ಶಿವಮೊಗ್ಗ: ಗುರುವಿನ ಮಾರ್ಗದರ್ಶನ ಹಾಗೂ ಸ್ಪಷ್ಟ ಗುರಿ ಇದ್ದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದು ಎಂದು ಸಂಪನ್ಮೂಲ ವ್ಯಕ್ತಿ ಜೆ.ರಾಜಪ್ಪ ತೇಕಲೆ ಹೇಳಿದರು.

ರಾಜೇಂದ್ರನಗರದ ರೋಟರಿ ಶಿವಮೊಗ್ಗ ಪೂರ್ವ ಶಾಲೆಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ “ ಗುರಿ ಸಾಧನೆ ” ಎಂಬ ವಿಷಯದ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ನೀವು ಜೀವನದಲ್ಲಿ ಸಾಧನೆ ಮಾಡಲು ಗುರುವಿನ ಮಾರ್ಗದರ್ಶನವು ಅತ್ಯಂತ ಮುಖ್ಯ. ಸ್ಪಷ್ಟ ಗುರಿ ಸಾಧನೆ ಮಾಡಲು ಹಂತ ಹಂತವಾಗಿ ಪ್ರಯತ್ನಿಸಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಯು ಶಿಕ್ಷಣ ಪಡೆಯುತ್ತಿರುವ ಹಂತದಿAದಲೇ ಜೀವನದಲ್ಲಿ ಸಾಧಿಸಬೇಕಿರುವ ಗುರಿಯ ಕಡೆ ಮುನ್ನಡೆಯಬೇಕು. ಸಮಯದ ಚೌಕಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವ ಜತೆಯಲ್ಲಿ ನಿರ್ಧಿಷ್ಟ ಮಾರ್ಗದಲ್ಲಿ ಸಾಗಬೇಕು. ಇದರಿಂದ ವಿದ್ಯಾರ್ಥಿಯ ಜೀವನವು ಜೀವಿತಾವಧಿಯ ಸುವರ್ಣ ಸಮಯವಾಗುತ್ತದೆ. ಸಕರಾತ್ಮಕ ಚಿಂತನೆಯಿAದ, ಆತ್ಮವಿಶ್ವಾಸದಿಂದ ಮುನ್ನಡೆದರೆ ಅಸಾಧ್ಯವನ್ನು ಸಾಧ್ಯವಾಗಿಸಬಹುದಾಗಿದೆ ಎಂದರು.

ನಾವು ಉನ್ನತ ಸ್ಥಾನಮಾನ ಗಳಿಸುವ ಜತೆಯಲ್ಲಿ ಪೋಷಕರು ಹಾಗೂ ಗುರು ಹಿರಿಯರ ಆಶಯ ಈಡೇರಿಸಲು ಸಾಧ್ಯವಾಗುತ್ತದೆ. ರಾಷ್ಟçದ ಪ್ರಗತಿಯಲ್ಲಿ ನಾವು ಕೂಡ ಭಾಗಿಯಾಗಬಹುದಾಗಿದೆ. ದೇಶ ವಿಶ್ವಗುರುವಾಗಿ ಪ್ರಗತಿ ಹೊಂದಬೇಕೆAಬ ಛಲ ವಿಶ್ವಾಸ ಮಕ್ಕಳಲ್ಲಿ ಬೆಳೆಯಬೇಕು. ಸಮಾಜಕ್ಕೆ ಉಪಯುಕ್ತ ಆದ ಮಾಹಿತಿಗಳನ್ನು ಮಕ್ಕಳಿಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರಿ ಸಾಧಿಸುವ ಪ್ರವೃತ್ತಿ ಮತ್ತು ಧನಾತ್ಮಕ ಚಿಂತನೆಗಳನ್ನು ಬೆಳಸಿಕೊಳ್ಳಬೇಕು. ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸತೀಶ್‌ಚಂದ್ರ ಮಾತನಾಡಿ, ವಿದ್ಯಾರ್ಥಿಗಳು ಸಾಧನೆ ಮಾಡಲು ಪ್ರೋತ್ಸಾಹಿಸುವ ದೃಷ್ಠಿಯಿಂದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ನಿರಂತರವಾಗಿ ತರಬೇತಿ ಕಾರ್ಯಾಗಾರ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಸೇರಿದಂತೆ ವಿವಿಧ ತರಬೇತಿಗಳನ್ನು ಅನೇಕ ಶಾಲಾ ಕಾಲೇಜುಗಳಲ್ಲಿ ನಡೆಸುತ್ತಿದ್ದೇವೆ. ಸಮಾಜಮುಖಿ ಚಟುವಟಿಕೆಗಳನ್ನು ಸಂಸ್ಥೆ ವತಿಯಿಂದ ನಿರಂತರವಾಗಿ ನಡೆಸಲಾಗುತ್ತಿದೆ ಎಂದರು.
ಮ್ಯಾನೇಜ್‌ಮೆAಟ್ ಜೋನ್ 24 ವಲಯ ನಿರ್ದೇಶಕ ಅನುಷ್ ಗೌಡ, ಕಾರ್ಯದರ್ಶಿ ಸಂತೋಷ ಕುಮಾರ್ ಬಿ.ಎನ್ ಹಾಗೂ ಇನ್ನರ್ ವೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯ್ ಕುಮಾರ್ ಇತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…