ಶಿವಮೊಗ್ಗ : ಶಿವಮೊಗ್ಗ ಗ್ರಾಮಾಂತರ ಪ್ರದೇಶದ ಸಿದ್ದರಹಳ್ಳಿಯಲ್ಲಿ “ಬಿಡುಗಡೆ” ಕಿರುಚತ್ರದ ಚಿತ್ರಮುಹೂರ್ತವನ್ನು ಉದ್ಯಮಿ ವಿನೋದ್‌ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಲೆನಾಡು ಕಲೆಗೆ ಗೌರವ ಪ್ರಾಧಾನ್ಯತೆ ಕೊಟ್ಟ ತವರೂರು, ಅನೇಕ ಕಲಾ ಕೊಡುಗೆಯನ್ನು ನಾಡಿಗೆ ಕೊಟ್ಟಿದೆ, ಈ ನಿಟ್ಟಿನಲ್ಲಿ ಇಂದು ಮೊದಲ ಭಾರಿಗೆ ಕಿರುಚಿತ್ರದ ಚಿತ್ರಮುಹೂರ್ತಕ್ಕೆ ಚಾಲನೆ ನೀಡುವ ಸೌಭಾಗ್ಯ ಲಭಿಸಿದೆ, ಉತ್ತಮ ಸಂದೇಶವನ್ನು ಸಾಮಾಜಿಕವಾಗಿ ನೀಡುವ ಚಿತ್ರತಂಡದ ಪಯತ್ನಕ್ಕೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಈ ಕಿರುಚಿತ್ರದಲ್ಲಿ ಓರ್ವ ರೈತಾಪಿ ಜೀವನದಲ್ಲಿ ಘಟಿತ ಘಟನೆಯಲ್ಲಿ ತಳೆದ ಕೋಪದ ಅತಿರೇಖಕತನದಿ ಹೇಗೆ ಜೀವನ ನಶಿಸಿ ಹೋಗುತ್ತದೆ ಹೀಗಾಗಿ ಯಾವುದೇ ಸಂದರ್ಭದಲ್ಲೂ “ಕೋಪ ಒಳಿತಲ್ಲ” ಕೋಪದಿಂದ ಯಾವ ಉದ್ದೇಶವೂ ಈಡೇರಲು ಸಾಧ್ಯವಿಲ್ಲ ಸೌಹಾರ್ಧತೆ, ಸಾಮರಸ್ಯದ ಬದುಕು ಒಂದು ಸುಂದರ ಜೀವನ ಕಟ್ಟಿ ಕೊಡುತ್ತದೆ ಎನ್ನುವ ಕಥಾ ಸಾರಾಂಶ ಹೊಂದಿದ್ದು ನಿಜಕ್ಕೂ ಜನಜೀವನದ ಒಳಗಣ್ಣು ತೆರೆಯುಸುತ್ತದೆ ಎಂದರು, ಈ ಸಂದರ್ಭದಲ್ಲಿ ಮೊದಲ ಟೇಕ್‌ನಲ್ಲಿ ಭಾಗವಹಿಸಿದ್ದ ಸ್ಥಳೀಯ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕವನ್ನು ಉದ್ಯಮಿ ವಿತರಿಸಿದರು.

ತಾಂತ್ರಿಕ ವರ್ಗದಲ್ಲಿ ಕತೆಯನ್ನು ಅಂಜನ್‌ಮೂರ್ತಿಯವರು ಬರೆದಿದ್ದರೆ ಚಿತ್ರಕತೆ, ಸಂಭಾಷಣೆ, ನಿರ್ದೇಶನದ ಜವಾಬ್ದಾರಿಯನ್ನು ಡಿಎಂ.ರಾಜಕುಮಾರ್‌ರವರು ನಿರ್ವಹಿಸಿದರೆ ಛಾಯಗ್ರಹಣವನ್ನು ವೆಂಕಟೇಶ್ ಕುಂಸಿ, ಶಿವಕುಮಾರ್ ಬೆಂಗಳೂರು ಇವರು ನಿರ್ವಹಿಸುತ್ತಿದ್ದಾರೆ. ಇನ್ನೂ ತಾರಾಬಳಗದಲ್ಲಿ ರೈತನ ಪಾತ್ರಧಾರಿಯಾಗಿ ದಾನಂ, ಪತ್ನಿಯ ಪಾತ್ರಧಾರಿಯಾಗಿ ಡಾ.ವಿನಯಾ, ತಾಯಿಯ ಪಾತ್ರಧಾರಿಯಾಗಿ ಪೂರ್ಣಿಮಾ, ಸಾಕು ಮಗನಾಗಿ ನಿಶಾಂತ್ ಎಸ್ ಗಾರಾ, ಹಾಗೂ ನಕ್ಷಾ ನೈದಿಲೆ, ಸೇರಿದಂತೆ ಈ ಚಿತ್ರಕ್ಕೆ ಖ್ಯಾತ ಕನ್ನಡತಿ ಸೀರಿಯಲ್‌ನ ಮೇಕಪ್ ಮ್ಯಾನ್ ಆದಂತಹ ಸತೀಶ್ ಮತ್ತು ದರ್ಶನ್ ಮತ್ತಿತರರು ಪಾತ್ರಧಾರಿಗಳಾಗಿರುವ ಈ ಕಿರುಚಿತ್ರಕ್ಕೆ ಸಿದ್ದರಹಳ್ಳಿ ಗ್ರಾಮಸ್ಥರು, ಅಲ್ಲಿನ ಶಾಲಾ ಮಕ್ಕಳು ಪ್ರೋತ್ಸಾಹಿಸಿ ಸಹಕರಿಸಿರುವುದು ವಿಶೇಷವಾಗಿತ್ತು. ಜೊತೆಯಲ್ಲಿ ಮಾನವ ಹಕ್ಕುಗಳ ಹೋರಾಟ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಿಬ್ಗತ್‌ಉಲ್ಲಾರವರು ಮತ್ತು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…