ಲಾಕ್ ಡೌನ್ ನಿಂದಾಗಿ ತೊಂದರೆಗೆ ಒಳಗಾಗಿರುವ ಶಿವಮೊಗ್ಗ ನಗರದ ಬಡವರಿಗೆ ಹಂಚಲು ಉದ್ದೇಶಿಸಿರುವ ಫುಡ್ ಕಿಟ್ ಗಳ ಪ್ಯಾಕಿಂಗ್ ಕಾರ್ಯವು ಶಂಕರಮಠ ರಸ್ತೆಯಲ್ಲಿರುವ *ಸುಪ್ರೀಂ ಮೋಟರ್ಸ್ ಹಿಂಭಾಗದಲ್ಲಿರುವ ಜಯದೇವ ರೈಸ್ ಮಿಲ್ ಆವರಣದಲ್ಲಿ ನಡೆಯುತ್ತಿದ್ದು, ಇಂದು ಮಹಾಪೌರರು, ಉಪ ಮಹಾಪೌರರು , ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು, ಎಲ್ಲಾ standing committee ಗಳ ಅಧ್ಯಕ್ಷರು ಗಳು ಪ್ಯಾಕಿಂಗ್ ಕಾರ್ಯದ ಪರಿವೀಕ್ಷಣೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾಪೌರರು ಸಭೆಯ ನಿರ್ಧಾರದಂತೆ 46000 ಫುಡ್ ಕಿಟ್ ಪ್ಯಾಕಿಂಗ್ ಕಾರ್ಯ ನಡೆಯುತ್ತಿದೆ. ಪ್ರತಿ ಫುಡ್ ಕಿಟ್ ನಲ್ಲಿ 9 ಅವಶ್ಯ ವಸ್ತುಗಳನ್ನು ಸೇರಿಸಲಾಗಿದೆ. 1ಕಿಟ್ ನ ಬೆಲೆ ಸುಮಾರು 500 ರೂ. ಬುಧವಾರದಂದು ಮಹಾನಗರ ಪಾಲಿಕೆ ಆವರಣದಲ್ಲಿ ಸಾಂಕೇತಿಕವಾಗಿ ಫುಡ್ ಕಿಟ್ ವಿತರಣೆಗೆ ಚಾಲನೆ ನೀಡಲಾಗುತ್ತದೆ. ಆನಂತರದಲ್ಲಿ ಪ್ರತಿ ವಾರ್ಡಿನಲ್ಲಿ ಸದಸ್ಯರ ಕಮಿಟಿ ಮುಖಾಂತರ ಫುಡ್ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153