ಕೋವಿಡ 19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಜನರಿಗೆ ಕೆಲಸವಿಲ್ಲದೆ ಸಂಕಷ್ಟ ಪಡುತ್ತಿರುವುದನ್ನು ಗಮನಿಸಿದ ಸರ್ಕಾರ 1 ಯೂನಿಟ್ ಗೆ 10 kg ಯಂತೆ ಪಡಿತರದಾರರಿಗೆ ಅಕ್ಕಿ ವಿತರಿಸುವಂತೆ ಆದೇಶಿಸಿದೆ .ಇದನ್ನು ದುರ್ಬಳಕೆ ಮಾಡಿಕೊಂಡ ಶಿವಮೊಗ್ಗ ನಗರದ ಆರ್ ಎಂ ಎಲ್ ನಗರದಲ್ಲಿರುವ ನ್ಯಾಯಬೆಲೆ ಅಂಗಡಿ ಸಂಖ್ಯೆ 125 ಇದರ ಮಾಲೀಕರಾದ ಕೆ ನಾಗರಾಜ್ ಇವರು ಪಡಿತರದಾರರಿಂದ ಅಡ್ವಾನ್ಸ್ ಆಗಿ ಹೆಬ್ಬೆಟ್ಟಿನ ಗುರುತು ಪಡೆದುಕೊಂಡು ಪಡಿತರದಾರರಿಗೆ ಅಕ್ಕಿಯನ್ನು ವಿತರಿಸದೆ ಕಳ್ಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು.
ಭಾತ್ಮದಾರರ ಖಚಿತ ಮಾಹಿತಿ ಮೇರೆಗೆ 22/05/21 ರಂದು ಆಹಾರ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಆಹಾರ ನಿರೀಕ್ಷಕರು ಸದರಿ ನ್ಯಾಯಬೆಲೆ ಅಂಗಡಿಗೆ ದಾಳಿ ಮಾಡಿ ಪರಿಶೀಲಿಸಿದಾಗ 96 ಕ್ವಿಂಟಾಲ್ ಅಕ್ಕಿ ಮತ್ತು 1 ಕ್ವಿಂಟಾಲ್ ಅಕ್ಕಿ ಇರುವುದು ಕಂಡು ಬಂದಿದ್ದಲ್ಲದೆ ಅಂಗಡಿ ಮಳಿಗೆಯ ಹೊರಗಡೆ ಪಾಲಿಥಿನ್ ಚೀಲಗಳಿಗೆ ತುಂಬಿ ರುವ 18 ಅಕ್ಕಿ ಚೀಲಗಳಿರುವುದು ಕಂಡುಬಂದಿರುತ್ತದೆ .ಹೆಚ್ಚುವರಿಯಾಗಿ ಅಕ್ಕಿ ಜಾಸ್ತಿ ಇರುವುದು ಹೇಗೆ ಎಂದು ಅಧಿಕಾರಿಗಳು ಅಂಗಡಿ ಮಾಲೀಕ ನಾಗರಾಜ್ ಅವರಿಗೆ ಕೇಳಿದರೆ ನಾನೇ ಕಾರ್ಡ್ ದಾರರಿಂದ 12 ರೂ ನಂತೆ ಖರೀದಿ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಸರ್ಕಾರ ಇವರಿಗೆ ಪಡಿತರದಾರರಿಗೆ ಪಡಿತರ ಧಾನ್ಯಗಳನ್ನು ವಿತರಣೆ ಮಾಡಲು ಲೈಸೆನ್ಸ್ ನೀಡಿದೆಯೇ ಹೊರತು ಕಾರ್ಡ್ ದಾರರಿಂದ ಅಕ್ಕಿಯನ್ನು ಇವರಿಗೆ ಲೈಸೆನ್ಸ್ ನೀಡಿರುವುದಿಲ್ಲ . ಮತ್ತು ಅಂಗಡಿಯ ಮಾಲೀಕರು ಪ್ರತಿ ಕಾರ್ಡ್ ದಾರರಿಗೆ ತಲಾ 10/ ರೂ ನಂತೆ ವಸೂಲಿ ಮಾಡುತ್ತಿರುವುದು ನ್ಯಾಯಬೆಲೆ ಅಂಗಡಿಯ ಮಾಲೀಕರು ಪ್ರತಿ ಕಾರ್ಡ್ ದಾರರಿಂದ ತಲಾ ಹತ್ತು ರೂ ನಂತೆ ವಸೂಲಿ ಮಾಡುತ್ತಿರುವುದು ನ್ಯಾಯಬೆಲೆ ಅಂಗಡಿಯ ಮುಂದೆ ದಾಸ್ತಾನು ವಿವರವನ್ನು ಬರೆಯದಿರುವುದು , ನೆಲದ ಮೇಲೆ ಅಕ್ಕಿ ವಿತರಿಸುತ್ತಿದ್ದ ಹಾಕಿ ನೆಲಹಾಸು ಹಾಕಿ ಸ್ವಚ್ಛತೆ ಕಾಪಾಡುವುದು ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಗಳ ಸ್ಯಾಂಪಲ್ ನೀಡದಿರುವುದು . ನ್ಯಾಯಬೆಲೆ ಅಂಗಡಿಯ ಪ್ರಾಧಿಕಾರ ಪತ್ರವನ್ನು ಪ್ರದರ್ಶಿಸದಿರುವುದು , ಸೋಪನ್ನು ನೀಡಿ 20 ರೂ ವಸೂಲಿ ಮಾಡುತ್ತಿರುವುದರ ಬಗ್ಗೆ ವಿವರವುಳ್ಳ ವರದಿಯನ್ನು ಆಹಾರ ಇಲಾಖೆಯ ಸಹಾಯಕ ನಿರ್ದೇಶಕರು ಮಾನ್ಯ ಜಂಟಿ ನಿರ್ದೇಶಕರಿಗೆ ಸಲ್ಲಿಸಿ ಸದರಿ ನ್ಯಾಯಬೆಲೆ ಅಂಗಡಿ ವಿರುದ್ಧ ಕ್ರಮ ಕೈಗೊಳ್ಳಲು ಕೋರಿರುತ್ತಾರೆ . ಈ ವರದಿಯ ಅನುಸಾರ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಮಾನ್ಯ ಜಂಟಿ ನಿರ್ದೇಶಕರು ಶಿವಮೊಗ್ಗ ಆರ್ ಎಂ ಎಲ್ ನಗರ ದಲ್ಲಿರುವ ಅಂಗಡಿ ಸಂಖ್ಯೆ 125 ಈ ನ್ಯಾಯಬೆಲೆ ಅಂಗಡಿಯನ್ನು ವಿಚಾರಣೆಗೆ ಕಾಯ್ದಿರಿಸಿ ದಿನಾಂಕ 1/06/2021 ರಂದು ಅಮಾನತುಪಡಿಸಿ ಆದೇಶ ನೀಡಿದ್ದಾರೆ ನಂತರ ಅಂಗಡಿ ಸಂಖ್ಯೆ 125 ರ ಮಾಲೀಕ ನಾಗರಾಜ್ ಇವರು ನಗರ ನಗರದ ಪ್ರಭಾವಿ ರಾಜಕಾರಣಿಗಳ ಪ್ರಭಾವ ಬಳಸಿ ಮಾನ್ಯ ಜಂಟಿ ನಿರ್ದೇಶಕರು ನೀಡಿದ್ದ ಅಂಗಡಿ ಸಂಖ್ಯೆ 125 ರ ಅಮಾನತು ಆದೇಶಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ದಿನಾಂಕ 7/06/2021 ರಂದು ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ .
ಜಿಲ್ಲಾಧಿಕಾರಿಗಳು ಅಂಗಡಿ ಸಂಖ್ಯೆ 125 ರ ನ್ಯಾಯಬೆಲೆ ಅಂಗಡಿಯ ಲೈಸನ್ಸ್ ನನ್ನು ತಕ್ಷಣವೇ ರದ್ದುಪಡಿಸಬೇಕು. ಮತ್ತು ಕಳ್ಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡಿ ಸಿಕ್ಕಿಬಿದ್ದ ಹಾಗೂ ಸದರಿ ಅಂಗಡಿಯಲ್ಲಿದ್ದ ಹೆಚ್ಚುವರಿ 96 ಕ್ವಿಂಟಾಲ್ ಅಕ್ಕಿ ಮತ್ತು 01 ಕ್ವಿಂಟಾಲ್ ಗೋಧಿಯನ್ನು ಸಂಗ್ರಹಿಸಿದ ಸದರಿ ನ್ಯಾಯಬೆಲೆ ಅಂಗಡಿ ಮಾಲೀಕ ಕೆ ನಾಗರಾಜ್ ರವರ ವಿರುದ್ಧ ಅಧಿಕಾರಿಗಳು ಪೊಲೀಸ್ ಪ್ರಕರಣವನ್ನು ದಾಖಲಿಸಬೇಕು ಮತ್ತು ಅಂಗಡಿ ಸಂಖ್ಯೆ 125 ರ ನ್ಯಾಯಬೆಲೆ ಅಂಗಡಿ ಮಾಲೀಕನ ಹತ್ತಿರ ಪ್ರಸಾದ ತಿಂದು ನಾಗರಾಜ್ ರವರ ಪರವಾಗಿ ವಕಾಲತ್ತು ವಹಿಸಿ ನೆನ್ನೆ ದಿವಸ ಧರಣಿ ಮಾಡಿದ ಮಾನವ ಸಂರಕ್ಷಣೆ ಸಮಿತಿಯ ಸ್ವಯಂ ಘೋಷಿತ ಮುಖಂಡರನ್ನು ಪೊಲೀಸ್ ಇಲಾಖೆ ತಕ್ಷಣ ಬಂದಿದೆ ತಕ್ಷಣ ಪ್ರಕರಣವೇ ಬಂಧಿಸಬೇಕೆಂದು ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ಮನವಿ ಮಾಡಿಕೊಂಡರು . ಈ ಸಂದರ್ಭದಲ್ಲಿ ಮಂಜುನಾಥ , ನಿತಿನ್ , ರವಿ , ಮಾರುತಿ , ಲೋಕೇಶ್ ಉಪಸ್ಥಿತರಿದ್ದರು .
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153