ಶಿವಮೊಗ್ಗ:ಮಾನವತಾವಾದಿ ಜಗತ್ತಿನ ಶ್ರೇಷ್ಠ ವ್ಯಕ್ತಿಯಾಗಿರುವ ಬಸವಣ್ಣನವರ ಕಂಚಿನ ಪುತ್ಥಳಿಯನ್ನು ಶಿವಮೊಗ್ಗ ಗಾಂಧಿಪಾರ್ಕ್ ಬಳಿ ಹಾಕಿಸಿ ಇಂದಿಗೆ 1 ವರ್ಷಗಳು ಕಳೆದಿದೆ. ಇದರ ಅಂಗವಾಗಿ ಇಂದು ಶಿವಮೊಗ್ಗ ಮಾಜಿ ಮೇಯರ್ ಏಳುಮಲೈ ಕೇಬಲ್ ಬಾಬು ಹಾಗೂ AAP ಪಕ್ಷದ ಮುಖಂಡರಾಗಿರುವ ಇವರು ಬಸವಣ್ಣನವರ ಪುತ್ಥಳಿಗೆ ಪೂಜೆ ಸಲ್ಲಿಸಿ ಗೌರವಾರ್ಪಣೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು ಈ ಕಂಚಿನ ಪುತ್ಥಳಿಯನ್ನು ತಮ್ಮ ಅಧಿಕಾರಾವಧಿಯಲ್ಲಿ ಇಂಗ್ಲೆಂಡ್ ದೇಶದಲ್ಲಿ ಮೇಯರ್ ಆಗಿದ್ದತಹ ನೀರಜ್ ಪಾಟೀಲ್ ಅವರು ಶಿವಮೊಗ್ಗ ಮಹಾನಗರ ಪಾಲಿಕೆಗೆ ನೀಡಿತ್ತು ನಾವು ಪುತ್ಥಳಿಯನ್ನು ಇಂಗ್ಲೆಂಡ್ ದೇಶದ ಶಿವಮೊಗ್ಗಕ್ಕೆ ತರುವಲ್ಲಿ ಮಹತ್ತರ ಜವಾಬ್ದಾರಿಯನ್ನು ಹೊತ್ತಿದ್ದೆವು, ಈ ಪುತ್ಥಳಿಯು ತಮ್ಮ ಅಧಿಕಾರಾವಧಿಯಲ್ಲಿ ಸ್ಥಾಪಿತವಾಗ ಬೇಕಾಗಿತ್ತು ಎಂದರು.

ಆದರೆ ಕಾರಣಾಂತರದಿಂದ ತಡವಾಗಿ ಪ್ರತಿಷ್ಠಾಪನೆ ನಡೆದಿದ್ದು, ಇಂದಿಗೆ ಸ್ಥಾಪನೆಗೊಂಡು 1 ವರ್ಷ ಕಳೆದಿದೆ. ಬಸವಣ್ಣನವರ ತತ್ವ ಸಿದ್ಧಾಂತವನ್ನು ಮಲೆನಾಡಿನ ಜನರು ಸ್ಮರಣೆ ಮಾಡಿಕೊಳ್ಳುವುದಕ್ಕೆ ಈ ಪುತ್ಥಳಿಯು ಸಾಕ್ಷಿಯಾಗಲಿದೆ ಎಂದು ಶಿವಮೊಗ್ಗ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ N ಏಳುಮಲೈ (ಕೇಬಲ್ ಬಾಬು) ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕಿರಣ್ , ಬಸವರಾಜ್ , ಅರವಿಂದ್ ಅಶೋಕ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…