ಶಿವಮೊಗ್ಗ: ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ ಪ್ರಯುಕ್ತ ಜಾನಪದ ಕಲಾತಂಡಗಳೊAದಿಗೆ ಶ್ರೀ ಬಸವೇಶ್ವರ ಭಾವಚಿತ್ರದ ರಾಜಬೀದಿ ಉತ್ಸವ ಶಿವಮೊಗ್ಗ ಪ್ರಮುಖ ರಸ್ತೆಗಳಲ್ಲಿ ನಡೆಯಿತು.
ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ವತಿಯಿಂದ ಬಸವೇಶ್ವರರರ ಭಾವಚಿತ್ರವನ್ನು ಕಲಾತಂಡಗಳೊAದಿಗೆ ಗಾಂಧಿಬಜಾರ್‌ನಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಿಂದ ರಾಜಬೀದಿ ಉತ್ಸವ ಆರಂಭಗೊಂಡಿತು.
ಶ್ರೀ ಬಸವೇಶ್ವರರ ಭಾವಚಿತ್ರ ಮೆರವಣಿಗೆಯು ನೆಹರು ರಸ್ತೆ, ಗೋಪಿ ವೃತ್ತ, ಕಮಲಾ ನೆಹರು ಕಾಲೇಜು ರಸ್ತೆ, ಬಸವೇಶ್ವರ ಪುತ್ಥಳಿ ಇರುವ ಗಾಂಧಿ ಪಾರ್ಕ್ ಆವರಣ ತಲುಪಿತು. ನಂತರ ಬಸವ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ರಾಜಬೀದಿ ಉತ್ಸವ ರಂಗಮAದಿರ ತಲುಪಿತು. ಸಕಲ ಪೂಜಾ ವಿಧಿವಿಧಾನದ ಮೂಲಕ ಅದ್ಧೂರಿಯಾಗಿ ಉತ್ಸವ ಜರುಗಿತು.
ಬಸವೇಶ್ವರ ಭಾವಚಿತ್ರದ ಮೆರವಣಿಗೆಯಲ್ಲಿ ಧಾರವಾಡದ ದೊಡ್ಡ ಹಲಗೆ ಮೇಳ, ಹನಸವಾಡಿ ಹನುಮಮಂತಪ್ಪನವರ ವೀರಗಾಸೆ, ನಂದಿಕೋಲು ಹಾಗೂ ವಿವಿಧ ಜಾನಪದ, ಕಲಾತಂಡಗಳ ಪ್ರದರ್ಶನ ಜನರ ಮೆಚ್ಚುಗೆ ಗಳಿಸಿದವು.
ಬಸವ ಕೇಂದ್ರದ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ, ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್.ಜೆ.ರಾಜಶೇಖರ್, ಉಪಾಧ್ಯಕ್ಷ ಮನು ವಡೆಯರ್, ಕಾರ್ಯದರ್ಶಿ ಟಿ.ಬಿ.ಜಗದೀಶ್, ಎಚ್.ಎಂ. ಶಿವಾನಂದ, ಎಸ್.ಎಸ್.ಜ್ಯೋತಿಪ್ರಕಾಶ್, ಎಚ್.ಎಸ್.ಶಂಕರ್, ಕೆ.ಸಿ.ನಾಗರಾಜ್, ಎನ್.ಎಂ.ಸAಜಯ್, ಅನಿತಾ ರವಿಶಂಕರ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಜಿ.ವಿಜಯ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ, ಸಮಾಜದ ಮುಖಂಡರು ಉಪಸ್ಥಿತರಿದ್ದರು.