ಶಿವಮೊಗ್ಗ: ಚಿಟ್ಸ್ ಫಂಡ್ ಡೇ ದಿನಾಚರಣೆ ಪ್ರಯುಕ್ತ ಬೆಂಗಳೂರಿನಲ್ಲಿ ಕರ್ನಾಟಕ ಚಿಟ್ಸರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ ಸಹ್ಯಾದ್ರಿ ಚಿಟ್ಸ್ ಹಾಗೂ ಶಿವಮೊಗ್ಗ ಚಿಟ್ಸ್ ಸಂಸ್ಥೆಯ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಸಹ್ಯಾದ್ರಿ ಚಿಟ್ಸ್ ಸಂಸ್ಥೆ ಸಾಧನೆ ಮತ್ತು ಅತಿ ಹೆಚ್ಚು ಜನಪ್ರತಿನಿಧಿಗಳನ್ನು ಬೆಂಗಳೂರಿನಲ್ಲಿ ನಡೆದ ಜಿಎಸ್‌ಟಿ ಪ್ರತಿಭಟನೆಯಲ್ಲಿ ತೊಡಗಿಸಿ ಹಾಗೂ ಉತ್ತಮ ಸಹಕಾರ ನೀಡಿದ ಶಿವಮೊಗ್ಗದ ಪ್ರತಿನಿಧಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಸಂಘಟನಾ ಚಟುವಟಿಕೆಗಳಲ್ಲಿ ಶಿವಮೊಗ್ಗದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.
ಶಿವಮೊಗ್ಗ ನಗರದ ಪ್ರತಿಷ್ಠಿತ ಚಿಟ್ಸ್ ಕಂಪನಿಗಳಲ್ಲಿ ಒಂದಾದ ಸಹ್ಯಾದ್ರ ಚಿಟ್ಸ್ ಅಧ್ಯಕ್ಷ ಟಿ.ಎಸ್.ಬದರೀನಾಥ್, ವ್ಯವಸ್ಥಾಪಕ ನಿರ್ದೇಶಕ ರಮೇಶ್ ಭಟ್, ನಿರ್ದೇಶಕ ಜಿ.ವಿಜಯ್‌ಕುಮಾರ್ ಹಾಗೂ ಶಿವಮೊಗ್ಗ ಚಿಟ್ಸ್ ಮಂಜುನಾಥ್, ಪ್ರೇಮ್ ಕುಮಾರ್ ಅವರಿಗೆ ಕರ್ನಾಟಕ ಚಿಟ್ಸರ್ಸ್ ಅಸೋಸಿಯೇಷನ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕರ್ನಾಟಕ ಚಿಟ್ಸರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವಲಿಂಗಪ್ಪ ಮಾತನಾಡಿ, ಗ್ರಾಹಕರು ಅನಧಿಕೃತ ಚಿಟ್ಸ್ಗಳಲ್ಲಿ ಹಣ ತೊಡಗಿಸಿ ಮೋಸ ಹೋಗಬಾರದು. ಅಧಿಕೃತ ಚಿಟ್ಸ್ ಕಂಪನಿಗಳಲ್ಲಿ ವ್ಯವಹಾರ ಮಾಡಬೇಕು. ಸಕಾಲದಲ್ಲಿ ಹಣದ ವಹಿವಾಟು ನಡೆಸಬಹುದು. ಸರ್ಕಾರ ಕೂಡ ಇತ್ತೀಚೆಗೆ ವಿಧಿಸಿರುವ ಜಿಎಸ್‌ಟಿ ಹೊರೆ ಕಡಿಮೆ ಮಾಡಬೇಕು. ಸಣ್ಣ ಸಣ್ಣ ಉದ್ಯಮಿಗಳು, ವ್ಯಾಪಾರಸ್ಥರು ಚಿಟ್ಸ್ನಲ್ಲಿ ತೊಡಗಿಸಿಕೊಳ್ಳಲು ತೊಂದರೆ ಆಗದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಪ್ರಮುಖರಾದ ವಿಜಯಕುಮಾರ ಜೆ.ಸಿ., ಗೋವಿಂದ ಕುಟ್ಟಿ, ಸುರೇಶ್, ನರೇಂದ್ರ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.