ತುಮಕೂರು ನ್ಯೂಸ್…

ತ್ರಿವಿಧ ದಾಸೋಹಗಳ ಪುಣ್ಯಭೂಮಿ, ಸರ್ವಧರ್ಮಗಳ ಶಿಕ್ಷು ಗಳಿಗೆ ಜ್ಞಾನ , ಹಸಿವು ತಣಿಸಿ, ಆಸರೆಯನ್ನು ನೀಡಿ ಮನುಕುಲಕ್ಕೆ ಮಹಾನ್ ಮಾನವತಾವಾದಿ ಬಸವಣ್ಣನವರ ತತ್ವವನ್ನು ಸಾರಿದ ಪರಮಪೂಜ್ಯ ಶಿವೈಕ್ಯ ಶ್ರೀಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳ 115ನೇ ಪುಣ್ಯ ಜಯಂತೋತ್ಸವದ ನಿಮಿತ್ತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀ ಷಡಕ್ಷರಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಸಹಯೋಗದಲ್ಲಿ ಇಂದು ತುಮಕೂರಿನಲ್ಲಿ ಜಯಂತೋತ್ಸವಕ್ಕೆ ಆಗಮಿಸಿದ ಭಕ್ತಸಮೂಹಕ್ಕೆ ಫಲಹಾರ, ಮಜ್ಜಿಗೆ, ಶುದ್ಧ ಕುಡಿಯುವ ನೀರನ್ನು ವಿತರಿಸುವ ಕಾರ್ಯಕ್ರಮ ವನ್ನು ರಾಜ್ಯಾಧ್ಯಕ್ಷ ಶ್ರೀ ಸಿಎಸ್ ಷಡಾಕ್ಷರಿಯವರು ಚಾಲನೆ ನೀಡಿದರು.

ಅಪಾರ ಭಕ್ತ ಸಮೂಹ ಈ ಸೇವೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಮಯದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಉಪಾಧ್ಯಕ್ಷ ಮೋಹನ್ ಕುಮಾರ್ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷ ವಿ ಪ್ರಭಾಕರ್, ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನರಸಿಂಹರಾಜು, ತುಮಕೂರು ಜಿಲ್ಲಾ ಸರ್ಕಾರಿ ಪಾರ್ಮಸಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಗಟ್ಟಿ ಗಂಗಾಧರ್, ರಾಜ್ಯ ಫಾರ್ಮಸಿ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಸ್ ಎಂ ಮತ್ತಿತರ ಪ್ರಮುಖ ಪದಾಧಿಕಾರಿಗಳು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…