ಶಿವಮೊಗ್ಗ: ಭಾರತದ ಶ್ರೇಷ್ಠ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಸ್ಮರಣಾರ್ಥ ದೇಶಾದ್ಯಂತ ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ.ಟಿ. ಮಂಜುನಾಥ್ ಹೇಳಿದರು.
ಮೇಜರ್ ಧ್ಯಾನ್‌ಚಂದ್ ಜನ್ಮದಿನ ಹಾಗೂ ರಾಷ್ಟಿçÃಯ ಕ್ರೀಡಾ ದಿನದ ಪ್ರಯುಕ್ತ ಕ್ರೀಡಾ ಭಾರತಿ ಮತ್ತು ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
2012ರಿಂದ ದೇಶದ ವಿವಿಧ ಭಾಗಗಳಲ್ಲಿ ಆಚರಿಸುತ್ತಿದ್ದು, ಭಾರತ ಸರ್ಕಾರವು ರಾಷ್ಟಿçÃಯ ಕ್ರೀಡಾ ದಿನದಂದು ಖೇಲ್ ರತ್ನ ಪ್ರಶಸ್ತಿ, ಅರ್ಜುನ್ ಪ್ರಶಸ್ತಿ, ದ್ರೊಣಾಚಾರ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕ್ರೀಡಾ ದಿನಾಚರಣೆ ಪ್ರಯುಕ್ತ ಶಿವಮೊಗ್ಗ ನಗರದಲ್ಲಿ ಸೈಕಲ್ ಜಾಥಾ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸೈಕಲ್ ಜಾಥಾದಲ್ಲಿ ಕ್ರೀಡಾ ಭಾರತಿ ಅಧ್ಯಕ್ಷ ಸಿ.ಎಂ.ನಾಗರಾಜ್ ಮಾತನಾಡಿದರು. ಶಿವಮೊಗ್ಗ ಸೈಕಲ್ ಕ್ಲಬ್, ಕ್ರೀಡಾ ಭಾರತಿ, ಕ್ರೀಡಾ ಇಲಾಖೆ, ಭಾರತೀಯ ವೈದ್ಯಕೀಯ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.
ಆರೋಗ್ಯಕ್ಕಾಗಿ ಕ್ರೀಡೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸೈಕಲ್ ಜಾಥಾ ವಿನೋಬನಗರದ ಫ್ರೀಡಂ ಪಾರ್ಕ್ನಿಂದ ಆರಂಭವಾಗಿ ನೆಹರು ಕ್ರೀಡಾಂಗಣ, ಮಹಾವೀರ ವೃತ್ತ, ಬಿ.ಎಚ್.ರಸ್ತೆ, ಬಸ್ ನಿಲ್ದಾಣ, ನೆಹರು ರಸ್ತೆ, ದುರ್ಗಿಗುಡಿ ಮುಖಾಂತರ ಸೈಕಲ್ ಜಾಥಾ ಯಶಸ್ವಿಯಾಯಿತು.
ಕ್ರೀಡಾ ಭಾರತಿ ಕಾರ್ಯದರ್ಶಿ ನಾಗಭೂಷಣ್, ರಾಘವೇಂದ್ರ, ವಿಭಾಗ ಸಂಚಾಲಕ ಜಿ.ವಿಜಯ್ ಕುಮಾರ, ಮಹಮದ್ ರಫಿ, ಸೈಕಲ್ ಕ್ಲಬ್‌ನ ಹರಿಶ್ ಪಾಟೀಲ್, ಶ್ರೀಕಾಂತ್, ನಾಗರಾಜ್, ಎಸ್.ಎನ್.ದತ್ತಾತ್ರಿ, ಡಾ. ಶ್ರೀಧರ್, ಸೈಕಲ್ ಲೋಕದ ನರಸಿಂಹಮೂರ್ತಿ, ಹರೀಶ್ ಕಾರ್ಣಿಕ್, ಗಿರೀಶ್ ಪಾಟೀಲ್ ಶೇಖರ್ ಗೌಳೇರ್ ಹಾಗೂ 80 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.