ಹೊಸನಗರ ನ್ಯೂಸ್…

ಹೊಸನಗರ ತಾಲ್ಲೂಕು ಸುಳಗೊಡು ಗ್ರಾ ಪಂ ವ್ಯಾಪ್ತಿಯ ದೂರ ಮತ್ತು ಹಿಂದುಳಿದ ನಕ್ಸಲ್ ಬಾಧಿತ ಪ್ರದೇಶವಾದ ನೀರುತೊಟ್ಟಿಲು ಕುಮರಿಬೈಲು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಗೆ ತೀರ್ಥಹಳ್ಳಿ ಉಪ ವಿಭಾಗ DySP ಶ್ರೀ ಶಾಂತವೀರ ಮತ್ತು ಹೊಸನಗರ ಸರ್ಕಲ್ ಇನ್ಸ್ಪೆಕ್ಟರ್ ಶ್ರೀ B C ಗಿರೀಶ್ ರವರು ಭೇಟಿ ನೀಡಿ ಮಕ್ಕಳೊಂದಿಗೆ ಕೆಲ ಕಾಲ ಕಳೆದು ಶಾಲೆಯಲ್ಲಿ ನೆರದಿದ್ದ ಮಕ್ಕಳು ಮತ್ತು ಅವರ ಪೋಷಕರ ಜೊತೆ ಸಮಾಲೋಚನೆ ನಡೆಸಿ ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳಿಗೆ ವಿದ್ಯೆ ಕಲಿಸಿ ಮಕ್ಕಳನ್ನೇ ಆಸ್ತಿ ಮಾಡಿ ಎಂದು ಸಲಹೆ ನೀಡಿ ಮಕ್ಕಳಿಗೆ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದರು.

ಈ ಸಮಯದಲ್ಲಿ ಶಾಲಾ ಶಿಕ್ಷಕ ಶ್ರೀ ಶರವಣ, CRP ಶ್ರೀಮತಿ ರೇಖಾ, ಸುಳಗೊಡು ಗ್ರಾ ಪಂ ಅಧ್ಯಕ್ಷ ಶ್ರೀ ಸದಾನಂದ ಮತ್ತು SDMC ಅಧ್ಯಕ್ಷ ಶ್ರೀ ಕೃಷ್ಣಮೂರ್ತಿ ಉಪಾಧ್ಯಕ್ಷೆ ಶ್ವೇತಾ ಎಂ ಎಲ್ ಮತ್ತು ಸಾರ್ವಜನಿಕರು ಹಾಜರಿರುತ್ತಾರೆ.

ಸರ್ಕಲ್ ಇನ್ಸ್ಪೆಕ್ಟರ್ B C ಗಿರೀಶ್ ಮಾತನಾಡಿ ಎಲ್ಲಾ ಕಡೆ ಒಂದೊಂದು ರೀತಿ ಸಮಸ್ಯೆ ಇದ್ದೇ ಇರುತ್ತದೆ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಸಾಧಕರಾಗಿ ಎಂದು ಕರೆ ನೀಡಿ ಎಲ್ಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು.
ನಂತರ ಶಾಲಾ ಆವರಣದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು, ಮತ್ತು 112 ERSS ಬಗ್ಗೆ ಮಾಹಿತಿ ನೀಡಿ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಆರಕ್ಷಕರು ಮಕ್ಕಳೊಂದಿಗೆ ಮಕ್ಕಳಾಗಿ ಮಕ್ಕಳ ಜೊತೆ ಬಿಸಿ ಊಟ ಮಾಡಿ ಏನೇ ಸಮಸ್ಯೆ ಇದ್ದರೂ ನಾವು ಮತ್ತು ನಮ್ಮ ಸಿಬ್ಬಂದಿಯವರು ನಿಮ್ಮೊಂದಿಗೆ ಇರುತ್ತೇವೆ ಎಂದು ಅಭಯ ನೀಡಿ ತೆರಳಿದರು, ಸಾರ್ವಜನಿಕರು ಈ ಬಗ್ಗೆ ಮುಕ್ತ ಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು.

ವರದಿ ಮಂಜುನಾಥ್ ಶೆಟ್ಟಿ…