ದಿನಾಂಕ: 15-07-2022 ರಂದು ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕೆಲವು ಘಟನೆಗಳು ನಡೆದಿದ್ದು, ಈ ಘಟನೆಗಳನ್ನ ಸಾರ್ವಜನಿಕರ ಗಮನಕ್ಕೆ ತರಲು ಇಚ್ಚಿಸುತ್ತೇವೆ. ಆಡಳಿತ ಪಕ್ಷದ ನಾಯಕರು ಎಸ್.ಎನ್. ಚನ್ನಬಸಪ್ಪ ನವರು ಸಭೆಯಲ್ಲಿ ಬಹಿರಂಗವಾಗಿ ಹೇಳಿಕೆಯನ್ನು ನೀಡುತ್ತಾ ಮಹಾನಗರ ಪಾಲಿಕೆಯ ಅಧಿಕಾರಿಗಳು 10% ಲಂಚಕ್ಕೆ ಹಾರಿದ್ದಾರೆ ಎಂಬ ಗಂಭೀರ ಆರೋಪವನ್ನು ಮಾಡಿದರು.ಇಷ್ಟೊಂದು ಭ್ರಷ್ಟಚಾರ ನಡೆಯುತ್ತಿದ್ದರು ಆಡಳಿತ ರೂಡ ಪಕ್ಷ ಆದಂತಹ ಬಿಜೆಪಿ ಪಕ್ಷವು ಕಳೆದ 4 ವರ್ಷಗಳಿಂದ ಆಡಳಿತ ನಡೆಸುತ್ತಿದ್ದು ಈ ಭ್ರಷ್ಟಾಚಾರದ ಬಗ್ಗೆ ಏಕೆ ಕ್ರಮ ತೆಗೆದುಕೊಂಡಿರುವುದಿಲ್ಲ ರಾಜ್ಯದಲ್ಲಿ ಈಗಾಗಲೇ 40% ಭ್ರಷ್ಟಚಾರದ ಬಿಜೆಪಿ ಸರ್ಕಾರ ಎಂದು ಕ್ಯಾತಿ ಪಡೆದಿದೆ ಈ ವಿಚಾರವಾಗಿ ಶಿವಮೊಗ್ಗ ನಗರದ ಶಾಸಕರಾದ ಕೆ.ಎಸ್.ಈಶ್ವರಪ್ಪ ನವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ಅದೇ ರೀತಿ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳು 10% ಎಂದು ಸಭೆಯಲ್ಲಿ ಆಡಳಿತ ಪಕ್ಷದ ನಾಯಕರ ಹೇಳಿಕೆ ನೀಡಿರುತ್ತಾರೆ ಪ್ರಸಿದ್ದರಾಗಿದ್ದಾರೆ ಈ 10% ಅಧಿಕಾರಿಗಳು ಯಾರು ಹಾಗೂ ಇವರ ಹಿಂದೆ ರಾಜಕಾರಣಿಗಳು ಇದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಇದರ ಬಗ್ಗೆ ಸೂಕ್ತ ತನಿಕೆಯಾಗಬೇಕೆಂದು ಮಾದ್ಯಮದ ಮುಖಾಂತರ ಕೇಳುತ್ತೇವೆ.
ಇದೇ ರೀತಿ ನಾಡಹಬ್ಬವಾದ ಶಿವಮೊಗ್ಗ ದಸರವು ಕಳೆದ ವರ್ಷ ಶಿವಮೊಗ್ಗ ನಗರದ ವಿವಿಧ ಭಾಗಗಳಲ್ಲಿ ಆಚರಿಸಲಾಗಿತ್ತು ಹಬ್ಬದ ಆಚರಣೆಗೆ ಅನೇಕ ಸಮಿತಿಗಳನ್ನು ರಚಿಸಿದ್ದು ಇದರ ಒಟ್ಟು ಮೊತ್ತ 1 ಕೋಟಿ 43 ಲಕ್ಷ ರೂ ಆಗಿರುತ್ತದೆ. ದಿನಾಂಕ: 30-09-2021 ರಂದು ಅಂದಿನ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ನವರ ನೇತ್ರತ್ವದಲ್ಲಿ 2021 ನೇ ಸಾಲಿನ ದಸರಾ ಆಚರಣೆ ವಿಚಾರವಾಗಿ ಸಭೆಯನ್ನು ಕರೆಯಲಾಗಿತ್ತ. ಆ ಸಭೆಯಲ್ಲಿ ಇಂದಿನ ಶಾಸಕರು ಬರವಸೆಯನ್ನು ನೀಡಿದ್ದು ಸರ್ಕಾರದಿಂದ ಸುಮಾರು 1 ಕೋಟಿ ರೂಪಾಯಿ ಬಿಡುಗಡೆ ಮಾಡಿಕೊಡುವುದಾಗಿ ಬರವಸೆಯನ್ನು ನೀಡಿದ್ದರು. ಆದರೇ ದಿನಾಂಕ: 05-03-2022 ರಂದು ಸರ್ಕಾರದ ಕಾರ್ಯದರ್ಶಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರು ಪತ್ರ ಬರೆದಿದ್ದು ಆರ್ಥಿಕ ಇಲಾಖೆಯ ಟಿಪ್ಪಣಿಯ ಅನ್ವಯ ಈಗಾಗಲೇ ದಸರ ಮಹೋತ್ಸವವು ಮುಗಿದಿರುತ್ತದೆ ಪ್ರಸ್ತುತ ಇರುವ ಆರ್ಥೀಕ ಒತ್ತಡಗಳ ಇನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಪರಿಗಣಿಸಲು ಸಾದ್ಯವಿರುವುದಿಲ್ಲವೆಂದು ಸರ್ಕಾರ ಕಾರ್ಯದರ್ಶಿಗಳಾದ ಕೆ.ಆರ್.ರಮೇಶ್ ರವರು ಪಾಲಿಕೆಗೆ ಪತ್ರ ಬರೆದಿರುತ್ತಾರೆ ಇದರಿಂದ ಮಹಾನಗರ ಪಾಲಿಕೆ ಆರ್ಥಿಕ ಹೊರೆ ಹೆಚ್ಚಾದಂತಗುತ್ತಿದೆ. ನಾಡಹಬ್ಬವಾದ ದಸರ ಹಬ್ಬಕ್ಕೆ ಸರ್ಕಾರದಿಂಧ ಹಣ ಬಿಡುಗಡೆ ಮಾಡಲು ಆಗುವುದಿಲ್ಲ ಎಂದಿರುವ ಸರ್ಕಾರ ಇದೊಂದು ನಾಡ ದ್ರೋಹಿ ಸರ್ಕಾರ ಎಂದು ನೇರವಾಗಿ ಪತ್ರಿಕೆ ಮುಖಾಂತರ ಆರೋಪ ಮಾಡುತ್ತಿದ್ದೇವೆ.
ಸರ್ಕಾರದಿಂದ ಹಣವನ್ನು ತರುತ್ತೇವೆಂದು ಹೇಳಿಕೊಂಡಿದ್ದ ಶಾಸಕರು ಹಾಗೂ ಆಡಳಿತ ಪಕ್ಷದ ಬಿಜೆಪಿ ಯವರು ಮೌನ ವಹಿಸಿರುವುದಕ್ಕೆ ಮೇಲ್ನೊಟಕ್ಕೆ ನೋಡಿದರೆ ಇವರು ಆಡಳಿತ ನಡೆಸುವುದರಲ್ಲಿ ವಿಫಲರಾಗಿರುವುದು ಎದ್ದು ಕಾಣುತ್ತಿದೆ. ಇಂತಹ ನಿರ್ಲಕ್ಷ ಬಿಜೆಪಿ ಆಡಳಿತಕ್ಕೆ ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೆಚ್.ಸಿ.ಯೋಗೀಶ್ ಹೇಳಿದರು.