ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟವು 24*7 ನೀರಿನ ಶುಲ್ಕ ಮತ್ತು ಗುಣಮಟ್ಟದ ನೀರು ಈ ವಿಷಯಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಹೋರಾಟಗಳನ್ನು ರೂಪಿಸಿಕೊಂಡು ಬಂದಿತ್ತು.ಇಂದು ಶಾಸಕರ ಕಚೇರಿಯಲ್ಲಿ ನಡೆದ ಒಕ್ಕೂಟದ ಸದಸ್ಯರು ಮತ್ತು ಅಧಿಕಾರಿಗಳು ಹಾಗೂ ನಗರಪಾಲಿಕೆ ಮೇಯರ್-ಉಪಮೇಯರ್ ಇವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನಾಗರಿಕರ ಹಿತರಕ್ಷಣಾ ವೇದಿಕೆ ಒಕ್ಕೂಟಕ್ಕೆ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಿದೆ.
ಶಿವಮೊಗ್ಗದ ಸಮಸ್ತ ನಾಗರಿಕರು ಮತ್ತು ತಾವೆಲ್ಲರೂ ನೀಡಿದ ಅದಮ್ಯ ಬೆಂಬಲಕ್ಕೆ ಅನಂತಾನಂತ ವಂದನೆಗಳು.
ಇಂದಿನ ಸಭೆಯಲ್ಲಿ ನಮ್ಮ ಹೋರಾಟ ಮತ್ತು ವೈಜ್ಞಾನಿಕ ವಿಶ್ಲೇಷಣೆಯನ್ನು ಒಪ್ಪಿ ನಾಗರೀಕರ ಪರವಾಗಿ ತೀರ್ಮಾನ ತೆಗೆದುಕೊಳ್ಳಲು ಸಹಕರಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಮಾನ್ಯ ಶಾಸಕರಿಗೆ ಒಕ್ಕೂಟದ ಪರವಾಗಿ ಮತ್ತು ಶಿವಮೊಗ್ಗದ ಜನತೆಯ ಪರವಾಗಿ ಹೃತ್ಪೂರ್ವಕ ವಂದನೆಗಳನ್ನು ನಾಗರಿಕ ಹಿತರಕ್ಷಣಾ ವೇದಿಕೆ ತಿಳಿಸಿರುತ್ತಾರೆ.