ಶಿವಮೊಗ್ಗ: ಉತ್ತಿಷ್ಠ ಭಾರತ ಮಲೆನಾಡು ಮತ್ತು ಸಿಹಿಮೊಗ್ಗೆ ಕ್ರಿಕೆಟ್ ಅಕಾಡೆಮಿ ಇವರ ಸಂಯುಕ್ತಾಶ್ರಯದಲ್ಲಿ ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಚಂದನ ಪಾರ್ಕ್ ಹತ್ತಿರ ಏಪ್ರಿಲ್ ೧ರಿಂದ ೩೦ರವರೆಗೆ ಬೆಳಿಗ್ಗೆ ೬ರಿಂದ ಸಂಜೆ ೬.೩೦ರವರೆಗೆ ಮತ್ತು ಫ್ಲೆಡ್ ಲೈಟ್‌ನಲ್ಲಿ ಸಂಜೆ ೬ರಿಂದ ೮.೩೦ರವರೆಗೆ ವಿದ್ಯಾರ್ಥಿಗಳಿಗಾಗಿ ವಿಶೇಷ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಕೋಚ್ ರಘುವೀರ್ ಕ್ರಿಕೆಟ್‌ನಲ್ಲಿ ಒನ್‌ಟು ಒನ್ ಕೋಚಿಂಗ್, ಶಿವಮೊಗ್ಗ ರಗ್ಬಿ ಅಸೋಸಿಯೇಷನ್ ಕೋಚ್ ವಿನಯ್‌ಕುಮಾರ್ ಹೆಚ್.ಬಿ. ಮತ್ತು ಶುಬಾಂಗ್ ಓಲೇಕಾರ್ ಜಿ. ಇವರು ರಗ್ಬಿ, ಫ್ಲಾಗ್ ಅಂಡ್ ಅಮೇರಿಕನ್ ಫುಟ್‌ಬಾಲ್ ಹಾಗೂ ಶಿವಮೊಗ್ಗ ಫ್ಲಾಗ್ ಮತ್ತು ಅಮೇರಿಕನ್ ಫುಟ್‌ಬಾಲ್ ಅಸೋಸಿಯೇಷನ್‌ನ ಕೋಚ್ ವಿನಯಕುಮಾರ್ ಹೆಚ್.ಬಿ. ಮತ್ತು ರಕ್ಷಿತಾ ಕೆ.ಎಂ. ಫುಟ್ಬಾಲ್, ಶಿವಪ್ಪನಾಯಕ ಕಬಡ್ಡಿ ಕ್ಲಬ್‌ನ ಕೋಚ್ ಬಸವರಾಜ್ ಎಂ.ಬಿ. ಮತ್ತು ಜಗದೀಶ್ ಮಾಲಗುಂದ್, ಯೋಗಾಸನದಲ್ಲಿ ಡಾ. ಸಂಜಯ್ ತರಬೇತಿ ನೀಡಲಿದ್ದಾರೆ.
ಇದರೊಂದಿಗೆ ಪರಿಸರ ಚಟುವಟಿಕೆ ಕಾರ್ಯಗಳಾದ ಬೀಜದುಂಡೆ ತಯಾರಿ, ಗಿಡಗಳ ಆರೈಕೆ, ಜಲ ಸಂರಕ್ಷಣೆ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ತರಬೇತಿ, ದೇಶಭಕ್ತಿ ಗಾಯನ ಕಲಿಸಿಕೊಡಲಾಗುವುದು. ಅಲ್ಲದೆ ಫ್ಲಡ್ ಲೈಟ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪ್ರಾಕ್ಟೀಸ್ ಪಿಚ್‌ನಲ್ಲಿ ತರಬೇತಿ ನೀಡಲಾಗುವುದು. ಜಾಗಿಂಗ್‌ಗಾಗಿ ಸ್ಯಾಂಡ್ ಪಾತ್ ಸಹ ನಿರ್ಮಿಸಲಾಗಿದೆ. ಸಂಸ್ಥೆಯು ಕಳೆದ ೧೧ ವರ್ಷಗಳಿಂದ ಬೇಸಿಗೆ ಶಿಬಿರ ನಡೆಸುತ್ತಿದ್ದು, ಮಾಹಿತಿಗಾಗಿ ಲೋಕೇಶ್, ಮೊ:೯೯೦೧೦೧೫೦೫೩, ಸ್ನೇಹಾ, ಮೊ:೯೬೨೦೧೫೪೭೫೩ಗೆ ಸಂಪರ್ಕಿಸಬಹುದು.