ಶಿವಮೊಗ್ಗ: ಬಸವಣ್ಣ ಪ್ರಜಾಪ್ರಭುತ್ವದ ಪಿತಾಮಹ ಎಂದು ಬಸವ ಕೇಂದ್ರದ ಡಾ.
ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
ಅವರು ಇಂದು ಅಖಿಲ ಭಾರತ ವೀರಶೈವ ಮಹಾಸಭಾ ಮಹಾನಗರ ಪಾಲಿಕೆ ಘಟಕದ ವತಿಯಿಂದ ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವವೇಶ್ವರ ವೃತ್ತದಲ್ಲಿರುವ ಬಸವೇಶ್ವರರ
ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು.
ಬಸವಣ್ಣನವರು ಪ್ರಜಾಪ್ರಭುತ್ವದ ಪಿತಾಮಹಾ ಎಂದೇ ಜನಪ್ರಿಯವಾಗಿದ್ದಾರೆ. ಸಮಾನತೆಯ ಸೂತ್ರ, ಕಾಯಕವೇ ಕೈಲಾಸ ಎಂಬ ಮಂತ್ರದ ಅಡಿಯಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದಲು
ಪ್ರಯತ್ನಪಟ್ಟವರು. ಮೇಲು ಕೀಳು ಬೇಧವನ್ನು ತೊಡೆದು ಹಾಕಲು ಪ್ರಯತ್ನಿಸಿದವರು. ಅಂದಿನ
ಶರಣರ ನಡೆ, ನುಡಿಗಳೆಲ್ಲವೂ ಚಂದವಾಗಿದ್ದವು ಎಂದರು.
ಬಸವ ಜಯಂತಿಯಂದು ಮುಖ್ಯವಾಗಿ ಅಂಬಲಿ ಮತ್ತು ಮಜ್ಜಿಗೆಯನ್ನು ಸೇರಿಸಿ ನೀಡುತ್ತಾರೆ. ಮಾದಾರ ಚೆನ್ನಯ್ಯನ ಮನೆಯ ಅಂಬಲಿ, ದೇವರದಾಸಿಮಯ್ಯ ಮನೆಯ ಮಜ್ಜಿಗೆಯನ್ನು ಸೇರಿಸಿ ಭಕ್ತಿ ಮತ್ತು ಭಾವೈಕ್ಯತೆಯ ಶಕ್ತಿಯ ರೂಪಕವಾಗಿ ಇದನ್ನು ಸೇವಿಸಲಾಗುತ್ತದೆ. ಇದು ಸಮಾನತೆಯ, ಭಾವೈಕ್ಯತೆಯ ಸಂಕೇತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ವಿಜಯ್ ಕುಮಾರ್,ಎಸ್.ದತ್ತಾತ್ರಿ, ಅನಿತಾ ರವಿಶಂಕರ್, ರಾಜಶೇಖರ್, ಮಲ್ಲಿಕಾರ್ಜುನ ಸ್ವಾಮಿ, ಚಿದಾನಂದ ಮೂರ್ತಿ, ಬಿಂದುಕುಮಾರ್, ಎ.ಆರ್. ಪ್ರಕಾಶ್,ಸುರೇಖಾ ಫಾಲಾಕ್ಷಪ್ಪ, ರೇಖಾ ವಾಗೀಶ್, ಯಶೋಧಾ ನಟರಾಜ್, ಉಮಾಶಂಕರ್, ಯಜ್ಞೇಶ್, ತೇಜಸ್ವಿ, ಗಂಗಾಧರ್, ಮಲ್ಲಿಕಾರ್ಜುನ ಕಾನೂರ, ತಿಮ್ಮಪ್ಪ, ವಸಂತ, ಹೆಚ್.ವಿ.
ಮಹೇಶ್ವರಪ್ಪ, ಮೊದಲಾದವರಿದ್ದರು.