ಉಚಿತ ಕೋವಿಡ್ ವ್ಯಾಕ್ಸಿನ್ ಗೇ 8:00 ಯಿಂದ ಶಿವಮೊಗ್ಗ ಐ.ಎನ್. ಟಿ ಯು ಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಧರಣಿ ಸತ್ಯಾಗ್ರಹ ಜಿಲ್ಲಾ ತರಬೇತಿ ಆರೋಗ್ಯ ಕೇಂದ್ರ ಅಧಿಕಾರಿ ಕಿರಣ್ ರವರು ಪ್ರತಿಭಟನೆಗೆ ಮಣಿದು ಸ್ಥಳದಲ್ಲಿ ವ್ಯಾಕ್ಸಿನ್ ಟೋಕನ್ ವಿತರಣೆ ಮಾಡಿದರು. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಕೇಂದ್ರ ಬಿಜೆಪಿ ಸರ್ಕಾರವು ಈಗಾಗಲೇ ದೇಶಾದ್ಯಂತ ವ್ಯಾಕ್ಸಿನ್ ವಿತರಣೆಯನ್ನು ಉಚಿತವಾಗಿ ವ್ಯಾಕ್ಸಿನ್ ವಿತರಣೆ ಮಾಡುತ್ತೇವೆ ಎಂದು ಪ್ರಚಾರ ಗಿಟ್ಟಿಸಿ ಕೊಳ್ಳುತ್ತಿದ್ದು. ಆದರೆ ಕಳೆದ ಮೂರುದಿನಗಳಿಂದ ಶಿವಮೊಗ್ಗ ನಗರ 9 ಕೇಂದ್ರಗಳಲ್ಲಿ ಕೂಡ ಯಾವುದೇ ವ್ಯಾಕ್ಸಿನ್ ಕೊಡುತ್ತಿರಲಿಲ್ಲ. ಯುವಕರು ವಯೋವೃದ್ಧರು ಹೆಣ್ಣುಮಕ್ಕಳು ಉಚಿತ ವ್ಯಾಕ್ಸಿನ್ ಟೋಕನ್ ಗಾಗಿ ಬೆಳಗ್ಗೆ 5 ಗಂಟೆಯಿಂದ ಕೇಂದ್ರಗಳಲ್ಲಿ ಕಾಯುತ್ತಿದ್ದರು ಸರ್ಕಾರಿ ಕೇಂದ್ರಗಳಲ್ಲಿ ವ್ಯಾಕ್ಸಿಂಗ್ ಇಲ್ಲ ಎಂದು ಬೋರ್ಡು ಹಾಕಿ ಹಾಕಿಕೊಳ್ಳುವ ಮೂಲಕ ಜನರಿಗೆ ತೊಂದರೆಯಾಗುತ್ತಿದ್ದು ಜನರ ಜೀವನ ಚೆಲ್ಲಾಟವಾಡುವ ಬಿಜೆಪಿ ಸರ್ಕಾರ ಮತ್ತು ಸರ್ಕಾರದ ವಿರುದ್ಧ ಇಂದು ನಮ್ಮ ಸಂಘಟನೆಯಿಂದ ಪ್ರತಿಭಟನೆ ಮಾಡಲಾಯಿತು ಪ್ರತಿಭಟನೆಯ ನೇತೃತ್ವ ವಹಿಸಿಕೊಳ್ಳುವ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪನವರು ಮಾತನಾಡುತ್ತಾ ಕಳೆದ ಮೂರುದಿನಗಳಿಂದ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ವ್ಯಾಕ್ಸಿಂಗ್ ಕೊಡದೆ. ವಾಪಸ್ ಕಳುಹಿಸಿದ್ದು ಜನರು ಕೇಂದ್ರದಲ್ಲಿ ಉಪವಾಸ ಬಂದು ತಲೆತಿರುಗಿ ಬೀಳುವಂತಹ ಪ್ರಸಂಗಗಳು ಉಂಟಾಗುತ್ತಿವೆ ಇದು ಸರ್ಕಾರದ ವೈಫಲ್ಯತೆ ಬಣ್ಣಿಸುತ್ತಾ ಸರ್ಕಾರಿ ಕೇಂದ್ರಗಳಲ್ಲಿ ವ್ಯಾಕ್ಸಿನ್ ಸಿಗುತ್ತಿಲ್ಲ ಆದರೆ ಯಡಿಯೂರಪ್ಪನವರ ಒಡೆತನದ ನಾರಾಯಣ ಹೃದಯ ಮತ್ತು ರಾಜಕಾರಣಿಗಳ ಒಡೆತನದ ಖಾಸಗಿ ಆಸ್ಪತ್ರೆಗಳಲ್ಲಿ ಒಂದಕ್ಕಿಂತ ಎರಡರಷ್ಟು ದುಬಾರಿ ಹಣ ತೆತ್ತು ವ್ಯಾಕ್ಸಿನ್ ಪಡೆದುಕೊಳ್ಳುತ್ತಿದ್ದಾರೆ ಇದೊಂದು ಕೊಲೆಗಡುಕ ಸರ್ಕಾರ ಹೆಣದ ಹಣ ಮೇಲೆ ಮಾಡುವಂತಹ ನೀಚತನ ಸರ್ಕಾರ ಉಚಿತವಾಗಿ ಕೊಡಬೇಕಾದ ಅಂತಹ ಔಷಧಿಗಳನ್ನು ಇವರ ಒಡೆತನದ ಆಸ್ಪತ್ರೆಗಳಲ್ಲಿ ಮಾರಿಕೊಳ್ಳುತ್ತಿದ್ದಾರೆ ಇಂತಹ ಘಟನೆಗಳಿಂದ ಸರ್ಕಾರಕ್ಕೆ ನಾಚಿಕೆಯಾಗಬೇಕು.. ಜನರಿಗೆ ಉಚಿತವಾಗಿ ಸಿಗಬೇಕಾದ ಔಷಧಿಗಳನ್ನು ತಮ್ಮ ಆಸ್ಪತ್ರೆಯಲ್ಲಿ ಮಾರಿಕೊಳ್ಳುತ್ತಿದ್ದಾರೆ ಇವರುಗಳು ಹೆಣದ ಮೇಲೆ ಹಣ ಮಾಡುವಂತಹ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಇಂತಹ ಬೆಳವಣಿಗೆಗಳು ಸಮಾಜಕ್ಕೆ ಒಳ್ಳೆಯದಲ್ಲ ಜನರು ಈಗಾಗಲೇ ಆಹಾರಕ್ಕಾಗಿ ಪರದಾಡುತ್ತಿದ್ದು ಆಹಾರ ಸಿಗದೆ ಆರೋಗ್ಯ ಕೆಟ್ಟು ಸಾಯುತ್ತಿದ್ದಾರೆ . ಆದರೂ ಕೂಡ ವ್ಯಾಕ್ಸಿನ್ ಬಗ್ಗೆ ಗಮನ ಕೊಡದ ಈ ಸರ್ಕಾರಗಳು ಜನರ ಸಾವನ್ನು ಬಯಸುತಿದೆ ಎಂದು ಹೇಳುತ್ತಾ ನೀವು ಇಂದು ಉಚಿತವಾಗಿ ವ್ಯಾಕ್ಸಿನ್ ಟೋಕನ್ ಕೊಟ್ಟರೆ ಮಾತ್ರ ಪ್ರತಿಭಟನೆ ಹಿಂತೆಗೆದುಕೊಳ್ಳುತ್ತೇವೆ ಎಂದು ನಿರಂತರವಾಗಿ ಅಲ್ಲಿಯೇ ಧರಣಿ ಕುಳಿತರು. ನಂತರ ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ಕಿರಣ್ ಅವರು ಜಿಲ್ಲಾ ಆರೋಗ್ಯ ಕೇಂದ್ರ ಅಧಿಕಾರಿ ಜೊತೆ ಮಾತನಾಡಿ ಕೊಡುತ್ತೇವೆ ಎಂದು ಸ್ಥಳದಲ್ಲಿಯೇ ಸ್ಥಳದಲ್ಲಿಯೇ ಟೋಕನ್ ಕೊಟ್ಟನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಪ್ರತಿಭಟನೆಯ ನೇತೃತ್ವವನ್ನು ಕೆಪಿಸಿಸಿ ಕಾರ್ಯದರ್ಶಿ ಕೆ ದೇವೇಂದ್ರಪ್ಪ ವಹಿಸಿದರು. ಶಿವಮೊಗ್ಗ ಜಿಲ್ಲಾ ಐ.ಎನ್.ಟಿ.ಯು.c ಮಹಿಳಾ ಅಧ್ಯಕ್ಷರಾದ ಕವಿತಾ ರಾಘವೇಂದ್ರ. ಜಿಲ್ಲಾ ಐಎನ್ಟಿಯುಸಿ ಅಧ್ಯಕ್ಷರಾದ ಅರ್ಜುನ್ ಪಿ. ವಿದ್ಯಾರ್ಥಿ ಕಾಂಗ್ರೆಸ್ ಮುಖಂಡ.. ನಿಹಾಲ್ ಸಿಂಗ್.. ನಗರ ಮುಖಂಡ ಬರತ್ ಪ್ರಮೋದ್ ಅರುಣ ಅಖಿಲೇಶ್ ಪ್ರದೀಪ್ ಡಿ.ಕೆ ಶಿವಕುಮಾರ್ ಬ್ರಿಗೇಡ್ ರಾಘವೇಂದ್ರ. ನಿತಿನ್ ವಿಜಯ್ ಮುಂತಾದವರು ಭಾಗವಹಿಸಿದ್ದರು

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153