ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಒಂದು ಕಾನೂನು, ಸ್ವಾಮೀಜಿಗೆ ಒಂದು ಕಾನೂನು ಇದೆಯೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಸರ್ಕಾರ ತಮ್ಮ ಸಚಿವರನ್ನು ರಕ್ಷಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಎಸ್‌ಐಟಿ ರಚನೆ ಮಾಡಿ, ಅವರನ್ನು ನಿರಪರಾಧಿ ಎಂದು ತೀರ್ಮಾನಿಸಿತು. ಆದರೆ ಸ್ವಾಮೀಜಿ ವಿಚಾರದಲ್ಲಿ ಅವರನ್ನು ನೇರವನ್ನು ಬಂಧಿಸಿತು.ಸ್ವಾಮೀಜಿ ಅವರು ಮಾಡಿದ್ದು ತಪ್ಪೆ ಆದರೆ ರಾಜ್ಯದಲ್ಲಿ ಸಚಿವರಿಗೊಂದು ಕಾನೂನು, ಸ್ವಾಮೀಜಿಗೊಂದು ಕಾನೂನು ಇದೆಯಾ ಎಂದು ಪ್ರಶ್ನಿಸಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ರಚನೆ ಮಾಡದೆ ಸ್ಥಳೀಯ ಪೊಲೀಸರಿಂದ ತನಿಖೆ ಮಾಡಿಸಿದರು. ಬಿ ರಿಪೋರ್ಟ್ ಕೊಡಿಸಿದರು. ಈಗ ಈಶ್ವರಪ್ಪ ಅವರು ಹಿಂದುತ್ವ ಬಗ್ಗೆ ಭಾಷಣ ಮಾಡುತ್ತಿದ್ದಾರೆ.
ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರು ಎಂದು ಅವರನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆ. ಪಕ್ಷ ಉಳಿಯಬೇಕು, ಅಧಿಕಾರ ಬೇಕು, ಹಣ ಬೇಕು ಎಂದು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ರಮೇಶ್ ಶಂಕರ್ ಘಟ್ಟ , ವೈಎಚ್ ನಾಗರಾಜ್ , ಮಂಜುನಾಥ್ ಮತ್ತಿತರು ಉಪಸ್ಥಿತರಿದ್ದರು.