ವಿಶ್ವ ಪರಿಸರದಿನದ ಅಂಗವಾಗಿ ನಗರದ ಏಳು ರೋಟರಿ ಕ್ಲಬ್ ಗಳು ಹಮ್ಮಿ ಕೊಂಡಿರುವ “ಬಯೋಡೈವರ್ಸಿಟಿ ಫಾರೆಸ್ಟ್” ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾರ್ಪೊರೇಟರ್ ವಿಶ್ವಾಸ್ ರವರು
ನಮ್ಮ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸುವ ಪ್ರತಿಜ್ಞೆ ಕೈಗೊಳ್ಳೊಣ. ಇದು ನಮ್ಮೆಲ್ಲರ ಹೊಣೆ ಎಂದರು.

‘ಇರುವುದೊಂದೆ ಭೂಮಿ ಅದನ್ನು ಕಾಪಾಡಿ ಕೊಳ್ಳೋಣ’ ಎಂಬ ಘೊಷ ವಾಕ್ಯದೊಂದಿಗೆ ಇಂದು ವಿಶ್ವಾದ್ಯಂತ ಪರಿಸರ ದಿನ ಆಚರಿಸುತ್ತಿದ್ದಾರೆ. ನಮ್ಮ ನಗರದ ರೋಟರಿಯವರು ಒಂದು ಹೆಜ್ಜೆ ಮುಂದೆ ಹೋಗಿ, ತುಂಗಾ ಮೇಲ್ದಂಡೆ ಪ್ರದೇಶದ ಜಾಗದಲ್ಲಿ ಕಾಡನು ಬೆಳೆಸುವ ಕಾರ್ಯಕ್ಕೆ ಕೈ ಹಾಕಿರುವುದು ಉತ್ತಮ ಕಾರ್ಯ. ಆಮ್ಲಜನಕದ ಬೆಳೆ ಕಳೆದ ಎರಡು ವರ್ಷದಿಂದ ಎಲ್ಲರಿಗೂ ತಿಳಿದಿದೆ. ಉಚಿತವಾಗಿ ದೊರಕುತ್ತಿದ್ದ ಗಾಳಿ, ಬೆಳಕು, ನೀರಿಗಾಗಿ ಇಂದು ಹಣ ಕೊಟ್ಟರೂ ಸಿಗದಂತಹ ಪರಿಸ್ಥಿತಿ ಉದ್ಭವವಾಗಿದೆ. ಇನ್ನಾದರು ಎಲ್ಲರೂ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಇದಕ್ಕಾಗಿ ನಗರದ ಎಲ್ಲಾ ಪ್ರಜೆಗಳು ಈ ಕಾಡು ಬೆಳಿಸುವ ಕಾರ್ಯಕ್ಕೆ ಕೈ ಜೋಡಿಸಿ ಯಶಸ್ವಿ ಗೊಳಿಸೋಣ ಎಂದರು.

ಡೈವರ್ಸಿಟಿ ಪಾರ್ಕ್ ನ ಎಸ್.ಉಮೇಶ್ ರವರು ಮಾತನಾಡುತ್ತ, ರೋಟರಿಯಿಂದ ಇಪ್ಪತ್ತು ಸಾವಿರ ವಿವಿದ ಜಾತಿಯ ಮರಗಳನ್ನು ಬೆಳೆಸುವ ಸಂಕಲ್ಪವಿದ್ದು ಈಗಾಗಲೆ ಎರಡು ಸಾವಿರ ಸಸಿಗಳನ್ನು ನೆಡಲಾಗಿದೆ. ಅವುಗಳ ಸಂರಕ್ಷಣೆ ಗೋಸ್ಕರ ಹಲವು ಶಾಲಾ ಮಕ್ಕಳು ಆಗಮಿಸಿ ಆವರಣ ಶುಚಿ ಗೊಳಿಸಿ, ಸಸಿ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸುತ್ತಿದ್ದಾರೆ ಎಂದರು.
ಪ್ರೋ.ಚಂದ್ರಶೇಖರ್ ರವರು ರೋಟರಿ ಯೊಂದಿಗೆ ಸಾರ್ವಜನಿಕರು ಕೈ ಜೋಡಿಸಿ ಈ ಮಹತ್ ಕಾರ್ಯ ಪೂರ್ಣಗೊಳಿಸಲು ಸಹಕಾರ ಕೋರಿದರು.ಇದೆ ಸಂರ್ಭದಲ್ಲಿ ರೋಟರಿ ಸದಸ್ಯರು ಮಕ್ಕಳು ಹಾಗೂ ಮಹಿಳೆಯರಿಂದ ಸ್ವಚ್ಛತ ಕಾರ್ಯ ನೆರವೇರಿತು.

ಈ ಸಂದರ್ಭದಲ್ಲಿ ವಲಯ 10ರ ಸಹಾಯಹ ಗೌರ್ನರ್ ಆನಂದ ಮೂರ್ತಿ,ರೋಟರಿ ಕ್ಲಬ್ ಗಳ ಅಧ್ಯಕ್ಷ ರುಗಳಾದ ಕಿಶೋರ್ ಶಿರನಾಳಿ ವಿಜಯಪ್ರಕಾಶ್,ಶಂಕರ್ ಶಂಕರ್, ಡಾ.ಗುಡದಪ್ಪ ಕಸಬಿ,ವಲಯ ಸೇನಾನಿ ಕೆ.ಪಿ.ಶೆಟ್ಟಿ,ಮಾಜಿ ಸಹಾಯಕ ಗೌರ್ನರ್ ಜಿ ವಿಜಯಕುಮಾರ್, ವಾಗೇಶ್, ವೀಣಾ. ಬಸವರಾಜ್ ಅನಿಲ್ ಪಿ ಶೆಟ್ಟಿ ಸುರೇಶ.ಇಂಡೋ ಕಿಡ್ಸ್ ಶಾಲಾ ಮಕ್ಕಳು,ಶಿಕ್ಷಕರು ಉಪಾದ್ಯಾಯರು ಸಾರ್ವಜನಿಕರು ಪಾಲ್ಗೊಂಡಿದ್ದರು.

ವರದಿ ಮಂಜುನಾಥ್ ಶೆಟ್ಟಿ…