ಶಿವಮೊಗ್ಗ: ಭಾರತವನ್ನು ಗುರುತಿಸಬೇಕಾದರೆ ಅದು ಸಂಸ್ಕೃತ ದಿಂದ ಸಾದ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಉಪಾಧ್ಯಕ್ಷರಾದ ನಟರಾಜ್ ಭಾಗವತ್ ತಿಳಿಸಿದರು.
ಅವರು ಶಿವಮೊಗ್ಗದ ವಿನೋಬ ನಗರದಲ್ಲಿರುವ ಮಾಧವ ನೆಲೆಯಲ್ಲಿ ಇಮದು ಸಂಜೆ ಸಂಸ್ಕೃತ ಕಲಿಕಾ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಉಪಾಧ್ಯಕ್ಷರಾದ ನಟರಾಜ್ ಭಾಗವತ್ ತಿಳಿಸಿದರು. ಅವರು ಇಂದು ಶಿವಮೊಗ್ಗದ ವಿನೋಬ ನಗರದಲ್ಲಿರುವ ಮಾಧವ ನೆಲೆಯಲ್ಲಿ ಸಂಸ್ಕೃತ ಕಲಿಕಾ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತ ದೇಶದ ಎಲ್ಲಾ ಬಾಷೆಗಳಲ್ಲೂ ಸಂಸ್ಕೃತ ಹಾಸು ಹೊಕ್ಕಿದೆ. ನಮ್ಮ ದೇಶದ ಎಲ್ಲಾ ಪ್ರಾಚೀನ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿದೆ, ಭಾರತಕ್ಕೆ ಬ್ರಿಟೀಷರ ಆಗಮನ ನಂತರ ಸಂಸ್ಕೃತ ಮೃತ ಭಾಷೆಯೆಂಬ ಅಪಪ್ರಚಾರ ಮಾಡುತ್ತ ಅಮೃತಭಾಷೆಯನ್ನು ಕಡೆಗಣಿಸಿದರು.
ಆದರೆ ಅತ್ಯಂತ ಸುಂದರ, ವೈಜ್ಞಾನಿಕ, ಸಮೃದ್ಧವಾದ ಸಂಸ್ಕೃತ ಹಿಂದೆಯೂ ಇತ್ತು ಈಗಲೂ ಇದೆ ಮುಂದೆಯೂ ಇರುತ್ತದೆ, ನಾವು ಸಂಸ್ಕೃತ ಕಲಿಯದಿದ್ದರೆ ಸಂಸ್ಕೃತಕ್ಕೆ ಎನೂ ಹಾನಿಯಾಗುವುದಿಲ್ಲ ಆದರೆ ನಮಗೆ ಜ್ಞಾನದ ಕಡೆ ಹೋಗುವ ಅವಕಾಶ ಕಳೆದುಕೊಳ್ಳುತ್ತೇವೆ. ಸಂಸ್ಕೃತಿಯ ಪ್ರತೀಕವಾದ ಸಂಸ್ಕೃತ ಯಾವ ಜಾತಿಗೂ ಯಾವ ಪಂಥಕ್ಕೂ ಸೇರಿದ್ದಲ್ಲ ಏಕೆಂದರೆ, ಕಾಳೀದಾಸ, ವ್ಯಾಸ, ಬಾಸ,ಬಾಣ ಮುಂತಾದ ಕವಿಗಳ ಜಾತಿಯನ್ನು ನೋಡಿದರೆ ತಿಳಿಯುತ್ತೆ ಸಂಸ್ಕೃತಕ್ಕೆ ಜಾತಿಯ ಹಣೆಪಟ್ಟವಿಲ್ಲ ಎಂದು. ಸಂಸ್ಕೃತ ಎಲ್ಲರೂ ಕಲಿಯಲು ಸುಲಭವಾದ ಹಲವಾರು ವಿಧಾನಗಳನ್ನು ಸಂಸ್ಕೃತ ಭಾರತಿ ಇಂದು ಯೋಜಿಸಿದೆ, ಇದರ ಪ್ರಯೋಜನವನ್ನು ಎಲ್ಲರೂ ಪಡೆಯುವಂತಾಗಲಿ ಎಂದು ತಿಳಿಸಿದರು. ಸಂಸ್ಕೃತಕ್ಕೆ ಜಾತಿಯ ಹಣೆಪಟ್ಟವಿಲ್ಲ ಎಂದು. ಸಂಸ್ಕೃತ ಎಲ್ಲರೂ ಕಲಿಯಲು ಸುಲಭವಾದ ಹಲವಾರು ವಿಧಾನಗಳನ್ನು ಸಂಸ್ಕೃತ ಭಾರತಿ ಇಂದು ಯೋಜಿಸಿದೆ, ಇದರ ಪ್ರಯೋಜನವನ್ನು ಎಲ್ಲರೂ ಪಡೆಯುವಂತಾಗಲಿ ಎಂದು ತಿಳಿಸಿದರು.
ಸಂಸ್ಕೃತ ಭಾರತಿ ಜಿಲ್ಲಾ ಸಂಯೋಜಕ ರಾದ ಟಿ.ವಿ.ನರಸಿಂಹ ಮೂರ್ತಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಮಾತನಾಡಿದರು.
ಮಾಧವ ನೆಲೆ ಆಡಳಿತ ಮಂಡಳಿ ಸದಸ್ಯರಾದ ಸತೀಶ್ , ನಂದೀಶ್, ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾದವ ನೆಲೆಯ ಕಾರ್ಯದರ್ಶಿಗಳಾದ ವಿಜೇಂದ್ರ ಸೂಳಿಕೆರೆ ವಹಿಸಿದ್ದರು.