ಕೊಲ್ಲೂರು ನ್ಯೂಸ್…
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಾಸಕರಾದ ಸುಕುಮಾರ ಶೆಟ್ಟಿ ರವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕೊಲ್ಲೂರಿನ ಜಗನ್ಮಾತೆ ಶ್ರೀ ಮೂಕಾಂಬಿಕಾ ಸನ್ನಿಧಾನದಲ್ಲಿ ಶತ ಚಂಡಿಗಯಾಗ ನಡೆಯಿತು.
ಈ ಶತ ಚಂಡಿಯಾಗದ ಮೂರನೇ ದಿನದ ಪಾರಾಯಣ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ರವರು ಕುಟುಂಬ ಸಮೇತವಾಗಿ ಆಗಮಿಸಿ, ಶ್ರೀ ಮೂಕಾಂಬಿಕೆಯ ದರ್ಶನವನ್ನು ಮಾಡಿ ಆಶೀರ್ವಾದವನ್ನು ಪಡೆದರು.ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ , ದಿವಾಕರ ಶೆಟ್ಟಿ , ರಾಜೇಶ ಕಾಮತ್ ಉಪಸ್ಥಿತರಿದ್ದರು.