ಸಮಾಜ ಬಾಂದವರು ನನ್ನ ಮೇಲೆ ಇಟ್ಟ ಪ್ರೀತಿ ವಿಶ್ವಾಸಕ್ಕೆ ನಾನು ಎಂದೆAದೂ ಚಿರರುಣಿ ಎಂದು ಮಾಜಿ ಸೂಡಾ ಅಧ್ಯಕ್ಷರು ಹಾಗೂ ಸಮಾಜದ ಮುಖಂಡರಾದ ಎಸ್.ಎಸ್.ಜ್ಯೋತಿ ಪ್ರಕಾಶ್ ನುಡಿದರು.

ಅವರು ಇಂದು ಬೆಳಿಗ್ಗೆ ಶಿವಗಂಗ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶ್ರೀ ಬಸವೇಶ್ವರ ವೀರಶೈವ ಸಮಾಜ ಶಿವಮೊಗ್ಗದಲ್ಲಿ ಅತ್ಯಂತ್ಯ ಪ್ರತಿಷ್ಠಿತ ಸಮಾಜವಾಗಿದೆ. ಈ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ ಈ ಸಮಾಜಕ್ಕೆ ಎಂದೆAದೂ ಚ್ಯುತಿಬರದ ಹಾಗೆ ಎಲ್ಲಾ ಸಮಾಜ ಬಾಂದವರ ಮಾರ್ಗದರ್ಶನದಂತೆ ನಡೆದುಕೊಳ್ಳದಂತೆ ನಡೆದುಕೊಳ್ಳುತ್ತೇನೆ ಮತ್ತು ಬರುವ ದಿನಗಳಲ್ಲಿ ನಮ್ಮ ಸಮಾಜಕ್ಕೆ ಹೆಚ್ಚು ಹೆಚ್ಚು ಹೊಸ ಹೊಸ ಸದಸ್ಯರನ್ನು ಸೇರ್ಪಡೆಮಾಡುವ ಉದ್ದೇಶ ಹಾಗೂ ಸಮಾಜವನ್ನು ಉತ್ತಮ ಸ್ಥಿತಿಯಲ್ಲಿ ಮುಂದುವರೆಸಲು ಎಲ್ಲಾ ಸದಸ್ಯರ ಸಹಕಾರ ಬೇಕಾಗುತ್ತದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕರಾದ ಶ್ರೀಯುತ ಹರೀಶ್‌ರವರು ಮಾತನಾಡುತ್ತಾ ನಮ್ಮ ಶಿವಗಂಗಾ ಯೋಗ ಕೇಂದ್ರ ಕಾರ್ಯದರ್ಶಿಗಳು ಸೂಡಾ ಮಾಜಿ ಅಧ್ಯಕ್ಷರು ಹಾಗೂ ನಮ್ಮ ಶಾಖೆಯ ಯೋಗ ಪಟುಗಳಾದ ಎಸ್.ಎಸ್.ಜ್ಯೋತಿ ಪ್ರಕಾಶ್‌ರವರು ಚುನಾವಣೆಯಲ್ಲಿ ಅತೀ ಹೆಚ್ಚು ಮತ ಪಡೆದು ಆಯ್ಕೆ ಆಗಿರುವುದು ನಮ್ಮ ಯೋಗ ಕೇಂದ್ರಕ್ಕೆ ಹೆಮ್ಮೆ ಆಗಿದೆ. ಬರುವ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಇನ್ನು ಉನ್ನತ ಹುದ್ದೆ ಸಿಗುವುದರ ಮುಖಾಂತರ ಸಮಾಜಮುಖಿ ಸೇವೆಗಳು ನೆರವೇರಲಿ ಎಂದು ನುಡಿದರು. ಮತ್ತೋರ್ವ ಯೋಗ ಶಿಕ್ಷಕರಾದ ವಿಜಯಕೃಷ್ಣರವರು ಜ್ಯೋತಿ ಪ್ರಕಾಶ್‌ರವರಿಗೆ ಆತ್ಮೀಯವಾಗಿ ಸಮ್ಮಾನಿಸಿ ಅಭಿನಂದಿಸಿದರು. ಈ ಸರಳ ಸಮಾರಂಭದಲ್ಲಿ ಯೋಗ ಬಂದುಗಳಾದ ಕಾಟನ್ ಜಗದೀಶ್, ಜಿ.ವಿಜಯಕುಮಾರ್, ರಾಜೇಶ್, ಓಂಕಾರ್, ಆನಂದ್, ಸುಜಾತ ಮಧುಕರ್, ಕವಿತಾ, ಉಷಾ, ಸಂಧ್ಯಾ, ಸುಬ್ರಮಣ್ಯ, ಸತೀಶ್ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…