ಶಿವಮೊಗ್ಗ: ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳಲ್ಲಿ ಅಂತರಾಷ್ಟಿçÃಯ ಸಂಸ್ಥೆಯಾದ ರೋಟರಿಯು ಮುಂಚೂಣಿಯಲ್ಲಿದೆ ಎಂದು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಎಂ.ಜಿ.ರಾಮಚಂದ್ರಮೂರ್ತಿ ಹೇಳಿದರು.
ರಾಜೇಂದ್ರನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ಜಿಲ್ಲಾದ್ಯಂತ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆರೋಗ್ಯ ಶಿಬಿರಗಳು, ಪರಿಸರ ಸಂರಕ್ಷಣೆ, ಶಾಲಾ ಕಾಲೇಜುಗಳ ಅಭಿವೃದ್ಧಿ, ನಗರದ ಸ್ವಚ್ಛತೆ ಕಾರ್ಯಕ್ರಮ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎರಡೂವರೆ ಸಾವಿರ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ತಿಳಿಸಿದರು.
ಬೀರನಕೆರೆ ಸರ್ಕಾರಿ ಶಾಲೆ ಹಾಗೂ ಕೊಮ್ಮನಾಳು ಸರ್ಕಾರಿ ಶಾಲೆ ಅಭಿವೃದ್ಧಿಯನ್ನು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿAದ ಕೈಗೊಂಡಿರುವುದು ಒಳ್ಳೆಯ ಕೆಲಸ. ರೋಟರಿ ಶಿವಮೊಗ್ಗ ಪೂರ್ವ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದಿAದ ಮಾದರಿ ಶಾಲೆಯಾಗಿ ರೂಪಿಸುವ ಕಾರ್ಯ ಆಗುತ್ತಿದೆ. ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ನಲಿಕಲಿ ಟೇಬಲ್ ಹಾಗೂ ಹಸಿ ಕಸ ಸಂರಕ್ಷಣೆ ಮಾಡಲು ಪೈಪ್ ಕಾಂಪೋಸ್ಟ್ ಅಳವಡಿಸಲಾಗಿರುವುದು ಉತ್ತಮ ಕಾರ್ಯ ಎಂದರು.
ಕೊಮ್ಮನಾಳು ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಿವಮೊಗ್ಗ ಪೂರ್ವ ಸಂಸ್ಥೆಯಿAದ ಮಾಡಿಸಿಕೊಟ್ಟ ಧ್ವಜಸ್ತಂಭವನ್ನು ಉದ್ಘಾಟಿಸಿದರು. ಹಸಿಕಸ ಸಂರಕ್ಷಣೆ ಪೈಪ್ ಕಾಂಪೋಸ್ಟ್ ಅನ್ನು ಶಾಲೆಯ ಆವರಣದಲ್ಲಿ ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಎರಡು ಸರ್ಕಾರಿ ಶಾಲೆಗಳ ಆವರಣದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುತ್ತಿರುವುದು ತುಂಬಾ ಸಂತೋಷವಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮ ಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಡೆಸಲು ರೋಟರಿ ಸಂಸ್ಥೆ ಸದಾ ಸಿದ್ಧವಿದೆ ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ ಹಲವಾರು ಕಾರ್ಯಕ್ರಮಗಳು ಹಾಗೂ ಜಿಲ್ಲಾ ಯೋಜನೆಯಡಿ ಮಾಡಿದ ಕಾಮಗಾರಿಗಳನ್ನು ಪರಿಶೀಲಿಸಿ ತುಂಬಾ ಸಂತೋಷವಾಗಿದೆ. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಮಂಜುನಾಥ್ ಕದಂ ಹಾಗೂ ಕಾರ್ಯದರ್ಶಿ ಸತೀಶ್‌ಚಂದ್ರ ಅವರಿಗೆ ಅಭಿನಂದಿಸಿದರು.
ರೋಟರಿ ಸಂಸ್ಥೆಯಲ್ಲಿ ಸದಸ್ಯರುಗಳನ್ನು ಒಗ್ಗೂಡಿಸಿಕೊಂಡು ಸಂಸ್ಥೆಯಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಕಾರ್ಯರೂಪಕ್ಕೆ ತರುವುದು ಅತಿ ಮುಖ್ಯವಾಗಿರುತ್ತದೆ. ಸಮಾಜಸೇವೆ ಮನೋಭಾವವುಳ್ಳ ಎಲ್ಲಾ ವ್ಯಕ್ತಿಗಳು ರೋಟರಿ ಸಂಸ್ಥೆಗೆ ಸೇರಿ ಸೇವಾ ಕಾರ್ಯಗಳನ್ನು ಮಾಡಬೇಕು. ಅಧ್ಯಕ್ಷರು ಮತ್ತು ಕಾರ್ಯದರ್ಶಿ, ಎಲ್ಲಾ ರೋಟರಿ ಸದಸ್ಯರಿಗೆ ಜವಾಬ್ದಾರಿ ಇರುತ್ತದೆ ಎಂದು ಹೇಳಿದರು.
ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಮಂಜುನಾಥ್ ಕದಂ ಮಾತನಾಡಿ, ಪಲ್ಸ್ ಪೊಲಿಯೋ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಕೆರೆ ಅಭಿವೃದ್ಧಿ, ರಕ್ತದಾನ ಶಿಬಿರ, ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ರೋಟರಿ ಸಹಾಯಕ ಗವರ್ನರ್ ಎಲ್.ಟಿ.ತಿಮ್ಮಪ್ಪ, ಜೋನಲ್ ಲೆಫ್ಟಿನೆಂಟ್ ಗುರುರಾಜ್, ಕಾರ್ಯದರ್ಶಿ ಸತೀಶ್ ಚಂದ್ರ, ಜಿ.ವಿಜಯ್ ಕುಮಾರ್, ವಸಂತ್ ಹೋಬಳಿದಾರ್, ಸುರೇಖಾ ರಾಮಚಂದ್ರಮೂರ್ತಿ, ಮಂಜುನಾಥ್ ರಾವ್, ಕಡಿದಾಳ್ ಗೋಪಾಲ್, ರೋಟರಿ ಸಂಸ್ಥೆಯ ಸದಸ್ಯರು ಹಾಗೂ ಗಣ್ಯರು ಹಾಜರಿದ್ದರು.