ಸಮುದಾಯವನ್ನು ಹೇಗೆ ತಲುಪಬಹುದು ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಹೇಗೆ ತೋಡಗಿಸಕೊಳ್ಳಬಹುದು, ದೇಶಕ್ಕೆ ಯಾವ ರೀತಿಯ ಸೇವೆ ಸಲ್ಲಿಸಬಹುದು ಎಂಬುದನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಕಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಅಧ್ಯಕ್ಷರು ಡಾ|| ಆರ್. ಸೆಲ್ವಮಣಿ ರವರು ಇಂದು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸ್ಕೌಟ್ ಭವನದಲ್ಲಿ ಹಮ್ಮೀಕೊಂಡಿದ್ದ ಜಿಲ್ಲಾ ಮಟ್ಟದ ರೋವರ್ ರೇಂಜರ್ ಗಳ ನಿಪುಣ್ ಪರೀಕ್ಷಾ ಶಿಬಿರದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಇವತ್ತಿನ ಸಂದರ್ಭದಲ್ಲಿ ಮೊಬೈಲ್ ಅಂತಹ ತಾಂತ್ರಿಕತೆಗಳು ಬಹಳ ಮುಖ್ಯ. ಆದರೆ ಅದರ ಬಳಕೆ ಹೇಗೆ ಎಂಬುದರ ಬಗ್ಗೆ ಕೂಡ ಅರಿವು ಇರಬೇಕು ಅದರ ದುರ್ಬಳಕೆ ಆಗದಂತೆ ನೋಡಿಕೊಂಡು ಅದರ ಉಪಯೋಗದ ಮೇಲೆ ತಮ್ಮ ಭವಿಷ್ಯವು ನಿರ್ದಾರವಾಗುತ್ತದೆ ಎಂದು ತಿಳಿಸುತ್ತಾ, ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಸಾಮಾಜಿಕ ತಿಳುವಳಿಕೆ ಸಿಗುತ್ತದೆ, ಜೀವನದಲ್ಲಿ ಒಂದು ಗುರಿ ಇಟ್ಟು ಯೋಜನೆ ರೊಪಿಸಿಕೊಳ್ಳಿ ಎಂದು ಕರೆ ನೀಡಿದರು.
ದೇಶದಲ್ಲಿ ವರ್ಷಕ್ಕೆ ೧೨ ಲಕ್ಷ ಜನ ಯುಪಿಎಸ್‌ಇ ಪರೀಕ್ಷೆ ಬರೆಯುತ್ತಾರೆ ಆದರೆ ಅದರಲ್ಲಿ ಕೇವಲ ೧೦೦೦ ಜನ ಮಾತ್ರ ಆಯ್ಕೆ ಆಗುತ್ತಾರೆ ಅದರಲ್ಲೂ ಕೇವಲ ೧೫೦ ಜನ ಮಾತ್ರ ಐಎಎಸ್ ಆಗುತ್ತಾರೆ. ೧೫೦ ಜನ ಐಪಿಎಸ್ ಆಗುತ್ತಾರೆ. ಈಗ ಸೌಲಭ್ಯಗಳು ಹೆಚ್ಚಾಗಿದ್ದು ಅದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ಮುಖ್ಯ ಅತಿಥಿ ಡಾ|| ಧನಂಜಯ ಸರ್ಜಿ ಮಾತನಾಡಿ ಓದು ಕೆಲಸ ಕೊಟ್ಟರೆ ಬುದ್ಧಿ ದೇಶವನ್ನೆ ಆಳುತ್ತದೆ ಆದರೆ ಶ್ರಮ ಪಡುವುದು ಅತಿ ಮುಖ್ಯ ಎಲ್ಲರೂ ೪ ‘ಡಿ’ಯನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕು, ಮೊದಲನೆಯದು ಕನಸು (ಡ್ರಿಮ್), ಎರಡನೆಯದು ನಿರ್ಧರಿಸಿ(ಡಿಸೈಡ್) ಮೊರನೆಯದು ಘೋಸಿಸಿ (ಡಿಕ್ಲೆರ್), ನಾಲ್ಕನೆಯದು ತೊಡಗಿಸಿಕೊಳ್ಳಿ (ಡೆಡಿಕೆಟ್) ಈ ನಾಲ್ಕು ಡಿ ಗಳನ್ನು ಸರಿಯಾಗಿ ಅನುಸರಿಸಿದಾಗ ಯಶಸ್ಸು ಸಾದ್ಯ ಎಂದರು. ಸಮಾಜಕ್ಕೆ ಎನಾದರೂ ಕೊಡಬೇಕೆನ್ನುವ ಮನಸ್ಸು ಬಂದಾಗ ಮಾತ್ರ ಜೀವಿತ ಸ್ವರ್ಗ ಆಗುತ್ತದೆ ಎಂದು ತಿಳಿಸುತ್ತಾ ಆರೋಗ್ಯದ ಬಗ್ಗೆಯು, ಎಲ್ಲರೂ ಬೂಸ್ಟರ್ ಡೋಸ್‌ನ್ನು ಎಲ್ಲರೂ ಹಾಕಿಸಿಕೊಳ್ಳಿ ಎಂದು ತಿಳಿಸುತ್ತಾ ಜ್ನಾಪನಾ ಶಕ್ತಿಯನ್ನು ಬೆಳೆಸಿಕೊಳ್ಳುವ ವಿಧಾನದ ಬಗ್ಗೆ ವಿವರಣೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ.ರಮೇಶಶಾಸ್ತಿç ರವರು ಮಾತನಾಡುತ್ತಾ ಪುಸ್ತಕದ ಕಲಿಕೆಯಿಂದ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯವಿಲ,್ಲ ಜೀವನದ ಪ್ರತಿಯೊಂದು ಕ್ಷಣವನ್ನು ಸದುಪಯೋಗ ಮಾಡಿಕೊಂಡು ನಮ್ಮಲ್ಲಿ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಮಕ್ಕಳು ಪರಿಸರದೊಂದಿಗೆ ಬೆರೆತು ಕಲಿಯಬೇಕು, ಸಮಾಜಸೇವೆ ಮತ್ತು ದೇಶ ಸೇವೆಯೇ ಮುಖ್ಯ ಧ್ಯೇಯವಾಗಿರಬೇಕು ಇದರ ಬಗ್ಗೆ ಇಬ್ಬರು ಮುಖ್ಯ ಅತಿಥಿಗಳು ನಿಮ್ಮೊಂದಿಗೆ ಮಾತನಾಡಿ ಚೆನ್ನಾಗಿ ಹೇಳಿರುತ್ತಾರೆ ಅದರಂತೆ ತಾವು ನಡೆದುಕೊಳ್ಳಬೇಕೆಂದು ಕರೆ ನೀಡಿದರು.

ಸಮಾರಂಭಕ್ಕೆ ಜಿಲ್ಲಾ ಆಯುಕ್ತರುಗಳಾದ ಶ್ರೀ ಕೆ.ಪಿ.ಬಿಂದುಕುಮಾರ, ಶ್ರೀಮತಿ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಖಜಾಂಚಿ ಶ್ರೀ ಚೂಡಾಮಣಿ ಈ ಪವಾರ, ಜಿಲ್ಲಾ ಕಾರ್ಯದರ್ಶಿ ಶ್ರೀ ಹೆಚ್. ಪರಮೇಶ್ವರ್, ರೋವರ್ ನಾಯಕ ಎ.ವಿ.ರಾಜೇಶ, ಸಹಾಯಕರಾಗಿ ಹೆಚ್.ಶಿವಶಂಕರ್, ಜಿ. ಗಣಪತಿ, ಕಾತ್ಯಾಯಿನಿ, ಕಾಲೇಜಿನ ರೋವರ್ ಲೀಡರ್ ಹಾಗೂ ರೇಂಜರ್ ಲೀಡರ್‌ಗಳು ಉಪಸ್ಥಿತರಿದ್ದರು.
ಈ ಶಿಬಿರದ ಸಂಘಟನೆಯನ್ನು ಹಾಗೂ ರೇಂಜರ್ ನಾಯಕರಾಗಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ ರವರು ಕಾರ್ಯನಿರ್ವಹಿಸಿದ್ದರು.

ವರದಿ ಪ್ರಜಾಶಕ್ತಿ…