ಸರ್ಕಾರ ಮತ್ತು ರೋಟರಿ ಸಂಸ್ಥೆಯ ಸಹಕಾರ ಸೊಹಸಾಗಿದೆ. ರೋಟರಿಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷ ಇಮ್ಮಡಿ ಗೊಳಿಸಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಕ್ಲಬ್ ಆಯೋಜಿಸಿದ ‘ರಹಲ’ ಜಿಲ್ಲಾ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿಯವರು ಮಾತನಾಡುತ್ತಿದ್ದರು.

ಸಮಾಜದ ಒಳತಿಗಾಗಿ ಸರ್ಕಾರದೊಂದಿಗೆ ಕೈ ಜೋಡಿಸಿ, ಉತ್ತಮ ಕಾರ್ಯ ಮಾಡುವುದರೊಂದಿಗೆ ಜನ ಸ್ನೇಹಿ ಸಂಸ್ಥೆಯಾಗಿ ವಿಶ್ವಾದ್ಯಂತ ತನ್ನದೇ ಆದ ಚಾಪನ್ನು ಮೂಡಿಸಿದೆ. ನಾನು ಕಾರ್ಯನಿರ್ವಹಿಸುತ್ತಿದ್ದ ಸಂಧರ್ಭದಲ್ಲಿ ಈ ಸಂಸ್ಥೆಯ ಸಹಕಾರದಿಂದ ನೀಡಲ್ಪಟ್ಟ ಔಷದಿ- ಮಾರಕ ರೋಗ ಫಲ್ಸ್ ಪೋಲಿಯೊ ವಿಶ್ವದಿಂದ ಹೋಗಲಾಡಿಸಲು ಸಾದ್ಯವಾಗಿದೆ. ಇಂತಹ ಅನೇಕ ಕಾರ್ಯಕ್ರಮ ಗಳಿಂದ ಗುರ್ತಿಸಿಕೊಂಡಿದೆ. ಸರ್ಕಾರದ ಕಾರ್ಯಕ್ಕೆ ತಮ್ಮದೇ ಆದ ಚೌಕಟ್ಟು ಇರುತ್ತದೆ. ಆದರೆ, ರೋಟರಿ ಸಂಸ್ಥೆ ಅದನ್ನು ಮೀರಿ ಉತ್ತಮ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುತ್ತದೆ. ಇಂತಹ ನಾಯಕತ್ವದ ಬಗ್ಗೆ ಕಾರ್ಯಕ್ರಮಗಳನ್ನು ಮಾಡಿ, ಅನುಭವ ಹೊಂದಿರುವ ಪಡೆ, ಸಮಯೋಜಿತ ಕಾರ್ಯ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಮುಖಿ ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ. ತಮ್ಮೆಲ್ಲರ ಸೇವಾ ಕಾರ್ಯಕ್ರಮಗಳು ಯಶಸ್ವಿಯಾಗಲಿ, ಸಮಾಜಕ್ಕೆ ಉತ್ತಮ ನಾಯಕರನ್ನು ನೀಡುವಂತಾಗಲಿ ಎಂದರು.

ನೀಯೊಜಿತ ಗೌರ್ನರ್ ರೊ.ಜಯಗೌರಿ ಯವರು ಸಂಸ್ಥೆಗೆ ನೀಡಿದ ದೇಣಿಗೆಯಲ್ಲಿ ಅತ್ಯುತ್ತಮ ಕಾರ್ಯ ಮಾಡಿತ್ತಿರುವುದಾಗಿಯೂ, ಸದಸ್ಯರಲ್ಲದವ ರಿಂದಲೂ ದೇಣಿಗೆ ಪಡೆದು ಸಮಾಜಕ್ಕೆ ಉತ್ತಮ ಕಾರ್ಯ ಮಾಡೋಣ, ಕರೋನ ಸಂದರ್ಭದಲ್ಲಿಯೂ ಉತ್ತಮ ದೇಣಿಗೆ ನೀಡಿದ್ದೀರ. ಮುಂದೆಯೂ ಎಲ್ಲರೂ ಈ ಕಾರ್ಯದಲ್ಲಿ ಕೈ ಜೋಡಿಸ ಬೇಕೆಂದು ಕೋರಿದರು. ಪ್ರೋ.ಶೋಭ ಮರವಂತೆಯವರು ರಾಮಾಯಣ, ಮಹಾಭರತದ ಹಲವು ಪ್ರಸಂಗಗಳನ್ನು ಹಾಸ್ಯ ಭರಿತವಾಗಿ ಉಣಬಡಿಸಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು. ನಗರದ ಪ್ರಸಿದ್ದ ಲೆಕ್ಕ ಪರಿಶೋದಕರಾದ ಕೆ.ವಿ.ವಸಂತಕುಮಾರ್ ರವರು ನಾಯಕತ್ವ ಗುಣದ ಬಗ್ಗೆ ಸವಿಸ್ತಾರವಾಗಿ ವಿವರಿಸಿ, ಸದಸ್ಯರು ಯೋಜನಾ ಬದ್ದ ಕಾರ್ಯಗಳನ್ನು ಹಾಕಿ ಕೊಳ್ಳುವ ಬಗ್ಗೆ ಯೋಚಿಸುವಂತೆ ಮಾಡಿದರು. ರಂಗಾಯಣದ ಕಲಾವಿದರು ಅಳಿವಿನ ಅಂಚಿಗೆ ಸರಿಯುತ್ತಿರು ರಂಗ ಗೀತೆಗಳನ್ನು ಅಮೋಘವಾಗಿ ಪ್ರಸ್ತುತ ಪಡಿಸಿ ಪ್ರೇಕ್ಷಕರನ್ನು ರಂಜಿಸಿದರು. ಅತ್ಯುತ್ತಮ ತರಬೇತುದಾರ ಚೇತನ್ ರಾಮ್ ರವರು ಜೀವನ ಶೈಲಿಯಲ್ಲಿರುವ ಉತ್ತಮ ನಾಯಕತ್ವ ಗುಣಗಳನ್ನು ವಿವರವಾಗಿ ಬಿಡಿಸಿ ಹೇಳುವ ಮೂಲಕ, ಪ್ರೇಕ್ಷಕರನ್ನು ತಿಳಿ ಹಾಸ್ಯದ ಮೂಲಕ ಯೋಚನಾ ಲಹರಿಗೆ ಕರೆದೊಯ್ದರು.

ಅಧ್ಯಕ್ಷಯರ ವಹಿಸಿದ್ದ ಜಿಲ್ಲಾ ಗೌರ್ನರ್ ರೊ.ರಾಮಚಂದ್ರಮೂರ್ತಿಯವರು, ಹಲವಾರು ಸಮಾಜಮುಖಿ ಕಾರ್ಯ ಮಾಡುವ ಸಂಸ್ಥೆಗಳಿವೆ. ಅದರಲ್ಲಿ ಮುಂಚೋಣಿಗೆ ಬರುವುದು ರೋಟರಿ ಸಂಸ್ಥೆ. ವಿಶ್ವಾದ್ಯಂತ ತನ್ನ ಸೇವಾ ಕಾರ್ಯದಿಂದ ಜನರ ಮನಸ್ಸನ್ನು ಗೆದಿದೆ. ತಮ್ಮೆಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿಯೂ ಸಂಸ್ಥೆ ಇನ್ನೂ ಉತ್ತಮ ಕಾರ್ಯ ಮಾಡುವುದರಲ್ಲಿ ಸಂದೇಹವಿಲ್ಲ. ಈ ಕಾರ್ಯಕ್ರಮ ಆಯೋಜಿಸಿರುವ ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ಅಧ್ಯಕ್ಷರಾದ ರೊ.ಲಕ್ಷ್ಮೀನಾರಾಯಣ್ ತಂಡಕ್ಕೆ ಧನ್ಯವಾದ ಅರ್ಪಿಸಿದರು. ರೋ.ಲಕ್ಷ್ಮೀನಾರಾಯಣ್ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳುವವರು ರೋಟರಿ ಸಂಸ್ಥೆಗೆ ಸೇರಬೇಕು. ನಯಾಪೈಸೆ ವೆಚ್ಛಕ್ಕು ಇಲ್ಲಿ ಲೆಕ್ಕ ಇಡಲಾಗುತ್ತದೆ. ಕೆರೆಯ ನೀರನ್ನು ಕೆರೆಗೆಚಲ್ಲಿ ಎಂಬಂತೆ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಹಿಂದಿರುಗಿಸಲಾಗುವುದು ಎಂದರು. ನಟನಂ ಕಲಾವಿದರ ಭರ್ತನಾಟ್ಯದೊಂದಿಗೆ ಸಭೆ ಪ್ರಾರಂಭ ಗೊಂಡಿತು, ಎಸ್.ಎಸ್.ವಾಗೇಶ್ ಎಲ್ಲರನ್ನೂ ಸ್ವಾಗತಿಸಿದರು, ಪ್ರಾಸ್ಥಾವಿಕವಾಗಿ ಜಿ.ಎನ್.ಪ್ರಕಾಶ್ ನುಡಿದರು, ಪಕ್ಷಿನೋಟವನ್ನು ನರಸಿಂಹಪ್ರಸಾದ್ ನೀಡಿದರು, ದೇವಾನಂದ್, ಎಂ.ಪಿ.ಆನಂದಮೂರ್ತಿ, ಪಾಲಾಕ್ಷ,ರೂಪಾ ಮುಂತಾದವರು ವೇದಿಕೆಯಲ್ಲಿ ಇದ್ದರು. ರೇಣುಕಾಆರಾಧ್ಯರವರು ಆಗಮಿಸಿದ ಎಲ್ಲರಿಗೂ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ…