ಮಂಜುನಾಥ್ ಶೆಟ್ಟಿ…

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಮಹತ್ವದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳಿಗೆ ಈ ಆಸ್ತಿ ಇ-ಖಾತ ಪಡೆಯುವುದು ಕಡ್ಡಾಯ ಗೊಳಿಸಲಾಗಿದೆ.ಈ ಹಿನ್ನೆಯಲ್ಲಿ ಸೋಮವಾರದಿಂದ ಮಾರ್ಚ್ 2026ರ ಇ-ಖಾತಾ ಮೇಳ ಆರಂಭಗೊಳ್ಳಲಿದೆ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಆಯುಕ್ತ ಮಾಯಣ್ಣ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಲಯ 2ರ ಈ ಖಾತ ಮೇಳವು ಮಾರ್ಚ್ 18ರಂದು ಶರವತಿ ನಗರದಲ್ಲಿರುವ ಮಹಾನಗರ ಪಾಲಿಕೆ ಗ್ರಂಥಾಲಯದಲ್ಲಿ ನಡೆಯಲಿದೆ ಮಾರ್ಚ್ 25ರಂದು ಪಂಚವಟಿ ಕಾಲೋನಿಯ ಕಲ್ಯಾಣ ಮಂದಿರದಲ್ಲಿ ಮಾರ್ಚ್ 24ರಂದು ಬೊಮ್ಮನಕಟ್ಟೆ ಅಶ್ವಥ್ ನಗರದ ಮುಚ್ಚಿಗರ ಸಮುದಾಯ ಭವನದಲ್ಲಿ ಮಾರ್ಚ್ 26ರಂದು ಗಾಡಿಕೊಪ್ಪದ ಆಗಮುಡಿ ಸಮಾಜ ಸೇವಾ ಸಂಘ ದಲ್ಲಿ ಮಾರ್ಚ್ 27ರಂದು ಕೋಟೆ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಪ್ಪಾಜಿ ರಾವ್ ಕಾಂಪೌಂಡ್ ನಲ್ಲಿ ನಡೆಯಲಿದೆ.

ಈ ಖಾತಾ ಮೇಳದಲ್ಲಿ ಸಲ್ಲಿಸಬೇಕಾದ ಅಗತ್ಯ ದಾಖಲಾತಿಗಳು…

ಮಾಲೀಕತ್ವ ಸಾಬೀತು ಪಡಿಸುವ ಕಾನೂನಾತ್ಮಕ ದಾಖಲೆಗಳು ಮಾಲೀಕರ ಭಾವಚಿತ್ರ ಮತ್ತು ಮಾಲೀಕರ ಗುರುತಿನ ಚೀಟಿ (ವೋಟರ್ ಐಡಿ ಪಾನ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಪಾಸ್ ಪೋರ್ಟ್ ಆಧಾರ್ ಕಾರ್ಡ್) ಕಟ್ಟಡದ ಅಥವಾ ನಿವೇಶನದ ಭಾವಚಿತ್ರ, ಕಟ್ಟಡದ ಪರವಾನಗಿ ಪ್ರತಿ, ಹಿಂದಿನ ನೋಂದಣಿ ದಾಖಲಾತಿ ಯಾಗಿದ್ದಲ್ಲಿ ನೋಂದಣಿಯಾದ ದಿನಾಂಕ 1-03-2004 ರಿಂದ ಮತ್ತು 1-03-2004ರಿಂದ ಇಲ್ಲಿಯವರೆಗಿನ EC ಪಡೆಯಬೇಕಿದೆ.

ಆಸ್ತಿಯ ಮಾಲೀಕರು e-kyc ಆಗಿ ಓಟಿಪಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕವನ್ನು ಶಿವಮೊಗ್ಗ ವನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.ಸ್ಥಳದಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿದೆ ಮಾಲೀಕರು ತಮ್ಮ ಆಧಾರ್ ನಮೂದಿಸಿರುವ ಮೊಬೈಲ್ ಅನ್ನು ಕಡ್ಡಾಯವಾಗಿ ಜೊತೆಯಲ್ಲಿ ತರತಕ್ಕದ್ದು.

Leave a Reply

Your email address will not be published. Required fields are marked *