ರಾಜ್ಯ ಪೊಲೀಸ್ ಇಲಾಖೆ ಸಂಘಪರಿವಾರದ ಕೈಗೊಂಬೆಯಾಗಿದೆ ರಾಜ್ಯವನ್ನು ಅಶಾಂತಿಗೆ ತಳ್ಳಿದ ನೀತಿಗೆಟ್ಟ ,ಲಜ್ಜೆಗೆಟ್ಟ ,ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಶಿವಮೊಗ್ಗ ಯುವ ಕಾಂಗ್ರೆಸ್ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ನಿನ್ನೆ ಕೊಡಗು ಜಿಲ್ಲೆಗೆ ಅತಿವೃಷ್ಟಿ ವೀಕ್ಷಣೆಗೆ ಭೇಟಿ ನೀಡುವ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಸಂವಿಧಾನಕವಾಗಿ ಪ್ರತಿಭಟನೆ ನಡೆಸುವುದು ಬದಲು ಅತಿರೇಕದಲ್ಲಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆಯನ್ನು ಎಸೆದಿರುವುದು ತೀವ್ರ ಖಂಡನೆಯ ಇಂಥ ಪುಂಡಾಟಿಕೆ ಮಾಡುವ ಭಾಜಪ ಕಾರ್ಯಕರ್ತರ ಗೂಂಡಾಗಿರಿಗೆ ಅವಕಾಶ ನೀಡಿ, ಕೈಕಟ್ಟಿಕೊಂಡು ತಮಾಷೆ ನೋಡುವ ಪೊಲೀಸರ ಕರ್ತವ್ಯ ಲೋಪ , ಗುಪ್ತಚರ ಇಲಾಖೆಯ ವೈಫಲ್ಯ ಎನ್ನುವುದಕ್ಕಿಂತ ಸ್ವತಂತ್ರವಾಗಿ ಕಾರ್ಯನಿರ್ಸುವ ಪೊಲೀಸ್ ಇಲಾಖೆಯನ್ನು ಕಪಿಮುಷ್ಠಿಯಲ್ಲಿ ಹಿಡಿದು ತಮಗೆ ತಕ್ಕಂತೆ ಕುಣಿಸುತ್ತಿರುವ ಲಜ್ಜೆಗೆಟ್ಟ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣಕ್ಕೆ ನೈಜ ಉದಾರಣೆಯಾಗಿದೆ.
ಈಗಾಗಲೇ ರಾಜ್ಯದಲ್ಲಿ ಹಲವಾರು ಕೋಮು ಸಂಘರ್ಷಗಳಿಗೆ ಪ್ರಚೋದನೆ ನೀಡುವಂತಹ ಬಿಜೆಪಿ ನಾಯಕರ ಭಾಷಣಗಳು, ರಾಜ್ಯದ ಯುವಕರಿಗೆ ಉದ್ಯೋಗ ನೀಡುವ ಬದಲು ಕೋಮುವಾದದ ನಶೆಯನ್ನು ತುಂಬುತ್ತಿದ್ದು. 75 ನೇ ಸ್ವಾತಂತ್ರ -ಅಮೃತ ಮಹೋತ್ಸವದ ವರ್ಷದಲ್ಲಿ ಬಿಜೆಪಿ ಸರ್ಕಾರ ಇತಿಹಾಸದಲ್ಲಿ ಮರೆಯಲಾಗದಂತಹ ಗಲಭೆಗಳಿಗೆ ನಾಂದಿ ಆಡುತ್ತಿದ್ದು. ಈ ಕೂಡಲೇ ಮಾನ್ಯ ರಾಜ್ಯಪಾಲರು ಇಂತಹ ಲಜ್ಜೆಗೆಟ್ಟ ನೀತಿಗೆಟ್ಟ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕೆಂದು ಯುವ ಕಾಂಗ್ರೆಸ್ ಆಗ್ರಹಿಸುತ್ತದೆ.
ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿಯ ಗೂಂಡಾಗಿರಿಗೆ ಉಗ್ರವಾದ ಹೋರಾಟದ ಮೂಲಕವೇ ತಕ್ಕ ಉತ್ತರ ಕೊಡುತ್ತೇವೆ ಎಂದು ಯುವ ಕಾಂಗ್ರೆಸ್ ಎಚ್ಚರಿಸುತ್ತದೆ.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ .ಪಿ.ಗಿರೀಶ್, ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್, , ಭದ್ರಾವತಿ ನಗರಸಭೆಯ ಸದಸ್ಯರಾದ ಕಾಂತರಾಜ್ ,ನಗರ ಉಪಾಧ್ಯಕ್ಷ ಕೆ ಎಲ್ ಪವನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗಗನ್ ಗೌಡ, ಎಂ ರಾಕೇಶ್, ಸುದೀಪ್ ಸುಂದರ್ ರಾಜ್ , ಗೋಪಿ ಪೊಲೀಸ್ ಚೌಕಿ , ರಾಹುಲ್, ಶ್ರೀನಿವಾಸ್ , ಮೋಹನ್ ಸೋಮಿನಕೊಪ್ಪ, ಸುಭಾನ್ , ಸುಹಾನ್ ನಾಗರಾಜ್ ಹಾಗು ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.