ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ವತಿಯಿಂದ ಗೌರವ ಸ್ವೀಕರಿಸಿದ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಸಹಾಯ ಪ್ರಧಾನ ವ್ಯವಸ್ಥಾಪಕರಾದ ಶ್ರೀಯುತ ವಿ.ಎಮ್.ಮಹೇಶ್ ರವರು ಶಿವಮೊಗ್ಗ ಜಿಲ್ಲೆಯ ಎಲ್ಲಾ ಗ್ರಾಹಕರ, ಸಿಬ್ಬಂದಿಗಳ ಮತ್ತು ನಮ್ಮ ಸಂಸ್ಥೆಯ ಆಡಳಿತ ಮಂಡಳಿಯ ಸಹಕಾರದಿಂದ ಉತ್ತಮ ವ್ಯವಹಾರ ಮಾಡುವ ಮೂಲಕ ನಮ್ಮ ಶಾಖಾ ಕಛೇರಿ ಉತ್ತಮ ಹೆಸರು ಗಳಿಸಿದೆ. ಇಲ್ಲಿಯ ಮಣ್ಣಿನ ಗುಣವೇ ಹಾಗೆ ಎಂದು ಕಾಣುತ್ತದೆ, ಎಲ್ಲಾ ರೀತಿಯ ಸಹಕಾರವನ್ನು ಉದ್ದಿಮೆ ದಾರರಿಂದ ಪಡೆದಿರುವುದರಿಂದ, ಬೇರೆ ಸ್ಥಳಗಳಲ್ಲಿ ಸಲ್ಲಿಸಿದ ಸೇವೆಗಳಿಗಿಂತ ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿರುವುದು ತೃಪ್ತಿ ತಂದಿದೆ ಎಂದರು.

ಶಿವಮೊಗ್ಗದ ಜನತೆ ಅತ್ಯುತ್ಸಾಹದಿಂದ ಯೋಜನೆಗಳನ್ನು ಹಮ್ಮಿಕೊಂಡು, ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ಯಶಸ್ವಿ ಉದ್ದಿಮೆಗಳಾಗಿ ಹೊರ ಹೊಮ್ಮುತ್ತಿದ್ದಾರೆ. ಇದರಿಂದ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಲು ಸಾದ್ಯವಾಯಿತು ಇದಕ್ಕಾಗಿ ನಾನು ಚಿರಋಣಿಯಾಗಿದ್ದೇನೆ ಎಂದರು.
ಯಶಸ್ವಿ ಅಧಿಕಾರಿಗಳನ್ನು ಗೌರವಿಸಲು ನಮಗೆ ಹೆಮ್ಮೆ ಎನಿಸುತ್ತದೆ. ನಮ್ಮ ಜಿಲ್ಲೆಯ ಸಣ್ಣ ಕೈಗಾರಿಕೆಗಳನ್ನು ಅನುಷ್ಠಾನ ಗೊಳಿಸಲು ಶ್ರೀಯುತ ವಿ.ಎಮ್.ಮಹೇಶ್ ರವರು ಅತ್ಯುತ್ತಮ ಸಹಕಾರವನ್ನು ನೀಡಿರುತ್ತಾರೆ. ಹೊಸ ಉದ್ದಿಮೆ ದಾರರಿಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತಿರುವ ಕ.ರಾ.ಹ.ಸಂಸ್ಥೆಯ ಇಂತಹ ಅಧಿಕಾರಿಗಳಿಂದಾಗಿ ರಾಜ್ಯ ಸರ್ಕಾರಕ್ಕು ಉತ್ತಮ ಆದಾಯ ಬರುತ್ತಿದೆ ಹಾಗೂ ಸರ್ಕಾರವು ಉತ್ತಮ ಸಹಾಯದನ ನೀಡುತ್ತಿದೆ ಎಂದು ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷರಾದ ಗೋಪಿನಾಥ್ ನುಡಿದರು.

ಮಾಜಿ ಅಧ್ಯಕ್ಷರಾದ ವಾಸುದೇವ ರವರು ತಾವು ಅಧ್ಯಕ್ಷರಾಗಿದ್ದಾಗ ತಮ್ಮನ್ನು ಬೇಟಿ ಮಾಡಿ, ತಮ್ಮ ಶಾಖಾ ಕಛೇರಿಯನ್ನು ನಮ್ಮ ಕಟ್ಟಡಕ್ಕೆ ವರ್ಗಾಯಿಸುವಾಗ ಇವರ ಸರಳ ವ್ಯಕ್ತಿತ್ವದ ಪರಿಚಯ ವಾಯಿತು. ಅಧಿಕಾರದ ಯಾವುದೇ ಹಮ್ಮು ತೋರದೆ, ತಮ್ಮ ಮನೆಯ ಕಾರ್ಯ ಎನ್ನುವಂತೆ ಎಲ್ಲಾ ಕೆಲಸಗಳ ಮೇಲ್ ವಿಚಾರಣೆ ಮಾಡಿ, ಶಾಖಾ ಕಛೇರಿಗೆ ಉತ್ತಮ ಹೆಸರು ಬರಲು ಕಾರಣ ಕರ್ತರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಾಣಿಜ್ಯ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹಕಾರ್ಯದರ್ಶಿ ಜಿ.ವಿಜಯಕುಮಾರ್, ಚನ್ನವಿರಪ್ಪ, ಎನ್.ಲಿಂಗಪ್ಪ, ಬಿ.ಕೆ.ರವೀಂದ್ರ, ಡಿ.ನಾಗರಾಜ್, ಎಸ್.ಎಸ್.ವಾಗೇಶ್, ಪ್ರಶಾಂತ್, ವಿನಯ್ ಮುಂತಾದವರು ಇದ್ದು ಶುಭಹಾರೈಸಿ ಬೀಳ್ಕೊಟ್ಟರು.

ವರದಿ ಪ್ರಜಾಶಕ್ತಿ…