ಶಿವಮೊಗ್ಗದಲ್ಲಿ ಉದ್ಯೋಗ ಮೇಳ
ಉದ್ಯೋಗವಕಾಶಕ್ಕೆ ವಿದ್ಯೆಯ ಜೊತೆಗೆ ಜೀವನ ಕೌಶಲ್ಯ -ಪರಿಣಿತಿ ಹಾಗೂ ಸಮಯ ಪ್ರಜ್ಞೆ ಬೇಕು. ಉದ್ಯೋಗಾವಕಾಶಕ್ಕೆ ವಿದ್ಯೆ ಇದ್ದರೆ ಸಾಲದು, ಅದರ ಜೊತೆಗೆ ಸಾಮಾನ್ಯ ಜ್ಞಾನ, ಜೀವನ ಕೌಶಲ್ಯಗಳು, ಪರಿಣಿತಿ ಹಾಗೂ ಸಮಯ ಪ್ರಜ್ಞೆ ಬೇಕು ಎಂದು ಶಿವಮೊಗ್ಗ ಜಿಲ್ಲಾ ಉದ್ಯೋಗಾಧಿಕಾರಿಗಳಾದ ಖಲಂದರ್ ಖಾನ್ ನುಡಿದರು.

ಇಂದು ಶಿವಮೊಗ್ಗದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಕರ್ನಾಟಕ ಸರ್ಕಾರ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದಲ್ಲಿ ಖಾಸಗಿ ಕಂಪನಿಯಲ್ಲಿನ ಉದ್ಯೋಗಾವಕಾಶಗಳನ್ನು ಜಿಲ್ಲೆಯ ಯುವಜನರಿಗೆ ಒದಗಿಸುವ ಉದ್ದೇಶದಿಂದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಮೇಳದಲ್ಲಿ ಭಾಗವಹಿಸಿದ ಯುವಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಉದ್ಯೋಗ, ಕೌಶಲ್ಯ ಅಭಿವೃದ್ದಿ ಅಪ್ರೆಂಟಿಶಿಪ್ & ಸ್ವಯಂ ಉದ್ಯೋಗಕ್ಕಾಗಿ ಇರುವ ವಿವಿಧ ಯೋಜನೆ ಕಾರ್ಯಕ್ರಮಗಳ ಕುರಿತು ವಿವರವಾಗಿ ತಿಳಿಸಿಕೊಟ್ಟರು. ಬರುವ ದಿನಗಳಲ್ಲಿ ಬೇರೆ ಬೇರೆ ಕಂಪನಿ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರದಲ್ಲಿ ಇಂತಹ ಮೇಳಗಳನ್ನು ಹೆಚ್ಚು ಹೆಚ್ಚು ಆಯೋಜನೆ ಮಾಡಲಾಗುವುದು ಎಂದು ನುಡಿದರು.

ಈ ಉದ್ಯೋಗ ಮೇಳದಲ್ಲಿ ಸಹಯೋಗ ನೀಡಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಶ್ರೀ ಜಿ ವಿಜಯ ಕುಮಾರ್ ಹಾಗೂ ನಿರ್ದೇಶಕರಾದ ಶ್ರೀ ಗಣೇಶ ಅಂಗಡಿಯವರು ಭಾಗವಹಿಸಿ ಕೈಗಾರಿಕೆಗಳಲ್ಲಿ ಇರುವ ಉದ್ಯೋಗಾವಕಾಶಗಳ ಕುರಿತು ತಿಳಿಸುತ್ತಾ ವಿದ್ಯಾರ್ಥಿಗಳು ಎಷ್ಟೇ ವಿದ್ಯೆಯಲ್ಲಿ ಪರಿಣಿತರಾದರು ಅವರಲ್ಲಿ ಒಂದಲ್ಲಾ ಒಂದು ಕೊರತೆ ಇದ್ದೇ ಇರುತ್ತೆ ಅಂತಹ ಕೊರತೆಯನ್ನು ನಿಭಾಯಿಸಿ ಉದ್ಯೋಗವನ್ನು ದೊರಕಿಸಿಕೊಳ್ಳಲು ಇಂತಹ ಕಾರ್ಯಗಾರಗಳಲ್ಲಿ ಭಾಗವಹಿಸಬೇಕು. ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಗ್ರಾಮೀಣ ಭಾಗದಲ್ಲು ಆಯೋಜಿಸಬೇಕು ಎಂದು ನುಡಿದರು.
ಉದ್ಯೋಗ ಮೇಳದಲ್ಲಿ ಜಿಲ್ಲೆಯ ಖಾಸಗಿ ಕಂಪನಿಗಳು ಭಾಗವಹಿಸಿ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಂಡರು ಸುಮಾರು ೪೦೦ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…