ಶಿವಮೊಗ್ಗದ ಮುಪ್ಪಾನೆ ವನ್ಯಜೀವಿ ಆಭಯಾರಣ್ಯದ ಅತಿಥಿಗೃಹದಲ್ಲಿ, ಕರ್ನಾಟಕ ರಾಜ್ಯ ಪತ್ರಾಂಕಿತ ಫಾರ್ಮಸಿ ಅಧಿಕಾರಿ ಮಿತ್ರವೃಂದದಿಂದ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘಕ್ಕೆ ಚುನಾಯಿತರಾದ ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಶ್ರೀ ಪ್ರಭಾಕರ್ ಅವರು ಇಲಾಖೆಯಲ್ಲಿ ಫಾರ್ಮಸಿ ಅಧಿಕಾರಿಗಳ ಪಾತ್ರವು ತುಂಬಾ ಪ್ರಮುಖವಾಗಿದ್ದು,ದೈನಂದಿನ ಕರ್ತವ್ಯದಲ್ಲಿ ವೃತ್ತಿ ನೈಪುಣ್ಯತೆಯನ್ನು ಅಳವಡಿಸಿಕೊಂಡು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ವೃತ್ತಿಗೌರವವನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.

ಅಲ್ಲದೇ,ರಾಜ್ಯದ ಅನೇಕ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇರುವ ಪತ್ರಾಂಕಿತ ಎ ಮತ್ತು ಬಿ ಫಾರ್ಮಸಿ ಅಧಿಕಾರಿಗಳ ಹುದ್ದೆಗಳನ್ನು ಅವಶ್ಯವಿರುವ ಇತರೆ ಆರೋಗ್ಯ ಸಂಸ್ಥೆಗಳಿಗೆ ಮರು ಹೊಂದಾಣಿಕೆ ಮಾಡಿಸಿಕೊಡಲು ಪ್ರಯತ್ನಿಸಲಾಗುವು,

ಅದಲ್ಲದೇ,ಪತ್ರಾಂಕಿತ ಎ ಮತ್ತು ಬಿ ಅಧಿಕಾರಿಗಳಿಗೆ ಆಡಳಿತಾತ್ಮಕ ಅನುಭವಕ್ಕಾಗಿ ಮೈಸೂರಿನ ಆಡಳಿತಾತ್ಮಕ ತರಬೇತಿ ಸಂಸ್ಥೆಯಲ್ಲಿ ಶೀಘ್ರವೇ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸುವುದಾಗಿಯೂ ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಶೈಲ ಮೂರ್ತಿಯವರು ರಾಜ್ಯದಲ್ಲಿ 19 ಡೈರೆಕ್ಟರ್ ಆಫ್ ಫಾರ್ಮಸಿ ಹಾಗೂ ,34 ಡೆಪ್ಯೂಟಿ ಚೀಫ್ ಫಾರ್ಮಸಿ ಅಧಿಕಾರಿಗಳ ಹುದ್ದೆಗಳು ಖಾಲಿಯಿದ್ದು ಆ ಹುದ್ದೆಗಳಿಗೆ ನಿರ್ದಿಷ್ಟ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ರೂಪಿಸಿ,ನಮ್ಮಲ್ಲಿರುವ ಉನ್ನತ ವಿದ್ಯಾಭ್ಯಾಸ ಹೊಂದಿದ ಅನುಭವಿ ವೃತ್ತಿ ಬಾಂಧವರನ್ನು ನೇಮಿಸುವ ಮೂಲಕ ಇಲಾಖೆಯ ಉನ್ನತೀಕರಣದಲ್ಲಿ ನಮ್ಮ ಸೇವೆಯನ್ನು ಬಳಸಿಕೊಳ್ಳಲು ಅನುವು ಮಾಡಿಸಿಕೊಡುವಂತೆ ಸಂಘದ ರಾಜ್ಯದ್ಯಕ್ಷರಲ್ಲಿ ಮನವಿ ಮಾಡಿದರು.

ಸಮಾರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ರೀ ರವಿಕುಮಾರ್, ಕೋಶಾದ್ಯಕ್ಷರಾದ ಶ್ರೀ ಕೃಷ್ಣಾನಂದಂ ಅವರನ್ನು ಅಭಿನಂದಿಸಲಾಯಿತು.

ವಿವಿಧ ಜಿಲ್ಲೆಗಳ ಉಪ ಮುಖ್ಯ ಫಾರ್ಮಸಿ ಅಧಿಕಾರಿಗಳಾದ ಶ್ರೀಸಿದ್ಧಲಿಂಗೇಶ್ವರ ಕದಂಪೂರ್,ಶ್ರೀ ಮಹೇಶ್, ಶ್ರೀ ವಿರೂಪಾಕ್ಷಪ್ಪ ಹರ್ಲಾಪೂರ್,ಶ್ರೀ ಜಯಪ್ರಕಾಶ್,ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಆಫ್ ಫಾರ್ಮಸಿ ಶ್ರೀ ಗೋಪಿನಾಥ್ ಸಮಾರಂಭದಲ್ಲಿ ಹಾಜರಿದ್ದರು.ಅಲ್ಲದೇ,ಸಂಘದ ಹಿರಿಯ ಉಪಾದ್ಯಕ್ಷರಾದ ಶ್ರೀ ವೈ ಮೋಹನ್,ಜಂಟಿಕಾರ್ಯದರ್ಶಿಗಳಾದ ಶ್ರೀ ಶಿವಕುಮಾರ್,ಶ್ರೀ ರಾಚಯ್ಯ ಹಿರೇಮಠ,ಶ್ರೀ ಮನೋಜ್ ಹಾಗೂ ಶ್ರೀ ಶಂಕರ್ ಅವರೂ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಮಹಿಳಾ ಫಾರ್ಮಸಿ ಅಧಿಕಾರಿಗಳಾದ ಶ್ರೀಮತಿ ಗೀತಾ,ಶ್ರೀಮತಿ ಕಮಲಾ,ಶ್ರೀಮತಿ ಪುಷ್ಪಾ,ಶ್ರೀಮತಿ ಆಶಾರವರನ್ನು ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯದ ಸಮಸ್ತ ಮಹಿಳಾ ಫಾರ್ಮಸಿ ಅಧಿಕಾರಿಗಳ ರವಾಗಿ ಸನ್ಮಾನಿಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ…