ವಿನೋಬ ನಗರದ ಶುಭಮಂಗಳ ಕಲ್ಯಾಣ ಮಂದಿರದ ಎದುರು ಜಿಎಸ್ ಟವರ್ ನಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಯಿಂದ ಅಂತರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ ಆಚರಿಸಲಾಯಿತು.
ಸುಮಾರು 36 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಪ್ರಸ್ತುತ ಶಿಕಾರಿಪುರ ತಾಲೂಕು ಕಾಗಿನೆಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮೀನಾಕ್ಷಿ ಸಿ ಟಿ, ಮತ್ತು ಮೆಗ್ಗಾನ್ ಆಸ್ಪತ್ರೆಯಲ್ಲಿ ಸುಮಾರು ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೃಿಷ್ಮಾ ಫರ್ನಾಂಡಿಸ್ ಅವರನ್ನು ಜೆಸಿ ಗಾರಾ ಶ್ರೀನಿವಾಸ್, ಅಧ್ಯಕ್ಷರಾದ ಜೆಸಿ ಸೌಮ್ಯ ಆರಳಪ್ಪ, ಕಾರ್ಯದರ್ಶಿಗಳಾದ ಮಮತಾ ಶಿವಣ್ಣ ಸನ್ಮಾನಿಸಿದರು.
ಸೌಮ್ಯ ಅರಳಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದ ನಿರ್ದೇಶಕರಾಗಿ ಪ್ರಸಾದ್, ಮಮತ ಶಿವಣ್ಣ, ಅತಿಥಿಗಳಾಗಿ ಕೃಿಷ್ಮಾ ಫರ್ನಾಂಡಿಸ್ , ಮೀನಾಕ್ಷಿ ಸಿ ಟಿ ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ಮೀನಾಕ್ಷಿಯವರು ಮಾತನಾಡಿ ಪ್ರತಿನಿತ್ಯ 150 ಕಿಲೋಮೀಟರ್ ಪ್ರಯಾಣ ಮಾಡಿ ತಮ್ಮ ಕೆಲಸ ಮಾಡುವ ಸ್ಥಳಕ್ಕೆ ತಲುಪಿ ಅಲ್ಲಿನ ಗ್ರಾಮಸ್ಥರು ಸೇವೆ ಮಾಡುತ್ತಿರುವ ಬಗ್ಗೆ ಕೋವಿಡ್ ಸಂದರ್ಭದಲ್ಲಿ ಅಲ್ಲೇ ಮನೆ ಮಾಡಿಕೊಂಡು, ವಾಹನಗಳ ಮೂಲಕ ಸರಿಯಾದ ಸಮಯಕ್ಕೆ ತಲುಪಿ ಕೋವಿಡ್ ಸಮಯದ ಸೇವೆ ನೀಡಿದ ಬಗ್ಗೆ ಹಂಚಿಕೊಂಡರು. ಕೆಲಸ ಮಾಡುತ್ತಿರುವ ಜಾಗದಲ್ಲಿ ಅಧಿಕಾರಿಗಳು ಸಿಬ್ಬಂದಿಗಳು ಪರಸ್ಪರ ಹೊಂದಾಣಿಕೆ ಗಳ ಬಗ್ಗೆ, ಗ್ರಾಮಸ್ಥರ ಪ್ರೀತಿ-ವಿಶ್ವಾಸದ ಬಗ್ಗೆ ತಮ್ಮ ವೃತ್ತಿ ಬದುಕಿನ, ಆರೋಗ್ಯ ಸೇವೆಗಳ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸೌಮ್ಯ ಅರಳಪ್ಪ, ಕಾರ್ಯದರ್ಶಿಗಳಾದ ಮಮತಾ ಶಿವಣ್ಣ, ಪತ್ರಕರ್ತರಾದ ಗಾರಾ ಶ್ರೀನಿವಾಸ್, ಸಮಾಜಸೇವಕರಾದ ತಾಯಿ ಮನೆ ಸುದರ್ಶನ್, ಪ್ರಾಣಿದಯಾ ಸಂಘದ ಪ್ರಸಾದ್, ಜೆಸಿ ಸದಸ್ಯರಾದ ಜೆಸಿ ಸಿಗ್ಬಾತ್, ಜೆಸಿ ನವೀನ್ ತಲಾರಿ, ಜೆಸಿ ನಿತೀನ್ ತಲಾರಿ ಇತರ ಸದಸ್ಯರು ಉಪಸ್ಥಿತರಿದ್ದರು.