ಶಿವಮೊಗ್ಗ: ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಆಕಾಶ್ ಮತ್ತು ಭೈಜೂಸ್ ಕೇಂದ್ರ ನಗರದಲ್ಲಿ ತರಬೇತಿ ಕೇಂದ್ರವನ್ನು ಆರಂಭಿಸಿದೆ ಎಂದು ಕೇಂದ್ರದ ಪ್ರಾದೇಶಿಕ ಕಾರ್ಯಾಚರಣೆ ಮುಖ್ಯಸ್ಥ ಅರವಿಂದ್ ಕುಮಾರ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕಾಶ್ ಮತ್ತು ಭೈಜೂಸ್ ಕೇಂದ್ರ
ಈಗಾಗಲೇ 24 ರಾಜ್ಯಗಳಲ್ಲಿ 250ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದ್ದು, ಪ್ರತಿ ವರ್ಷ 2.75 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ.
ಶಿವಮೊಗ್ಗದಲ್ಲಿ ಇದರ ಪ್ರಥಮ ತರಗತಿ ಈಗ ಪ್ರಾರಂಭವಾಗುತ್ತಿದೆ ಎಂದರು.

ಬಾಲರಾಜ್ ಅರಸ್ ರಸ್ತೆಯ ಜೋಯಲ್ಲುಕ್ಕಾಸ್ ಕಟ್ಟಡದ ಮೇಲ್ಭಾಗದಲ್ಲಿ ಕೇಂದ್ರವಿದ್ದು,
ಇಲ್ಲಿ 5 ತರಗತಿ ಕೊಠಡಿಗಳಿವೆ. 650ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅವಕಾಶವಿದೆ
ಎಂದರು.

ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ
ವಿದ್ಯಾರ್ಥಿಗಳಿಗೆ ಈ ಕೋರ್ಸ್ ಉಪಯೋಗವಾಗಲಿದೆ. ಅದಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಫೌಂಡೇಷನ್ ಮಟ್ಟದ ತರಬೇತಿ ಸಹ ನೀಡಲಾಗುವುದು. ನಮ್ಮಲ್ಲಿ ನುರಿತ ತರಬೇತುದಾರರಿದ್ದಾರೆ. ಗುಣಮಟ್ಟದ ಶಿಕ್ಷಣ ಒದಗಿಸಲಾಗುವುದು. ಇದರ ಪ್ರಯೋಜನವನ್ನು
ನಗರದ ವಿದ್ಯಾರ್ಥಿಗಳು ಪಡೆಯಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಕೇಂದ್ರದ ಮುಖ್ಯಸ್ಥ ಅಶೋಕ್ ಶಂಕರಪ್ಪ, ಸೇಲ್ಸ್ ಗ್ರೂಪ್ನ ಮುಖ್ಯಸ್ಥ ಪ್ರೇಮ್ ಚಂದ್ರ ರಾಯ್, ಪ್ರಮುಖರಾದ ಪ್ರಮೋದ್ ಕುಮಾರ್,
ವಿಶ್ವನಾಥ್, ಕುಮಾರ್ ,ಕಲಂದರ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…