ಶಿವಮೊಗ್ಗ: ಕ್ರೀಡೆ ಯುವಕರಲ್ಲಿ ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಮೂಡಿಸುತ್ತದೆ
ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಅವರು ಇಂದು ಎನ್.ಇ.ಎಸ್. ಮೈದಾನದಲ್ಲಿ ಗ್ರೀನ್ ಪಾರ್ಕ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ‘ಮೈತ್ರಾದೇವಿ ಕ್ರಿಕೆಟ್ ಟೂರ್ನಿಮೆಂಟ್’ ಉದ್ಘಾಟಿಸಿ
ಮಾತನಾಡುತ್ತಿದ್ದರು.

ಕ್ರೀಡೆ ಇಂದು ಬಹುಮುಖ್ಯವಾಗಿದೆ. ಅದರಲ್ಲೂ ಕ್ರಿಕೆಟ್ ಜನಪ್ರಿಯ ಆಟವಾಗಿದ್ದು, ಇಲ್ಲಿನ ಯುವಕರು ಅತ್ಯಂತ ಸಂಭ್ರಮದಿಂದ ಮೈತ್ರಾದೇವಿ ಕ್ರಿಕೆಟ್ ಟೂರ್ನಿಮೆಂಟ್
ಆಯೋಜಿಸಿರುವುದು ಸಂತೋಷದ ವಿಷಯವಾಗಿದೆ. ಕ್ರೀಡೆ ಯುವಕರಲ್ಲಿ ಸ್ಫೂರ್ತಿ ತರುತ್ತದೆ.ಯುವಕರು ತಮ್ಮ ಓದಿನ ಜೊತೆಗೆ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಜಿ.ಪಂ. ಮಾಜಿ ಸದಸ್ಯ ಕೆ.ಇ. ಕಾಂತೇಶ್ ಮಾತನಾಡಿ, ಕ್ರೀಡಾಸಕ್ತಿ ಯುವಕರಲ್ಲಿ ಕ್ರಿಯಾಶೀಲತೆ ಬೆಳೆಸುತ್ತದೆ. ಸ್ಥಳೀಯ ಪ್ರತಿಭೆಗಳು ಇಂತಹ ಕ್ರೀಡಾಕೂಟದಲ್ಲಿ
ಭಾಗವಹಿಸುವುದರಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಆಯೋಜಕರಾದ ವಿನಯ್, ರಾಜು, ಹನುಮಂತು, ದಿವಾಕರ್ ಶೆಟ್ಟಿ ,ಸಿ.ಎಸ್. ಮಾಲತೇಶ್, ಇ.ವಿಶ್ವಾಸ್ ಸೇರಿದಂತೆ ಹಲವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…