ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಂದಿನ ಆಡಳಿತ ವ್ಯವಸ್ಥೆ ಸಮಾಜವನ್ನು ನಡೆಸಿಕೊಂಡ ಬಗೆ,ಆ ಸಂದರ್ಭದಲ್ಲಿ ಅದನ್ನು ಪ್ರತಿರೋಧಿಸಿ ನೂವುಂಡು, ಯಾತನೆಗಳನ್ನನುಭವಿಸಿ ಜೈಲುವಾಸ ಅನುಭವಿಸಿದ ಹಿರಿಯರನ್ನು ಭೇಟಿ ಮಾಡಿ, ಅವರ ಅನುಭವವನ್ನು ಕೇಳಿದಾಗ, ನಿಜಕ್ಕೂ ಇವರ ಅಂದಿನ ಪ್ರತಿರೋಧ, ಅದರ ಹಿಂದಿನ ಧ್ಯೇಯ, ಹಾಗೂ ಮುಂದೇನಾಗಬಹುದೆಂಬ ಕಲ್ಪನೆ ಇಲ್ಲದೆ ಸಹಜವಾಗಿ ತಪ್ಪಾಗುತ್ತಿರುವುದನ್ನು ಖಂಡಿಸಿ ಪ್ರತಿಭಟಿಸುವ ಮಾನಸಿಕತೆ ಇಂದಿನ ಯುವ ಜನರು ಗಮನಿಸಬೇಕಾದ ವಿಷಯ.ಇಂತಹ ಒಂದು ವಿಶೇಷ ಸಂದರ್ಭ ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಜನತಾ ಪಾರ್ಟಿಯು ತುರ್ತು ಪರಿಸ್ಥಿತಿ” ಸಂದರ್ಭದಲ್ಲಿ ನಮ್ಮ ಹಿರಿಯರ ಅನುಭವ ನೆನಪಿಸುವ ಸಲುವಾಗಿ ಪಕ್ಷ ಕೊಟ್ಟ ಕರೆಯ ಮೇರೆಗೆ ರಾಷ್ಟ್ರದಾದ್ಯಂತ, ರಾಜ್ಯದಾದ್ಯಂತ, ಅಂತೆಯೇ ನಮ್ಮ ಜಿಲ್ಲೆಯಲ್ಲಿಯೂ ಕೂಡ ಈ ಒಂದು ಕರಾಳ ಸಂದರ್ಭದ ನೆನಪಿಗಾಗಿ ಜಿಲ್ಲೆಯಾದ್ಯಂತ ಈ ರೀತಿ ಯಾರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮೀಸಾ(ಮೈಂಟೇನೆನ್ಸ್ ಆಫ್ ಇಂಟರ್ನಲ್ ಸೆಕ್ಯೂರಿಟಿ) ಹಾಗೂ ಡಿ ಐ ಆರ್ (ಡಿಫೆನ್ಸ್ ಇಂಟರ್ನಲ್ ರೂಲ್ಸ್) ನಲ್ಲಿ ಬಂದನಕ್ಕೊಳಗಾಗಿದ್ದಾರೋ ಅವರನ್ನು ಗುರುತಿಸಿ ಕರೋನ ಕಾರಣ ಅವರಿರುವ ಸ್ಥಳಕ್ಕೆ ಹೋಗಿ ಅವರನ್ನು ಗೌರವಿಸುವ/ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು,ಜಿಲ್ಲೆಯ ಹತ್ತು ಮಂಡಲಗಳಲ್ಲಿ ಈ ರೀತಿಯ ಕಾರ್ಯ ನಡೆಯುತ್ತಿದೆ.ಅದರ ಭಾಗವಾಗಿ ಇಂದು ನಮ್ಮೆಲ್ಲರ ಸುಯೋಗ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ “ಸಂಸ್ಕೃತ ಗ್ರಾಮ” ಖ್ಯಾತಿಯ ಮತ್ತೂರಿನಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಹಳಷ್ಟು ಜನರು ಬಂಧನಕ್ಕೊಳಗಾಗಿದ್ದು,ಅದರಲ್ಲಿ ಇಂದು ನಾವು ಸಾಂಕೇತಿಕವಾಗಿ ಈ ಕ್ಷಣದಲ್ಲಿ ದೊರೆತಂತಹ ಕೆಲವರನ್ನು ಮಾತ್ರ ಗೌರವಿಸಲಾಯಿತು.

ಗೌರವಸಲ್ಪಟ್ಟ ಪ್ರಮುಖರು.

1)ಶ್ರೀ ಯುತ ಪಟ್ಟಾಭಿರಾಮ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಕಾರ್ಯಾವಾಹರು,
ನಿವೃತ್ತ ಬ್ಯಾಂಕ್ ಉದ್ಯೋಗಿಗಳು.
2)ಶ್ರೀ ವೆಂಕಟೇಶ ಎಂ ಆರ್.ಕೃಷಿಕರು
3)ಶ್ರೀ ಗೋಪಾಲ (ಗೋಪು)ನಿವೃತ್ತ ದೂರವಾಣಿ ಇಲಾಖೆ ನೌಕರರು.
4)ಶ್ರೀ ಲಕ್ಷ್ಮಿ ಕೇಶವ, ಕೃಷಿಕರು.
5)ಟಿ ನಾರಾಯಣ ಸ್ವಾಮಿ. (ಟಿ ಎನ್ ಸ್ವಾಮಿ) ನಿವೃತ್ತ ದೂರವಾಣಿ ಇಲಾಖೆ ನೌಕರರು. ಹಾಗೂ ಕೃಷಿಕರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಟಿ ಡಿ ಮೇಘರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಧರ್ಮಪ್ರಸಾದ್,ಜಿಲ್ಲಾ ಉಪಾಧ್ಯಕ್ಷರು, ಹಾಗೂ ಈ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ಬಿ ಆರ್ ಮಧುಸೂದನ, ರಾಜ್ಯ ಆರ್ಯ ವೈಶ್ಯ ಅಭಿವೃದ್ಧಿ ಮಂಡಳಿ ನಿಗಮದ ಅಧ್ಯಕ್ಷರಾದ ಡಿ ಎಸ್ ಅರುಣ್, ತುರ್ತು ಪರಿಸ್ಥಿತಿ ಕಾರ್ಯಕ್ರಮ ತಂಡದ ಪ್ರಮುಖರಾದ ಸಹನಾ ಚೇತನ್, ಚೇತನ್, ದಿನೇಶ್ ಆಚಾರ್ಯ, ಹಾಗೂ ವಿಕ್ರಮ್ ಇವರುಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153