ಶಿವಮೊಗ್ಗ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ 2021/22ನೇ ಸಾಲಿನ ಶಿಕ್ಷಣ ಇಲಾಖೆಯಿಂದ “ಸರ್ವೋತ್ತಮ ಸೇವಾ ಪ್ರಶಸ್ತಿ” ಪುರಸ್ಕೃತರಾದ ಮಾನ್ಯ ಶ್ರೀ ಪಿ.ನಾಗರಾಜ, ಕೆಇಎಸ್ ರವರಿಗೆ ಶಿವಮೊಗ್ಗ ನಗರದ, ಬಿ.ಹೆಚ್. ರಸ್ತೆಯ ಕರ್ನಾಟಕ ಸಂಘ ಪಕ್ಕದ ಮೈನ್ ಮಿಡ್ಲ್ ಸ್ಕೂಲ್ (ಸರ್ಕಾರಿ ಪ್ರಧಾನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ) ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಅಭಿನಂದನೆಗಳು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಶ್ರೀ ಚನ್ನವೀರಪ್ಪ ಗಾಮನಗಟ್ಟಿ ರವರು, ಒಂದರಿಂದ ಏಳರ ವರೆಗೆ ಕನ್ನಡ ಹಾಗೂ ಆರು ಮತ್ತು ಏಳನೇ ತರಗತಿಗೆ ಆಂಗ್ಲ ಮಾಧ್ಯಮಕ್ಕೆ ಈ ಶಾಲೆಗೆ ಅವಕಾಶವಿದೆ, ಕನ್ನಡ ಮಾಧ್ಯಮಕ್ಕೆ ಮಕ್ಕಳ ಸೇರಿಸುವಿಕೆ ಕಡಿಮೆಯಾಗಿದೆ,135 ವರ್ಷ ಇತಿಹಾಸ ವಿರುವ ಈ ಶಾಲೆಗೆ ಒಂದರಿಂದಲೇ ಕೆಪಿಎಸ್ ಅಡಿ ಆಂಗ್ಲ ಮಾಧ್ಯಮಕ್ಕೆ ಅವಕಾಶ ನೀಡಿ ಎಂದು ತಮಗೂ ಮನವಿ ಮಾಡಿಕೊಂಡಿರುತ್ತೇವೆ, ಹಾಗೆ ಸ್ಥಳೀಯ ಶಾಸಕರು, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಕೆ ಎಸ್ ಈಶ್ವರಪ್ಪ ರವರಿಗೂ ಮನವಿ ಮಾಡಲಾಗಿದೆ. ಮನವಿ ಸ್ವೀಕರಿಸಿದ ತಕ್ಷಣವೇ ಶಿಕ್ಷಣ ಸಚಿವರಿಗೆ ಪತ್ರವ ಬರೆದಿರುವರು, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಆಂಗ್ಲ ಮಾಧ್ಯಮಕ್ಕೆ ಅವಕಾಶ ನೀಡಲು ಪತ್ರವ ನೀಡಿರುವರು, ಹಾಗೂ ಈ ಸಾಲಿನಿಂದಲೇ ಸರ್ಕಾರದಿಂದ ಈ ಶಾಲೆಗೆ ಆಂಗ್ಲ ಮಾಧ್ಯಮಕ್ಕೆ ಅವಕಾಶ ನೀಡಲಾಗುವುದು ಎಂದು ನಮಗೂ ಹೇಳಿರುವರು.
ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಡಿ.ಎಸ್ ಅರುಣ್ ರವರಿಗೂ, ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಈ ಶಾಲೆಗೆ ಆಂಗ್ಲ ಮಾಧ್ಯಮಕ್ಕೆ ಅವಕಾಶ ಕಲ್ಪಿಸಲು ಮನವಿ ಮಾಡಲಾಯಿತು, ಅವರು ತಕ್ಷಣವೇ ಶಿಕ್ಷಣ ಸಚಿವರಿಗೆ ಪತ್ರವ ಬರೆದಿರುವರು ಹಾಗೂ ನಮಗೂ ಈ ಸಾಲಿನಿಂದಲೇ ಆಂಗ್ಲ ಮಾಧ್ಯಮಕ್ಕೆ ಸರ್ಕಾರ ದಿಂದ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿರುವರು.
ಹಳೇ ವಿದ್ಯಾರ್ಥಿಗಳು ಎಲ್ಲಾ ಸೇರಿ ಕೊಳಚೆ ಪ್ರದೇಶದ ಬಡಾವಣೆ, ಹಾಗೂ ಇತರೆ ಬಡಾವಣೆಗಳಿಗೆ ಶಾಲಾ ದಾಖಲಾತಿ ಆಂದೋಲನಕ್ಕೆ ಹೋದಾಗ 250ಕ್ಕೂ ಹೆಚ್ಚು ಬಡ ಮಕ್ಕಳ ಪೋಷಕರು ತಮ್ಮ ಮಕ್ಕಳ ಹೆಸರನ್ನು ಶಾಲೆಗೆ ಸೇರಲು ನೋಂದಾಯಿಸಿರುವರು, ಇಲಾಖೆಯ ಆದೇಶ ನೀಡಿದರೆ ಅದರಂತೆ ಪೋಷಕರಿಗೆ ತಿಳಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಇಓ ರವರು, ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಕೆ.ಎಸ್ ಈಶ್ವರಪ್ಪ ರವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಡಿ.ಎಸ್.ಅರುಣ್ ರವರು, ಈ ಶಾಲೆಗೆ ಆಂಗ್ಲ ಮಾಧ್ಯಮಕ್ಕೆ ಅವಕಾಶ ನೀಡಲು ತಿಳಿಸಿರುವರು, ಸರ್ಕಾರದ ಶಿಕ್ಷಣ ಇಲಾಖೆಯಿಂದ ನಮಗೆ ಇದುವರೆಗೂ ಆದೇಶ ಬಂದಿರುವುದಿಲ್ಲ, ಮೇ 15ರ ಒಳಗೆ ಬರಬಹುದು ಈಗ 6 ಮತ್ತು 7ನೇ ತರಗತಿಗೆ ಆಂಗ್ಲ ಮಾಧ್ಯಮಕ್ಕೆ ಅವಕಾಶ ವಿದೆ, ಅವರಿಗೆ ಆಂಗ್ಲ ಮಾಧ್ಯಮಕ್ಕೆ ಸೇರಿಸಿಕೋಳ್ಳಿ ಆಂಗ್ಲ ಮಾಧ್ಯಮಕ್ಕೆ ಪ್ರತೇಕ ಶಿಕ್ಷಕರ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಳೇ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾದ ಶ್ರೀ ಪರಶುರಾಮ, ಕಾರ್ಯದರ್ಶಿ ಶ್ರೀ ಮತಿ ಸವಿತಾ, ಸಹ ಕಾರ್ಯದರ್ಶಿ ಶ್ರೀ ವಿಶ್ವನಾಥ್ ಜೆ, ಖಜಾಂಚಿ ಶ್ರೀ ಪ್ರಕಾಶ್, ಸದಸ್ಯರಾದ ಶ್ರೀ ರಾಮು, ನಿವೃತ್ತ ಸೈನಾನಿ ಶ್ರೀ ಚಂದ್ರನಾಯ್ಕ್, ಮೆಸ್ಕಾಂ ಅಸಿಸ್ಟೆಂಟ್ ಇಂಜಿನಿಯರ್ ಶ್ರೀ ವಸಂತ್ ನಾಯ್ಕ್ ಹಾಗೂ ಇತರರೂ ಉಪಸ್ಥಿತರಿದ್ದರು.