ಆಗುಂಬೆ ನ್ಯೂಸ್…

ಮಾಜಿ ಸಚಿವರು ಕೆಪಿಸಿಸಿ ವಕ್ತಾರ ರಾದ ಶ್ರೀಮಾನ್ ಕಿಮ್ಮನೆ ರತ್ನಾಕರ್ ರವರು ಆಗುಂಬೆ ಘಾಟ್ ನ ದರೆ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಗಳಾದ ನಾಗರಾಜ್ ,ನವೀನ್ ,ಶಶಿಧರ್ ರವರೊಂದಿಗೆ ಘಾಟಿಯ ಬಗ್ಗೆ ಮಾಹಿತಿ ಪಡೆದುಕೊಂಡರು.ತಮ್ಮ ಅವಧಿಯಲ್ಲಿಯೇ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಿದ್ದು ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಅಧಿಕಾರಿಗಳಾದ ಅರಣ್ಯ ಇಲಾಖೆ ಆರ್ ಎಫ್ ಒ ಗೌರವ ಹೆಬ್ರಿ ,ತೀರ್ಥಹಳ್ಳಿ ತಾಲ್ಲೂಕು ದಂಡಾಧಿಕಾರಿಯಾದ ಅಮೃತ್ ರಾಜ್ ,ಆಗುಂಬೆ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ ಅಧಿಕಾರಿಗಳು ಜೊತೆಯಲ್ಲಿದ್ದರು.

ನಂತರ ಯುಆರ್ ಅನಂತಮೂರ್ತಿ ಪ್ರೌಢ ಶಾಲೆಯ ಸಹ ಶಿಕ್ಷಕರಾದ ಕೌರಿ ಬೆಲ್ ಕೃಷ್ಣಮೂರ್ತಿ ರವರು ಅನಾರೋಗ್ಯದ ನಿಮಿತ್ತ ನಿಧನರಾಗಿದ್ದರು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.ನಂತರ ಮುಳುಬಾಗಿಲು ಗ್ರಾಪಂ ಸದಸ್ಯರಾದ ಮಂಜುನಾಥ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬಾಳೇಹಳ್ಳಿ ಪ್ರಭಾಕರ್ ,ಎಪಿಎಂಸಿ ಮಾಜಿ ಅಧ್ಯಕ್ಷರಾದ ಹಸಿರುಮನೆ ಮಹಾಬಲೇಶ್ ,ಗ್ರಾಮ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಮುಖಂಡರಾದ ಗುಡ್ಡೇಕೇರಿ ಶಶಾಂಕ್ ಹೆಗ್ಡೆ ,ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ವೆಂಕಟೇಶ್ ಹೆಗ್ಡೆ ಅವರು ,ಆಗುಂಬೆ ಬಾಯರ್ ,ಚಂದ್ರಶೇಖರ್ ,ಮಳಲಿ ಜಗದೀಶ್ ಜೊತೆಯಲ್ಲಿದ್ದರು.

ವರದಿ ಮಂಜುನಾಥ್ ಶೆಟ್ಟಿ…