ಸೊರಬ ರಂಗಮಂದಿರದಲ್ಲಿ 2021-22 ನೇ ಸಾಲಿನ ಕೃಷಿ ಅಭಿಯಾನದ ವಾಹನಗಳಿಗೆ (ಕೃಷಿ ಇಲಾಖೆ ರೈತನ ಮನೆ ಬಾಗಿಲಿಗೆ) ಮಾನ್ಯ ಶಾಸಕರಾದ ಶ್ರೀ ಎಸ್ ಕುಮಾರ್ ಬಂಗಾರಪ್ಪ ರವರು ಚಾಲನೆ ನೀಡಿದರು. ಕೃಷಿ ತೋಟಗಾರಿಕೆ ರೇಷ್ಮೆ ಇತರೆ ಇಲಾಖೆ ಯಯೋಜನೆ ಮತ್ತು ತಾಂತ್ರಿಕತೆಯ ಮಾಹಿತಿಯನ್ನು ಹೊತ್ತ ವಾಹನವು ತಾಲೂಕಿನದ್ಯಾತ ಸಂಚರಿಸಿ, ರೈತರಿಗೆ ಮಾಹಿತಿ ನೀಡಲಾಗುತ್ತದೆ. ಬೆಳೆ ವಿಮೆ, ಬೆಳೆ ಸಮೀಕ್ಷೆ, ನ್ಯಾನೋ ಯೂರಿಯ, ಬತ್ತ ಮತ್ತು ಮುಸುಕಿನ ಜೋಳ ದ ಸುಧಾರಿತ ಬೇಸಾಯ ಕ್ರಮಗಳು, ಇತರೆ ಮಾಹಿತಿಯನ್ನು, ಆಡಿಯೋ ಮೂಲಕ ಬಿತ್ತರಿಸಲಾಗುತ್ತದೆ. ಈ ಸಂಧರ್ಭದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153