್ ಕುಮಾರ್ ಅವರು ತಮ್ಮ ಭಾವ ಪೂರ್ಣವಾದ ಹಾಡು ಮತ್ತು ಹಾಸ್ಯದಿಂದ ವಿದ್ಯಾರ್ಥಿಗಳಿಗೆ ಮುದವನ್ನು ನೀಡಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಬಿಂದು ವಿಜಯಕುಮಾರ್ ಶ್ರೀ ಮಲ್ಲಿಕಾರ್ಜುನ ಕಾನೂರು ಉಪಸ್ಥಿತರಿದ್ದರು. ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕರಾದ ಶ್ರೀ ಲವ ಜಿ. ಆರ್. ಅವರು ವಿದ್ಯಾರ್ಥಿಗಳಿಗೆ ಅಭಿನಯ ತರಬೇತಿ ನೀಡಿದರು.

ಕಾರ್ಯಕ್ರಮ ಅಧಿಕಾರಿಗಳಾದ ಡಾ ಶುಭಾ ಮರವಂತೆ ಹಾಗೂ ಶ್ರೀ ಪರಶುರಾಮ ಎಂ, ಉಪನ್ಯಾಸಕರಾದ ಕುಮಾರಿ ಪ್ರತಿಮಾ ಶ್ರೀ ಸುನಿಲ ಮಂಜುನಾಥಯ್ಯ ಶ್ರೀ ಕಿಶನ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.

ವರದಿ ಮಂಜುನಾಥ್ ಶೆಟ್ಟಿ…