ರೋಟರಿ ಕ್ಲಬ್ ಶಿವಮೊಗ್ಗ ಜೂಬಲಿಯಿಂದ ಇಂದು ಹಸಿದವರಿಗೆ ಅಹಾರ ನೀಡುವ ಸಂಕಲ್ಪ ದಿನದ ಸಂದರ್ಭದಲ್ಲಿ ಚೊಚ್ಚಲ ಕಾರ್ಯಕ್ರಮವಾಗಿ ಶಿವಮೊಗ್ಗದ ರೋಟರಿ ಜೂಬಲಿಯ ನೂತನ ಅಧ್ಯಕ್ಷ ಸುರೇಶ ರವರು ತಮ್ಮ ಕ್ಲಬ್‌ನ ಎಲ್ಲಾ ಸದಸ್ಯರೊಂದಿಗೆ ಶಿವಮೊಗ್ಗದ ವ್ರದ್ದರ ಅಶ್ರಯತಾಣ ಗುಡ್ ಲಕ್ ಅರೈಕೆ ಕೇಂದ್ರಕ್ಕೆ ಬೇಟೆ ಮಾಡಿ ಅಲ್ಲಿನ ಪಲಾನುಭವಿಗಳ ಯೊಗಕ್ಷೇಮ ವಿಚಾರಿಸಿ ಅನ್ನಪೂರ್ಣೇಶ್ವರಿ ನಿಧಿಗೆ ದೇಣಿಗೆ ಮತ್ತು ಹಣ್ಣು ಹಂಪಲು ನೀಡಿ ಈ ವರ್ಷದ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡುತ್ತಾ ವ್ರದ್ದರ,ಅಂಗವಿಕಲರ,ಬುಧ್ದಿಮಾಂದ್ಯರ ಸೇವೆ ದೇವರ ಸೇವೆಗೆ ಸಮ,ಅಸಹಾಯಕರಿಗೆ ಸಾಂತ್ವನ ನೇಡುವುದು ರೋಟರಿಯ ಮಂತ್ರ ಎಂಬಂತೆ ಪ್ರಪಂಚದಾದ್ಯಂತ ಕೊರೋನಾ ಮಹಾಮಾರಿ ಬಂದಾಗ ಸಾವಿರಾರು ಜನರನ್ನು ಸಾವಿನ ದವಡೆಯಿಂದ ಪಾರುಮಾಡಿದ ಸಂಸ್ಥೆ ರೋಟರಿ. ವ್ರತ್ತಿ ಜೊತೆಗೆ ಸಮಾಜಸೇವೆ ರೋಟರಿ ಸದಸ್ಯರ ವಿಶೇಷತೆ ಇಂತವರನ್ನು ಪ್ರೀತಿಸುವ ದಿನಾಚರಣೆಯನ್ನು ವರ್ಷದ 365 ದಿನ ಆಚರಿಸಬೇಕೆಂದು ತಿಳಿಸಿದರು.
ಗುಡ್ಲಕ್ ಅರೈಕೆ ಕೇಂದ್ರದಲ್ಲಿರುವ ಅನಾಥರಿಗೆ, ಪಾರ್ಶ್ವವಾಯು ಪೀಡಿತರಿಗೆ ಮತ್ತು ಬುಧ್ದಿಮಾಂದ್ಯರಿಗೆ ಉಚಿತ ಸೇವೆಯನ್ನು ಕಳೆದ ಹಲವಾರು ವರ್ಷದಿಂದ ನೀಡುತ್ತಿರುವ ಕೇಂದ್ರದ ಸೇವೆ ಸದಾ ಸ್ಮರಣೀಯ ಹಾಗೂ ಅನುಕರಣೀಯ ಇದನ್ನು ಎಲ್ಲರೂ ಅಳವಡಿಸಿಕೊಂಡಲ್ಲಿ ಸಮಾಜದ ಬೆಳವಣಿಗೆ ಸಾದ್ಯ ಅಂತ ತಿಳಿಸಿದರು.ಈ ಕಾರ್ಯಕ್ರಮದಲ್ಲಿ , , ಜಿ ವಿಜಯಕುಮಾರ್, ಅರೈಕೆ ಕೇಂದ್ರದ ಅಧ್ಯಕ್ಷರಾದ ರವೀಂದ್ರನಾಥ ಐತಾಳ, ರೋಟರಿ ಜೂಬಲಿಯ ಮಾಜಿ ಅಧ್ಯಕ್ಷರಾದ ರೇವಣ್ಣಸಿದ್ದಪ್ಪ, ಅಶ್ವಥ್, ಸುರೇಂದ್ರ.ಬಿ,ಉಮಾ,ಲಕ್ಮೀನಾರಾಯಣ ,ಕಾರ್ಯದರ್ಶಿ ವೆಂಕಟೇಶ ಎಸ್ ಗುತ್ತಲ್,ಅರೈಕೆ ಕೇಂದ್ರದ ಪಂಚಾಕ್ಷರಿ ಹಿರೇಮಠ ಮತ್ತು ಶಿವಪ್ಪಗೌಡರು ಉಪಸ್ಥಿತರಿದ್ದರು.