ಶಿಕಾರಿಪುರ ನ್ಯೂಸ್…
ಶಿಕಾರಿಪುರ ಸಾಂಸ್ಕೃತಿಕ ಭವನದಲ್ಲಿ ತಾಲ್ಲೂಕು ಆಡಳಿತ, ಕಾರ್ಮಿಕ ಇಲಾಖೆ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆ ಮತ್ತು ತರಬೇತಿ ಯನ್ನು ಸಂಸದರಾದ ಬಿ ವೈ ರಾಘವೇಂದ್ರ ರವರು ಉದ್ಘಾಟಿಸಿದರು.
ಶೈಕ್ಷಣಿಕ, ಮದುವೆ, ವೈದ್ಯಕೀಯ, ಹೆರಿಗೆ ಧನಸಹಾಯವನ್ನು ಒದಗಿಸಲಾಗಿದೆ.ಕೋವಿಡ್ 1ನೇ ಅಲೆಯಲ್ಲಿ 17263 ಜನರಿಗೆ 5 ಸಾವಿರ ರೂ, 2ನೇ ಅಲೆಯಲ್ಲಿ 3 ಸಾವಿರ ರೂ, 15 ಸಾವಿರ ಕಾರ್ಮಿಕರಿಗೆ ಪುಡ್ ಕಿಟ್, 4500 ಇಮ್ಯೂನಿಟಿ ಕಿಟ್, ಬಾರ್ ಬೆಂಡರ್ ಕಾರ್ಪೇಂಟರ್, ಎಲೆಕ್ನಿಷಿಯನ್,ಪೆಯಿಂಟ್ ಕಾರ್ಮಿಕರಿಗೆ 1312 ಟೂಲ್ ಕಿಟ್ ಗಳನ್ನು ವಿತರಿಸಲಾಗಿದೆ. ತಮ್ಮ ಶಕ್ತಿಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ, 154000 ಸಾವಿರ ನೋಂದಾಯಿತ ಕಾರ್ಮಿಕರು ಇದ್ದು, ಇದರಲ್ಲಿ 11 ವರ್ಗವನ್ನು ಮಾಡಿ ಎಲ್ಲರಿಗೂ ನ್ಯಾಯವೊದಗಿಸಿವ ಕೆಲಸ ನಮ್ಮ ಸರ್ಕಾರದಿಂದ ಅನೇಕ ಯೋಜನೆ ಇದೆ, ಇದನ್ನು ಸೂಕ್ತ ರೀತಿಯಲ್ಲಿ ಉಪಯೋಗ ಪಡೆದುಕೊಳ್ಳಿ ಎಂದು ಸಂಸದರಾದ ಬಿ. ವೈ ರಾಘವೇಂದ್ರ ರವರು ತಿಳಿಸಿದರು.