ಸಕ್ಷಮ ಶಿವಮೊಗ್ಗ ಜಿಲ್ಲಾ ಘಟಕ,ಮತ್ತು ಟೆಕ್ಸಾಸ್ ಇನ್ಸ್ಟೂಮೆಂಟ್ಸ್ ಬೆಂಗಳೂರು ಇವರ ಸಹಯೋಗದಲ್ಲಿ ಅರ್ಹ ವಿಶೇಷಚೇತನರ ಸೇವಾ ಸಂಸ್ಥೆಗಳಿಗೆ ವೈದ್ಯಕೀಯ ಮತ್ತು ಕಲಿಕಾ ಸಲಕರಣೆಗಳ ವಿತರಣಾ ಕಾರ್ಯಕ್ರಮ ಡಾ. ಪ್ರಶಾಂತ್ ಇಸ್ಲೂರ್ ಉದ್ಘಾಟಿಸಿದರು.
ವಿಶೇಷಚೇತನರ ಫಲಾನುಭವಿ ಸಂಸ್ಥೆಗಳಾದ ಮುಕುಂದ(ಹಿರಿಯರ ನಾಗರೀಕರ ಆರೈಕೆ ಕೇಂದ್ರ) ಶಿವಮೊಗ್ಗ,ಮನೋಸ್ಮರ್ತಿ(ಬುದ್ಧಿಮಾಂದ್ಯ ಮಕ್ಕಳ ತರಬೇತಿ ಕೇಂದ್ರ) ಶಿವಮೊಗ್ಗ,ಸರ್ಜೀ ಇನ್ಸ್ಟಿಟ್ಯೂಟ್(ವಿಶೇಷಚೇತನರ ಮಕ್ಕಳ ತರಬೇತಿ ಕೇಂದ್ರ)ಶಿವಮೊಗ್ಗ, ಶಾರದಾ ದೇವಿ ಅಂಧರ ವಿಕಾಸ ಕೇಂದ್ರ ಸಹಯೋಗದಲ್ಲಿ ಶಾರದಾ ಅಂದರ ವಿಕಾಸ ಕೇಂದ್ರಕ್ಕೆ ಮಕ್ಕಳ ಉಪಯೋಗಿಸುವ ವಸ್ತುಗಳನ್ನು ನೀಡಿದರು.
1).ಆಕ್ಸಿಜನ್ ಕಾನ್ಸಟೇಟರ್
2).ಆಕ್ಸಿಫಲ್ ಮೀಟರ್
3).ಬುದ್ಧಿಮಾಂದ್ಯ ಮಕ್ಕಳಿಗೆ ವೈದ್ಯಕೀಯ ಸಲಕರಣೆಗಳು
4).ಬುದ್ಧಿಮಾಂದ್ಯ ಮಕ್ಕಳಿಗೆ ಬ್ರೈನ್ ಲಿಪಿ ಕಲಿಕಾ ಸಲಕರಣೆಗಳು
5).ಅಂಧ ವಿಶೇಷಚೇತನರ ಮಕ್ಕಳಿಗೆ ವಾಕಿಂಗ್ ಸ್ಟೀಕ್ ಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಪ್ರಶಾಂತ್ ಇಸ್ಲೂರು ಅಧ್ಯಕ್ಷರು ಸಕ್ಷಮ ಶಿವಮೊಗ್ಗ ಮಾತನಾಡಿ ವಿಶೇಷಚೇತನರಿಗಾಯೇ ಸಮರ್ಪೀತವಾಗಿ ಇರುವಂತಹ ಈ ಸಕ್ಷಮ ಸಂಸ್ಥೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ವಿಶೇಷಚೇತನರ ಏಳಿಗೆಗಾಗಿ ಬೆಳಸಿಕೊಂಡು ಬಂದಿದೆ. ವಿಶೇಷಚೇತನರಿಗೆ ಈ ಸಲಕರಣೆಗಳು ಅತೀ ಮುಖ್ಯವಾಗಿರುವುದರಿಂದ ಇದಕ್ಕೆ ಸಂಬಂಧಿಸಿದಂತ ಸಂಸ್ಥೆಗಳಿಗೆ ನೀಡಲಾಗಿದೆ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಫಲಾನುಭವಿ ಸಂಸ್ಥೆಗಳು ಇದರ ಉಪಯೋಗಳನ್ನು ವಿವರಿಸುವುದರ ಜೊತೆಯಲ್ಲಿ ಅವರ ಖುಷಿಯನ್ನು ಹಂಚಿಕೊಂಡರು.
ಮುಖ್ಯ ಅತಿಥಿಗಳಾಗಿ ಅಮೃತಾದಾಸ್ ಹಾಗೂ ಮೃಗಾಂಕ್ ಚಕ್ರವರ್ತಿ ಅಧಿಕಾರಿಗಳು ಟೆಕ್ಸಾಸ್ ಇನ್ಸ್ಟೂಮೆಂಟ್ಸ್ ಬೆಂಗಳೂರು ಇವರುಗಳು ಮಾತಾಡಿ ಈ ಸಲಕರಣೆಗಳು ಸಿಗಬೇಕಾದ ಸಂಸ್ಥೆಗಳಿಗೆ ದೊರಕಿರುವುದು ತುಂಬಾ ಖುಷಿಯಾಗಿದೆ. ಇದನ್ನು ಸರಿಯಾಗಿ ಉಪಯೋಗಿಸಿಕೊಂಡೋಗಲು ತಿಳಿಸಿದರು.
ಡಾ.ಭಗತ್ ದಂತ ವೈದ್ಯರು. ಶಿವಮೊಗ್ಗ ಪಾಲ್ಗೊಂಡಿದ್ದರು.
ಕುಮಾರಶಾಸ್ತ್ರಿ ಕಾರ್ಯದರ್ಶಿ ಸಕ್ಷಮ ಶಿವಮೊಗ್ಗ, ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ. ಶಿವಮೊಗ್ಗ ಹಾಗೂ ಸಕ್ಷಮದ ಪದಾಧಿಕಾರಿಗಳು ಉಪಸ್ಥಿತರಿದ್ದರು.