ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ NSS ಘಟಕಗಳು, ಕ್ರೀಡಾ ವಿಭಾಗ, ಕಣಾದ ಯೋಗ & ರಿಸರ್ಚ್ ಫೌಂಡೇಷನ್ (ರಿ) ಮತ್ತು ರಾಷ್ಟ್ರೀಯ ಶಿಕ್ಷಣ ಮಹಾ ವಿದ್ಯಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಚಂದನ ಸಭಾಂಗಣ ದಲ್ಲಿ ಕಾಲೇಜು ವಿದ್ಯಾರ್ಥಿಗಳ ಸಮ್ಮುಖದಲ್ಲಿ “ವಿಶ್ವ ಯೋಗ ದಿನಾಚರಣೆ”ಯನ್ನು ಆಚರಿಸಲಾಯಿತು.

ಯೋಗ ದಿನಾಚರಣೆ ಕೇವಲ ವೇದಿಕೆ ಕಾರ್ಯಕ್ರಮಕ್ಕೆ ಮಾತ್ರವೇ ಸೀಮಿತವಾಗಬಾರದು,ಬದಲಿಗೆ ಯೋಗ ಎನ್ನುವುದು ನಿತ್ಯದ ದಿನಚರಿಯ ಒಂದು ಭಾಗವಾದಲ್ಲಿ ಮಾತ್ರವೇ ಯೋಗ ದಿನಾಚರಣೆಗೊಂದು ಮಹತ್ವ ಬರುತ್ತದೆ, ಅಲ್ಲದೇ ವಿದೇಶಗಳಲ್ಲಿ ಯೋಗಕ್ಕೆ ಮತ್ತು ಯೋಗ ಶಿಕ್ಷಕರಿಗೆ ಬಹಳ ಬೇಡಿಕೆಯಿದ್ದು ವಿದ್ಯಾರ್ಥಿಗಳು ಯೋಗವನ್ನು ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ಒಂದು ಪ್ರವೃತ್ತಿಯನ್ನಾಗಿಸಿಕೊಂಡಲ್ಲಿ ಆರೋಗ್ಯದ ಜೊತೆಜೊತೆಯಾಗಿ ಉತ್ತಮ ಹಣ ಮತ್ತು ಹೆಸರನ್ನು ಸಹ ಗಳಿಸಬಹುದಾಗಿದೆ,ಆದ್ದರಿಂದ ಯುವಜನರು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅನೇಕ ಯೋಜನೆಗಳಲ್ಲಿ, ಉದ್ಯೋಗ ಆಧಾರಿತ ಯೋಗ ಕೋಸ್೯ಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ ಎಂದು ಸಸಿಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ‌ಉದ್ಘಾಟಿಸಿದ “ಕರ್ನಾಟಕ ಕ್ರೀಡಾ ರತ್ನ” ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಅನಿಲ್ ಕುಮಾರ್. ಹೆಚ್. ಶೆಟ್ಟರ್ ರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಚಿದಾನಂದ ಎನ್.ಕೆ.,ರೋಟರಿ ಜಿ.ವಿಜಯಕುಮಾರ್ ಪಾಲ್ಗೊಂಡಿದ್ದರು.ಯೋಗ ಪಟುಗಳಾದ ಕುಮಾರಿ ಧನ್ವಿ, ಸಂಜನಾ, ಕುಮಾರ ಆದಿತ್ಯ, ಛತ್ರಪತಿಯವರುಗಳು ಯೋಗದ ಪ್ರದರ್ಶನವನ್ನು ನೀಡಿದರು.ಕ್ರೀಡಾ ವಿಭಾಗದ ವಿದ್ಯಾರ್ಥಿಗಳಿಂದ ಸ್ವಾಗತ, ನಿರೂಪಣೆ, ವಂದನಾರ್ಪಣೆ ನೆರೆವೇರಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಹೆಚ್.ಎಂ.ಸುರೇಶ ರವರು ವಹಿಸಿದ್ದರು.ಕ್ರೀಡಾ ವಿಭಾಗದ ಸಂಚಾಲಕರಾದ ಕೆ.ಎಂ.ನಾಗರಾಜುರವರು ಕಾರ್ಯಕ್ರಮ ನಿರ್ವಹಿಸಿದರು.

ವರದಿ ಮಂಜುನಾಥ್ ಶೆಟ್ಟಿ…