ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯ ಮೈನ್ ಮಿಡ್ಲ್ ಸ್ಕೂಲ್ ಆವರಣದ ಶಾಲಾ ಸಭಾಂಗಣದಲ್ಲಿ, ಸರ್ಕಾರಿ ಕನ್ನಡ ಮತ್ತು ಅಂಗ್ಲ ಮಾಧ್ಯಮ ಪ್ರಧಾನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀ ಮತಿ ಶಾಂತಬಾಯಿ ರವರಿಗೆ, ಮೈನ್ ಮಿಡ್ಲ್ ಸ್ಕೂಲ್ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಸೇರಿ ಸಾಲನ್ನು ಹೊದಿಸಿ, ಮುತ್ತಿನ ಮಣಿಯ ಹಾರವ ಹಾಕಿ ಫಲಪುಷ್ಪವ ನೀಡಿ ನೆನಪಿಗಾಗಿ ಬುಕ್ ನ್ನು ನೀಡಿ ಸನ್ಮಾನ್ಯ ಮಾಡಿ ಶಾಲೆಯಿಂದ ಬಿಳ್ಕೋಡಿಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕಿ, ನಾನು ಬೇರೆ ಶಾಲೆಯಿಂದ ಇಲ್ಲಿಗೆ ಬಂದಾಗ ಈ ಶಾಲೆಯಲ್ಲಿ ಮುವತ್ತರ ಆಸುಪಾಸಿನ ಮಕ್ಕಳು ಇದ್ದರು, ಶಾಲೆಯ ಮಕ್ಕಳು ಗಣನೀಯವಾಗಿ ಕಡಿಮೆಯಾಗಿತು, ಸಾವಿರಾರು ಮಕ್ಕಳು ಓದಿದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣ ಪಕ್ಕದ ಶಾಲೆಗೆ ಮಕ್ಕಳ ಸೇರಿಸಿ ಎಂದು ಅಧಿಕಾರಿಗಳು ಹೇಳಿದರು, ಈ ಶಾಲೆ ಬೇರೆಯದಕ್ಕೆ ನಿಯೋಜಿಸಲು ತೀರ್ಮಾಸಿದ್ದರು ಮಕ್ಕಳ ಸಂಖ್ಯೆ ಕಡಿಮೆ ಇದ್ದರೆ ಶಿಕ್ಷರ ಕೊಡುವುದಿಲ್ಲ, ಹಾಗೂ ಇಬ್ಬರೂ ಬಿಸಿ ಊಟದ ಅನ್ನಪೂರ್ಣೇಶ್ವರಿ ಯವರನ್ನು ಕಳೆದು ಕೊಳ್ಳುತ್ತೇವೆ, ಒಂದು ದಿನವು ಲೋಪವಿಲ್ಲದೆ ನಮಗೆ ಮತ್ತು ಮಕ್ಕಳಿಗೆ ಊಟ ಬಡಸಿರುವರು, ದಾರಿ ಕಾಣದಾಗ ಸದಾ ಈ ಶಾಲೆಯ ಇಥ ಬಯಸುತ್ತಿದ್ದ ಚನ್ನವೀರಪ್ಪ ಗಾಮನಗಟ್ಟಿ ರವರ ನೆನಪಾಯಿತು, ತಕ್ಷಣವೇ ಅವರ ಗಮನಕ್ಕೆ ಎಲ್ಲಾ ವಿಚಾರವ ತಂದೆ, ಅವರು ನನಗೆ ತಾವೂ ನಿಶ್ಚಿತರಾಗಿರಿ, ಈ ಶಾಲೆಯ ಆವರಣದಿಂದ ಎಲ್ಲಿಯೂ ಈ ಮಕ್ಕಳು ಹೋಗುವುದಿಲ್ಲ, ಅಡಿಗೆಯವರು ಇಬ್ಬರೂ ಇರುವರು, ಅ ಶಾಲೆಯಲ್ಲಿ ಮತ್ತೆ ಮಕ್ಕಳ ಸಂಖ್ಯೆ ಹೆಚ್ಚಿಸಿಕೊಂಡು ಹೊಗೋಣ ಎಂದು ಭರವಸೆ ನೀಡಿದರು ಅವರಿಗೆ ನಾನು ಹಳೇ ವಿದ್ಯಾರ್ಥಿಗಳು ಸಂಘ ರಚಿಸಲು ತಿಳಿಸಿದರು.

ಎಪ್ಪತ್ತರ ದಶಕದಿಂದ ತೊಂಬತ್ತರ ದಶಕದ ಹಳೇ ವಿದ್ಯಾರ್ಥಿಗಳನ್ನು ಹುಡುಕಿ ಅವರೆಲ್ಲರನ್ನು ಒಗ್ಗೂಡಿಸಿಗೊಂಡು, ಶಾಲಾವರಣದಲ್ಲಿ ಚುನಾವಣೆಯ ಮೂಲಕ ಮೈನ್ ಮಿಡ್ಲ್ ಸ್ಕೂಲ್ ಹಳೇ ವಿದ್ಯಾರ್ಥಿಗಳ ಪದಾಧಿಕಾರಿಯ ಆಯ್ಕೆಯ ನಂತರ ಸಂಘ ರಚನೆ ಮಾಡಿ, ಶಾಲಾ ಅರ್ಧ ವಾರ್ಷಿಕ ದಿಂದಲ್ಲೂ ಕೊರೋನಾದಿಂದ ಶಾಲೆ ಬಿಟ್ಟ ಮಕ್ಕಳು, ಹುಟುಕಾಟ ನಂತರ ಶಾಲೆ ರಜೆ ದಿನದಲ್ಲಿ ಶಾಲೆಗೆ ಸೇರುವ ಮಕ್ಕಳಿಗಾಗಿ ಹಳೇ ವಿದ್ಯಾರ್ಥಿ ಬಳಗದವರು ಮನೆ ಮನೆಗೆ ಹೋಗಿ ಮಕ್ಕಳ ಶಾಲೆಗೆ ಸೇರಿಸಿ ಆಂದೋಲನ ಮಾಡಿ ಮಕ್ಕಳ ಸಂಖ್ಯೆ ಹೆಚ್ಚಿಸಿರುವರು ಶಾಲೆಗಾಗಿ ಹಳೇ ವಿದ್ಯಾರ್ಥಿ ಬಳಗ ಬಹಳ ಶ್ರಮಿಸಿದ ಫಲವಾಗಿ ಇಂದು ಈ ಶಾಲೆ ಮತ್ತೆ ಮರಳಿ ನಮಗೆ ದೊರೆತಿದೆ ಎಂದು ತಿಳಿಸಿದರು.

ಬಿಳ್ಕೋಡಿಗೆ ಸಮಾರಂಭದಲ್ಲಿ ಮೈನ್ ಮಿಡ್ಲ್ ಸ್ಕೂಲ್ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚನ್ನವೀರಪ್ಪ ಗಾಮನಗಟ್ಟಿ, ಉಪಾಧ್ಯಕ್ಷ ಪರಶುರಾಮ, ಪ್ರಧಾನ ಕಾರ್ಯದರ್ಶಿ ಯಶೀಶ್, ಕಾರ್ಯದರ್ಶಿ ಸವಿತಾ, ಸಹ ಕಾರ್ಯದರ್ಶಿ ವಿಶ್ವನಾಥ, ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ, ರಾಜೇಶ್, ಸಿ.ಆರ್.ಪಿ ಯತೀಶ್, ಶಾಲಾ ಸಂಘದ ಆಧ್ಯಕ್ಷ ಹಾಗೂ ಸದಸ್ಯರು, ಮತ್ತು ಶಿಕ್ಷಕರು, ಮಕ್ಕಳು ಪೋಷಕರು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…