ನಗರದ ಗಾಂಧಿ ಬಜಾರ್ ನ ಕಾಳಿಕಾ ಪರಮೇಶ್ವರಿ ಕಾಂಪ್ಲೆಕ್ಸ್ ನಲ್ಲಿ ಶಿವಮೊಗ್ಗದ ಖ್ಯಾತ ಚಿನ್ನ-ಬೆಳ್ಳಿ ವರ್ತಕರಾದ ಮೈತ್ರಿ ಗ್ರೂಪ್ ಆಫ್ ಜ್ಯುವೆಲರಿಸ್ ನ ಶ್ರೀ “ಸೆಂಟಿಲ್ ವೇಲನ್” ರವರು ಇಂದು ನೂತನವಾಗಿ ಪ್ರಾರಂಭಿಸಿದ ಮೈತ್ರಿ ಬುಲಿಯನ್ ಎಂಬುವ ಜ್ಯುವೆಲರಿ ಮಳಿಗೆಯನ್ನು ಎಸ್ ದತ್ತಾತ್ರಿ ಯವರು ಉದ್ಘಾಟಿಸಿದರು.
ಶಿವಮೊಗ್ಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸ್ವಿಜರ್ಲ್ಯಾಂಡ್ ನ ಪ್ರಖ್ಯಾತ ಕಂಪನಿಯಾದ MMTC ಮತ್ತು PAMP ಕಂಪನಿಯ ಸಹಯೋಗದೊಂದಿಗೆ ಆರಂಭವಾದ ಮೈತ್ರಿ ಬುಲಿಯನ್ ಮಳಿಗೆಯು ಬಂಗಾರದ ಪರಿಶುದ್ಧತೆಯ ಪ್ರಮಾಣಪತ್ರವನ್ನು ಹೊಂದಿರುವ ಪರಿಶುದ್ಧ ಬಂಗಾರದ ಗಟ್ಟಿಗಳನ್ನು ನೀಡುವ ವ್ಯಾಪಾರ ಮಳಿಗೆಯಾಗಿದೆ.
ಈ ಸಂಧರ್ಭದಲ್ಲಿ ಮಾತನಾಡಿದ ಎಸ್.ದತ್ತಾತ್ರಿ ಯವರು, ಶಿವಮೊಗ್ಗದಲ್ಲಿ ಚಿನ್ನ-ಬೆಳ್ಳಿ ವರ್ತಕರ ನಡುವೆ ಮೊದಲ ಬಾರಿಗೆ ಈ ರೀತಿಯ ಸಂಸ್ಥೆ ಪ್ರಾರಂಭವಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಇದರಿಂದಾಗಿ ಶಿವಮೊಗ್ಗ ಜಿಲ್ಲೆಯ ಬಂಗಾರದ ಕೆಲಸ ಮಾಡುವ ವರ್ತಕರು ಈ ಹಿಂದೆ ಬೇಕಾದ ಬಂಗಾರದ ಗಟ್ಟಿಗಳನ್ನು ಬೆಂಗಳೂರಿನಿಂದ ಖರೀದಿ ಮಾಡಿ ತರಬೇಕಾಗುತ್ತಿತ್ತು. ಈ ಬಂಗಾರದ ಗಟ್ಟಿಗಳನ್ನು ಬೇರೆಡೆಯಿಂದ ತರುವುದು ಅತ್ಯಂತ ಅಪಾಯಕಾರಿ ಹಾಗೂ ಅಭದ್ರತೆ ಕಾಡುತ್ತಿತ್ತು, ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲೇ ಈ ಮಳೆಗೆ ಪ್ರಾರಂಭವಾಗಿರುವುದು ಬಂಗಾರದ ಕೆಲಸಗಾರರಿಗೆ ವರದಾನವಾಗಿದೆ. ಬಂಗಾರದ ವರ್ತಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು ಮತ್ತು ಈ ಒಂದು ಬುಲಿಯನ್ ಮಳಿಗೆ ಆರಂಭಿಸುವಂತ ದೊಡ್ಡ ಸಾಹಸಕ್ಕೆ ಕೈಹಾಕಿರುವ ಮೈತ್ರಿ ಗ್ರೂಪ್ ಆಫ್ ಜ್ಯುವೆಲರಿಸ್ ನ ಶ್ರೀ ಸೆಂಟಿಲ್ ವೇಲನ್ ರವರಿಗೆ ಶುಭವಾಗಲಿ, ಅವರ ಈ ನೂತನ ಉದ್ಯಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗದ ಚಿನ್ನ-ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷರಾದ M.L ರಮಣಿ ರವರು, ಉಪಾಧ್ಯಕ್ಷರಾದ ಶ್ರೀವಿನೋದ್ ಕುಮಾರ್ ಜೈನ್ (ವಿ.ಕೆ ಜೈನ್), ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಾಯಿಂಟ್ ಡೈರೆಕ್ಟರ್ ಶ್ರೀ ಗಣೇಶ್, ಶ್ರೀ ಕಾಳಿಕಾ ಪರಮೇಶ್ವರಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಜಿ ಮಾಲತೇಶ್, ಲಕ್ಷ್ಮಿ ಫೈನಾನ್ಸ್ ನ ಬದ್ರಿಷ್ ಹಾಗೂ MMTC – PAMP ಕಂಪನಿಯ ಶ್ರೀ ಸತ್ಯಜಿತ್ ಗಾಂಧಿ ಸೇರಿದಂತೆ ಶ್ರೀ ಸೆಂಟಿಲ್ ವೇಲನ್ ರವರ ಕುಟುಂಬವರ್ಗದವರು ಹಾಗೂ ಸ್ನೇಹಿತರು, ಸ್ಥಳೀಯರು ಉಪಸ್ಥಿತರಿದ್ದರು.