ಶಿವಮೊಗ್ಗ: ಡಿ.ವಿ.ಎಸ್. ಸಂಜೆ ಕಾಲೇಜು ಶಿವಮೊಗ್ಗ ನಗರದ ಶಿಕ್ಷಣ ಸಂಸ್ಥೆಯಾಗಿದೆ, ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯವನ್ನು ಕಂಡುಕೊAಡು ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದು ನಗರದ ಪ್ರಮುಖ ಗುತ್ತಿಗೆದಾರರು, ದೇಶಿಯ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಕೋರ್ ಕಮಿಟಿಯ ಅಧ್ಯಕ್ಷರಾದ ಎನ್.ಎಮ್.ಸಿ.ಮಂಜುನಾಥ್ ರವರು ತಿಳಿಸಿದರು.

ಅವರು ಬುಧುವಾರ ಸಂಜೆ ದೇಶೀಯ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡುತ್ತ ಶ್ರಮಜೀವಿಗಳಿಗೆ ದಾರಿದೀಪ ಡಿ.ವಿ.ಎಸ್. ಸಂಜೆ ಕಾಲೇಜು ಈ ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಪದೋನ್ನತಿ ಪಡೆದಿರುವುದು. ಅಷ್ಟೆ ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಭವ್ಯ ಜೀವನ ನಡೆಸುತ್ತಿದ್ದಾರೆ. ಹತ್ತು ಹಲವಾರು ವಿದ್ಯಾರ್ಥಿಗಳು ಸ್ವಂತ ಉದ್ಯೋಗವನ್ನು ಆರಿಸಿಕೊಂಡು ದೊಡ್ಡ ದೊಡ್ಡ ಉಧ್ಯಮವನ್ನು ನಡೆಸುತ್ತಿದ್ದಾರೆ. ಅಲ್ಲದೆ ನೂರಾರು ಜನರಿಗೆ ನೌಕರಿ ನೀಡಿದ್ದಾರೆ. ಇಂತಹ ಸಂಸ್ಥೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳಲ್ಲಿ ನಾನು ಒಬ್ಬ ಎಂದು ಹೇಳಿಕೊಳ್ಳಲು ಸಂತೋಷವಾಗುತ್ತದೆ ಎಂದರು.
ಹಲವಾರು ಕಾರಣದಿಂದ ನಿತ್ಯ ಕಾಲೇಜಿಗೆ ಹೋಗಲಾಗದೆ, ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಕಾಲೇಜು ಓದಿದ ಹಲವಾರು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಎಮ್.ಎಲ್.ಏ, ಹಿರಿಯ ಅದಿsಕಾರಿಯಾಗಿ, ನ್ಯಾಯಾಲಯದಲ್ಲಿ ನ್ಯಾಯಾದಿsÃಶರಾಗಿ, ಪೋಲಿಸ್ ಉನ್ನತ ಹುದ್ಧೆಯನ್ನು ಅಲಂಕರಿಸಿದವರು, ಬಹಳ ಜನರಿದ್ದಾರೆ ಎಂದು ತಮ್ಮ ಸಹಪಾಠಿಗಳ ಸಾಧನೆ ತಿಳಿಸಿದರು.

ಕಾಲೇಜಿನ ಈ ಸಾಧನೆಗೆ ಕಾಲೇಜನ್ನು ನಡೆಸುತ್ತಿರುವ ದೇಶೀಯ ವಿದ್ಯಾ ಶಾಲಾ ಸಮಿತಿ ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಲ್ಲ ಸಂಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಕನಿಷ್ಠ ಶುಲ್ಕವನ್ನು ಮಾತ್ರ ತೆಗೆದುಕೊಳ್ಳಲಾಗುತ್ತಾರೆ. ಈ ಕಾಲೇಜಿನ ಬಹಳಷ್ಟು ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗವನ್ನು ಡಿ.ವಿ.ಎಸ್ ಆಡಳಿತ ಮಂಡಳಿ ನೇಮಕ ಮಾಡಿಕೊಂಡಿದೆ. ಪ್ರತಿ ವರ್ಷ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಿ ಸಂಜೆ ಕಾಲೇಜನ್ನು ನಡೆಸುತ್ತಿರುವ ಡಿ.ವಿ.ಎಸ್. ಆಡಳಿತ ಮಂಡಳಿಗೆ ಲಾಭಗಳಿಕೆಯ ಉದ್ದೇಶವಿಲ್ಲ. ಇದು ಕಾಲೇಜಿನ ಆಡಳಿತ ಮಂಡಳಿ ಜನಪರ ಕಾಳಜಿ ಮತ್ತು ಸಮಾಜ ಸೇವೆ ಉದ್ದೇಶ ಹೊಂದಿರುವುದಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಇದಕ್ಕಾಗಿ ಡಿ.ವಿ.ಎಸ್. ಸಂಜೆ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಡಂಘದ ಪರವಾಗಿ ಕಾಲೇಜಿನ ಆಡಳಿತ ಮಂಡಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆರ ಎಂದರು.

ವೇದಿಕೆಯಲ್ಲಿ ದೇಶಿಯ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಕೋರ್ ಕಮಿಟಿಯ ಕಾರ್ಯದರ್ಶಿ ಎಸ್.ಆರ್.ಹಾಲಸ್ವಾಮಿ, ಅ.ನ. ವಿಜಯೇಂದ್ರ ,ದೇಶೀಯ ವಿದ್ಯಾಶಾಲೆಯ ಕಲಾ ಮತ್ತು ವಿಜ್ಙಾನ ಕಾಲೇಜಿನ ಸಸ್ಯಶಾಸ್ತದ ಮುಖ್ಯಸ್ಥರಾದ ಪ್ರೋಫೇಸರ್ ಸುಧಾಕರ್, ದೇಶೀಯ ಸಂಜೆ ಕಾಲೇಜಿನ ಪ್ರಾಂಶುಪಾಲ ಪದ್ಮೇಗೌಡ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…