ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಬೆಂಗಳೂರು, ಇವರ ವತಿಯಿಂದ ಇಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪದ್ಮಶ್ರೀ ಎಚ್ಆರ್ ಕೇಶವಮೂರ್ತಿ ಹೊಸಹಳ್ಳಿ ಇವರನ್ನು ಅಭಿನಂದಿಸಿ ಗೌರವಿಸಿ ಆಶೀರ್ವಚನ ಪಡೆಯಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪದ್ಮಶ್ರೀ ಪುರಸ್ಕೃತರು ಗಮಕ ಕಲೆ ಅತ್ಯಂತ ಶ್ರೇಷ್ಠವಾಗಿದೆ ಇದನ್ನು ಪೋಷಿಸಿ ಉಳಿಸಬೇಕಾಗಿದೆ ಸರ್ಕಾರ ಈ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕಾಗಿದೆ ಗಮಕ ಕಲೆಯನ್ನು ಕಲಿಸುವವರಿಗೆ ಕನ್ನಡ ಸಾಂಸ್ಕೃತಿಕ ಇಲಾಖೆಯಿಂದ ಹೆಚ್ಚಿಗೆ ಗೌರವಧನವನ್ನು ನೀಡಿ ಗೌರವಿಸಬೇಕು ಎಂದರು ಸಾಕಷ್ಟು ಪ್ರತಿಭಾನ್ವಿತ ಯುವಜನತೆ ಕಲಿಯುವತ್ತ ಶ್ರದ್ಧೆ ತೋರಬೇಕು ಎಂದರು, ನಾನು ಬಾಲ್ಯದಲ್ಲಿ ಸಮಯ ಕಳೆಯಲಿ ಕ್ಕಾಗಿ ಕೆಲವು ಸ್ನೇಹಿತರೊಂದಿಗೆ ಆಯ್ಕೆಮಾಡಿಕೊಂಡ ಗಮಕವಾಚನ ನನ್ನ ಶ್ರದ್ಧೆ ಕಠಿಣ ಪರಿಶ್ರಮ ದಿಂದ ನನ್ನ ಜೀವನದ ಅವಿಭಾಜ್ಯ ಭಾಗವಾಗಿದೆ ನನ್ನ ಸ್ವಂತ ಖರ್ಚಿನಿಂದ ರಾಜ್ಯಾದ್ಯಂತ ಹಲವಾರು ಚಿಕ್ಕ-ಚಿಕ್ಕ ಶಾಲೆಗಳಿಂದ ಹಿಡಿದು ದೊಡ್ಡ ದೊಡ್ಡ ಸಮಾರಂಭದ ವರೆಗೂ ಗಮಕವಾಚನ ವನ್ನು ಮಾಡಿದ್ದೇನೆ ನನಗೆ ತೃಪ್ತಿ ತಂದಿದೆ ಆ ತೃಪ್ತಿಯೇ ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳು ರಾಷ್ಟ್ರಮಟ್ಟದ ಸಂಘ-ಸಂಸ್ಥೆಗಳ ಬಿರುದು ಸನ್ಮಾನಗಳಿಗೆ ಕಾರಣವಾಗಿದೆ ರಾಷ್ಟ್ರಮಟ್ಟದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಯಿಂದ ಪುರಸ್ಕೃತನಾಗಿ ರುವುದಕ್ಕೆ ಸಂತಸವಾಗಿದೆ ಎಂದು ಹೆಮ್ಮೆಯಿಂದ ನುಡಿದರು.

ಅಭಿನಂದಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ
ವಿ.ಪ್ರಭಾಕರ್ ಅವರು ಗ್ರಾಮೀಣ ಭಾಗದಲ್ಲಿ ಕುಮಾರವ್ಯಾಸ ಭಾರತದ ಕಾವ್ಯಗಳನ್ನು ಸಾರ್ವಜನಿಕರಿಗೆ ಅರ್ಥವಾಗುವ ರೀತಿಯಲ್ಲಿ ಸುಶ್ರಾವ್ಯವಾಗಿ ವಾಚನ ಮಾಡುತ್ತಾ ಅರ್ಥಗರ್ಭಿತವಾಗಿ ಅರ್ಥೈಸುತ್ತಾ ಸಾಧನೆ ಮಾಡಿದಂತಹ ಮಹಾನ್ ವೇರು ವ್ಯಕ್ತಿಯನ್ನು ಅಭಿನಂದಿಸುವ ಕ್ಷಣಕ್ಕಾಗಿ ನಾವು ಕೃತಾರ್ಥ ರಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಫಾರ್ಮಸಿ ಅಧಿಕಾರಿಗಳ ಸಂಘದ ಜಿಲ್ಲಾ ಕೋಶಾಧ್ಯಕ್ಷ ಹೆಚ್ ವಿ ಹರೀಶ್ ಹಿರಿಯ ಉಪಾಧ್ಯಕ್ಷರಾದ ವಿಜಯಕಾಂತ್, ರಮೇಶ್ ಹೆಗ್ಗಡೆ ,ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಆರ್ ಶಿವಕುಮಾರ್, ಡೆಪ್ಯೂಟಿ ಚೀಫ್ ಫಾರ್ಮಸಿ ಅಧಿಕಾರಿಗಳಾದ ಶಿವಶೈಲ ಮೂರ್ತಿ ಹಾಗೂ ಸಾವನ್ ಕುಮಾರ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…