ಶಿವಮೊಗ್ಗ ಮಹಾನಗರ ಪಾಲಿಕೆಯ ಒಡೆತನಕ್ಕೆ ಸೇರಿದ ಶಿವಪ್ಪ ನಾಯಕ ಮಾರುಕಟ್ಟೆ ( ಸಿಟಿ ಸೆಂಟರ್ ಮಾಲ್ ) ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ಪ್ರಾಯೋಜಿತ ದೇಶ ವಿಭಜನೆಯ ಭಯಾನಕಥೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ, ಸುಭಾಷ್ ಚಂದ್ರ ಭೋಸ್, ಪಂಡಿತ್ ಜವಹರಲಾಲ್ ನೆಹರು, ಡಾ|| ಅಂಬೇಡ್ಕರ್ ರವರ ಭಾವಚಿತ್ರಗಳನ್ನು ಪ್ರಮುಖ ಸ್ಥಳದಲ್ಲಿ ಅಳವಡಿಸದೆ ಕಿರಿದಾಗಿ ಹಾಗೂ ತುದಿಯಲ್ಲಿ ಅಳವಡಿಸುವುದರ ಮೂಲಕ ರಾಷ್ಟ್ರಪಿತ ಮಹಾತ್ಮಗಾಂಧಿಗೆ ಹಾಗೂ ಸ್ವಾತಂತ್ರ್ಯ ಯೋದರಿಗೆ ಅಗೌರವ ಉಂಟು ಮಾಡಿದ್ದಾರೆ ಎಂದು ಕಾಂಗ್ರೆಸ್ ಪಾಲಿಕೆ ಸದಸ್ಯರು ಮನವಿ ಮಾಡಿದರು.
ಈ ಘಟನೆಯು ಭಾರತೀಯ ನಾಗರೀಕರಾದ ನಮಗೆ ತೀರ್ವವಾದ ಮನಕ್ಲೇಶವನ್ನು ಹಾಗೂ ನೋವುಂಟು ಮಾಡಿರುತ್ತದೆ. ಅಲ್ಲದೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪಾವಿತ್ರತೆಗೆ ಹಾಗೂ ಆಶಯಕ್ಕೆ ಅಗೌರವ ಉಂಟು ಮಾಡಿದ ಕ್ರಮವಾಗಿರುತ್ತದೆ. ಈ ಘಟನೆಯು ರಾಜ್ಯಾದ್ಯಾಂತ ಉಂಟಾಗಿರುವ ಅಹಿತಗರ ಘಟನೆಗೆ ಮೂಲ ಕಾರಣವಾಗಿರುತ್ತದೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿದೆ.ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರು, ಮಹಾನಗರ ಪಾಲಿಕೆಯ ಸದಸ್ಯರಾದ ಹೆಚ್.ಸಿ.ಯೋಗೇಶ್, ಬಿ ಎ ರಮೇಶ ಹೆಗಡೆ , ಯಮುನಾ ರಂಗೇಗೌಡ , ಆರ್.ಸಿ.ನಾಯ್ಕ್ ,, ಮಂಜುಳಾ ಶಿವಣ್ಣ , ಶಾಮೀರ್ ಖಾನ್ ಹಾಗೂ ಕಾಂಗ್ರೆಸ್ ಮುಖಂಡರಾದ ಕೆ.ರಂಗನಾಥ್, ರಂಗೇಗೌಡ , ಪವನ್ ಕುಮಾರ್, ಉಪಸ್ಥಿತರಿದ್ದರು.