ಶಿವಮೊಗ್ಗ: ಇತ್ತೀಚೆಗೆ ಹಿಮಾಲಯ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಮರಳಿದ 53 ಮಕ್ಕಳಿಗೆ ಅಭಿನಂದನೆ ಮತ್ತು ಅನುಭವ ಹಂಚಿಕೆ ಕಾರ್ಯಕ್ರಮವನ್ನು ನಿನ್ನೆ ಹಮ್ಮಿಕೊಳ್ಳಲಾಗಿತ್ತು.

ಬಿ.ಹೆಚ್.ರಸ್ತೆಯ ಹೋಟೆಲ್ ಶ್ರೀಮಾತಾ ಗ್ರ್ಯಾಂಡ್ಯೂರ್‍ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಇಂದಿನ ಯುವ ಪೀಳಿಗೆಗೆ ಸಾಮಾಜಿಕ ಬದುಕಿನಲ್ಲಿ ಮುನ್ನಡೆಯುವ ಹಾದಿಯನ್ನ ಸಾಹಸ ಪ್ರವಾಸಗಳ ಮೂಲಕ ತನ್ನದೇ ಆದ ಅತ್ಯಂತ ವ್ಯವಸ್ಥಿತವಾದ ರೀತಿಯಲ್ಲಿ ಚಾರಣಗಳನ್ನ ಆಯೋಜಿಸುತ್ತಿರುವ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಶಿವಮೊಗ್ಗ ಡಿಸ್ಟಿಕ್ ಯೂನಿಟ್ ಮತ್ತು ತರುಣೋದಯ ಘಟಕವು 15 ದಿನದ ಹಿಮಾಲಯ ಪ್ರಕೃತಿ ಕಲಿಕಾ ಚಾರಣ ಶಿಬಿರ ಆಯೋಜಿಸಿತ್ತು.

ಅಭಿನಂದನಾ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್‍ನ  ಪದಾಧಿಕಾರಿಗಳಾದ ವಿಜಯಕುಮಾರ್ ,ಸುರೇಶ್, ಹರೀಶ್ ಪಂಡಿತ್,  ಮನ್ಮೋಹನ್ ಪವಾರ್, ಪ್ರಶಾಂತ್ ವಸಿಷ್ಠ, ಸುನಿಲ್, ಮಹೇಶ್, ಉಮೇಶ್ ಅಕ್ಕಸಾಲಿ, ನವೀನ್ ಜವಳಿ, ಬದ್ರಿನಾಥ್ ರಾಘವೇಂದ್ರ, ಹೇಮಂತ್ ಕೆಲ್ಕರ್, ಪೃಥ್ವಿ ಗಿರಿಮಾಜಿ,   ದೊರೆ ಚಿನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…