ಶಿವಮೊಗ್ಗ: ಭದ್ರಾವತಿ ತಾಲ್ಲೂಕು ವೈಷ್ಣವ ಪರಿಷತ್ ಹಾಗೂ ಹೊಳೆಹೊನ್ನೂರು ಹೋಬಳಿ ಹಾಗೂ ಸಿದ್ಲಿಪುರದ ಶ್ರೀವೈಷ್ಣವ ಸೇವಾ ಸಮಿತಿ ಸಹಯೋಗ ದೊಂದಿಗೆ ಜಗದ್ಗುರು ಶ್ರೀ ಭಗವದ್ ಶ್ರೀ ರಾಮಾನುಜಾಚಾರ್ಯ ಅವರ 1005ನೇ ವರ್ಷದ ಜಯಂತೋತ್ಸವ ನಿಮಿತ್ತ ಭದ್ರಾವತಿ ಕಾಗದ ನಗರದ ಶ್ರೀಕ್ಷೇತ್ರ ನಾಗರಕಟ್ಟೆಯಲ್ಲಿ ಸಾಮೂಹಿಕ ಉಪನಯನ ಮತ್ತು ಮೇಲುಕೋಟೆ ಗುರುಗಳಿಂದ ಸಮಾಶ್ರಯಣ (ಮುದ್ರಾಧಾರಣೆ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾಜದ ನಲವತ್ತಕ್ಕೂ ಹೆಚ್ವು ವಟುಗಳಿಗೆ ಮೇಲುಕೋಟೆ ಯತೀರಾಜ ಮಠದ ಯಾದಗಿರಿ ಯತೀರಾಜ ನಾರಾಯಣಜೀಯರ್ ಮಹಾಸ್ವಾಮಿಗಳು ಉಪನಯನ ನೆರವೇರಿಸಿ ಸಾನಿಧ್ಯದಲ್ಲಿ ನಡೆಯಲಿರುವ ಧರ್ಮ ಭೋಧನೆ ಮಾಡಿ ಚಾಲನೆ ನೀಡಿದರು.
ಈ ಕಾರ್ಯಕ್ರಮಗಳ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಸಾಮಾಜಿಕ ಸೇವಾ ಕಾರ್ಯಕರ್ತರಾದ ಹೊನ್ನಟ್ಟಿ ಹೊಸೂರಿನ ಉಷಾ ಸತೀಶ್‍ಗೌಡ ದಂಪತಿಗಳಿಗೆ ಸಮಾಜ ಹಾಗೂ ಶ್ರೀಗಳು ಆತ್ಮೀಯವಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವೈಷ್ಣವ ಪರಿಷತ್ ಅಧ್ಯಕ್ಷ ದೊಡ್ಡಯ್ಯ ಹಾಗೂ ಕಾರ್ಯಕ್ರಮದ ರೂವಾರಿಗಳು ಮತ್ತು ನಾಗರಕಟ್ಟೆ ಕ್ಷೇತ್ರದ ಪ್ರಧಾನ ಅರ್ಚಕರಾದ ರಮೇಶ್ ಭಟ್ ಅರಳೀಮಠ್, ಅಶ್ವತ್ ನಾರಾಯಣ್ ಜಿ.ವಿ, ಎಸ್.ಕೆ. ಸುರೇಂದ್ರ, ವೆಂಕಟೇಶ್ ಕನಸಿನಕಟ್ಟೆ, ಚಿನ್ಮಯ್, ಮಧುಸೂದನ್ ಹಾಗೂ ಯುವ ಪುರೋಹಿತರನ್ನು ಶ್ರೀಗಳು ಗೌರವಿಸಿದರು.
ವೈಷ್ಣವ ಸಮಾಜದ ಪ್ರಮುಖರಾದ ಕೃಷ್ಣಸ್ವಾಮಿ, ಅರಹತೊಳಲು ಕೃಷ್ಣಮೂರ್ತಿ, ಕೇಶವ ಮೂರ್ತಿ, ಕಡದಕಟ್ಟೆ ಮಾದೂರಾವ್, ಹನಗವಾಡಿ ಹನುಮಂತಯ್ಯ , ದೇವರ ಹೊನ್ನಾಳಿ ಗೋಪಾಲಯ್ಯ, ದೇವರಹಳ್ಳಿ ಕೇಶವಯ್ಯ, ಅಶ್ವತ್ ನಾರಾಯಣ್, ಎಸ್. ಪಿ, ಬಿ.ಎನ್. ಅಶ್ವತ್ ನಾರಾಯಣ್, ಅಶ್ವತ್ ನಾರಾಯಣ್ ಜಿ.ವಿ ಹಾಗೂ ಇತರರಿದ್ದರು.