ಶಿವಮೊಗ್ಗ ನಾಗರಿಕ ಹಿತ ರಕ್ಷಣಾ ವೇದಿಕೆ ವತಿಯಿಂದ ವಿನೋಬಾ ನಗರ ಪೊಲೀಸ್ ಚೌಕಿಯಲ್ಲಿ ಸ್ಮಾರ್ಟ್ ಸಿಟಿಯ ಕಳಪೆ ಕಾಮಗಾರಿ ಖಂಡಿಸಿ ಇಂದು ಸರಣಿ ಹೋರಾಟ 5 ಮುಂದುವರಿಸಿದರು.

ಸ್ಮಾರ್ಟ್ ಸಿಟಿಯಿಂದ ನಿರ್ಮಾಣವಾದ ರಸ್ತೆ ಕೇವಲ 2 ತಿಂಗಳಿಗೆ ಕಿತ್ತುಹೋಗಿದೆ. ಚರಂಡಿಯ ಮೇಲೆ ಕೂರಿಸಿರುವ ಸ್ಲಾಬ್ಗಳು ಒಟ್ಟಿಗೆ ಕೂರಿಸದೆ ಜಾಗವನ್ನು ಬಿಟ್ಟು ಕೂರಿಸಿದ್ದು ಅವಜ್ಞಾನಿಕ. ಪೊಲೀಸ್ ಚೌಕಿಯ ಸುತ್ತಮುತ್ತಲಿನ ಹಾಕಿರುವ ಗ್ರೀಟ್ ಚೇಂಬರ್ಗಳಿಗೆ ನೀರು ಹೋಗದೆ ನೀರುಗಳೆಲ್ಲ ರಸ್ತೆಯ ಮೇಲೆ ಹರಿಯುತ್ತಿದೆ. ಪೊಲೀಸ್ ಚೌಕಿಯಲ್ಲಿ ಮಾಡಿರುವ ಬಸ್ ತುಂಗಾದಣ ಅವೈಜ್ಞಾನಿಕವಾಗಿ ನಿರ್ಮಾಣವಾಗಿದೆ. ವಿಕಾಸ ಶಾಲೆಯ ಎದುರು ಫುಟ್ ಬಾತ್ ಸರಿಯಾಗಿ ನಿರ್ಮಾಣ ಮಾಡದೆ ರೈಲಿಂಗ್ ಅಳವಡಿಸಿ ಈಗ ಜನರು ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗೆ ಸ್ಮಾರ್ಟ್ ಸಿಟಿಯ ಕಾಮಗಾರಿಗಳು ಅವೈಜ್ಞಾನಿಕವಾಗಿದ್ದು ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಾಗರಿಕ ಹಿತ ರಕ್ಷಣಾ ವೇದಿಕೆಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಶೆಟ್ಟಿ , ಸೀತಾರಾಮ್ , ನಾಗರಾಜ್ ಹೆಬ್ಬಾರ್ , ಸುರೇಶ್ ಶೆಟ್ಟಿ , ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…