ಶಿವಮೊಗ್ಗ: ಮಕ್ಕಳ ಸಹಾಯವಾಣಿ _1098 ಶಿವಮೊಗ್ಗ. ರೈಲ್ವೆ ಇಲಾಖೆ ಭಾರತ ಸರ್ಕಾರ, ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ ಇವರ ಸಹಯೋಗದೊಂದಿಗೆ ಇಂದು ನಗರದ ರೈಲ್ವೆ ನಿಲ್ದಾಣದಲ್ಲಿ  ಮಕ್ಕಳ ಸಹಾಯವಾಣಿಯ ದಿನಾಚರಣೆಯ ಅಂಗವಾಗಿ ಸ್ಟಾಲ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಕ್ಕಳ ಸಹಾಯವಾಣಿಯ ನಿರ್ದೇಶಕ ಡಾ.ಫಾ.ಅಬ್ರಹಾಂ  ವಹಿಸಿ ಮಾತನಾಡಿ, ಮಕ್ಕಳ ಸಹಾಯವಾಣಿಯು ನಿರಂತರ ಮಕ್ಕಳಿಗಾಗಿ ಕೆಲಸ ನಿರ್ವಹಿಸುತ್ತಿದ್ದು ಮಕ್ಕಳ ಸಹಾಯವಾಣಿಯು ಜಿಲ್ಲೆಯಾದ್ಯಂತ 24 ಗಂಟೆಗಳ ಕಾಲ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ರೈಲ್ವೆ ನಿಲ್ದಾಣದ ಅಧೀಕ್ಷಕ  ಪ್ರಸನ್ನ, ಕಾರ್ಯಕ್ರಮವು ಬಹಳ ಅತ್ಯಂತ ಉಪಯುಕ್ತ ಯೋಜನೆಯಾಗಿದ್ದು ಎಲ್ಲಾ ಸಾರ್ವಜನಿಕರು ಮಕ್ಕಳುಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸ್ಟೇಷನ್ ಕಮಾಂಡರ್ ಕುಬೇರಪ್ಪ,ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ.  ಅಧ್ಯಕ್ಷೆ ರೇಖಾ ಜಿ.ಎಂ.,  ಮಕ್ಕಳ ಮತ್ತು ಮಹಿಳೆಯರ ಸುರಕ್ಷತೆ ಬಗ್ಗೆ ಹಾಗೂ ಪ್ರಯಾಣಿಕರ ರಕ್ಷಣೆಯ ಕುರಿತು ಮಾಹಿತಿಯನ್ನು ನೀಡಿದರು.
ಇಂದಿರಾ PSI ಶಿವಮೊಗ್ಗ ಹಾಗೂ ಪ್ರಮೋದ ಸಂಯೋಜಕರು ಮಕ್ಕಳ ಸಹಾಯವಾಣಿ ಶಿವಮೊಗ್ಗ., ಭರತ್ ಸಮಾಜ ಕಾರ್ಯಕರ್ತರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶಿವಮೊಗ್ಗ ಹಾಗೂ ಮಕ್ಕಳ ಸಹಾಯವಾಣಿಯ ಸಿಬ್ಬಂದಿಗಳು ಸಾರ್ವಜನಿಕರು, ಪೆÇೀಲಿಸ್ ಸಿಬ್ಬಂದಿಗಳು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…